ಸರ್ಕಾರಿ ಆಸ್ಪತ್ರೆಗೆ ಸಚಿವರ ಭೇಟಿ

ಸೋಮವಾರ, ಮೇ 20, 2019
30 °C

ಸರ್ಕಾರಿ ಆಸ್ಪತ್ರೆಗೆ ಸಚಿವರ ಭೇಟಿ

Published:
Updated:

ಚನ್ನಪಟ್ಟಣ: ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದೇ ಸರ್ಕಾರಿ ಆಸ್ಪತ್ರೆ ಗಬ್ಬೆದ್ದು ನಾರುತ್ತಿದೆ ಎಂದು ಅಂತಹ ಟೆಂಡರ್‌ದಾರರ ಟೆಂಡರ್‌ಗಳನ್ನು ರದ್ದುಪಡಿಸಿ ಎಂದು ಸಚಿವ ಸಿ.ಪಿ. ಯೋಗೀಶ್ವರ್ ಅಧಿಕಾರಿಗಳಿಗೆ ಶನಿವಾರ ತಾಕೀತು ಮಾಡಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ಯೆಲ್ಲಿ ಸ್ಕಾನಿಂಗ್ ಯಂತ್ರ ಉದ್ಘಾಟಿಸಿದ ನಂತರ ಆರೋಗ್ಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿ ಟೆಂಡರ್ ರದ್ದುಪಡಿಸಿಲು ತಾಲ್ಲೂಕು ತಹಶೀಲ್ದಾರ್ ಅರುಣಪ್ರಭ ಮತ್ತು ಆರೋಗ್ಯಾಧಿಕಾರಿ ಧನ್ಯಕುಮಾರ್‌ಗೆ ಆದೇಶ ನೀಡಿದರು.ಕಳೆದ ಹಲವು ತಿಂಗಳುಗಳಿಂದ ಆಸ್ಪತ್ರೆಯ ಶುಚಿತ್ವ ಬಗ್ಗೆ ದೂರು ಕೇಳಿ ಬರುತ್ತಿವೆ, ಇದರಿಂದ ರೋಗಿಗಳ ಪಾಡು ಏನಾಗಬಾರದು ಅಧಿಕಾರಗಳನ್ನು ಕೇಳಿದರು. ಆಸ್ಪತ್ರೆಗೆ ಬೇಕಾದ ಸೌಲಭ್ಯಗಳು ಮತ್ತು ಬಂದಿರುವ ಯಂತ್ರಗಳ ಬಗ್ಗೆ ಮತ್ತು ವಿವಿಧ ಅಭಿವೃದ್ದಿ ಕಾರ್ಯಗಳಿಗೆ ಖರ್ಚು ಮಾಡಬೇಕಾದ ಹಣಕಾಸಿನ ಬಗ್ಗೆ ಆರೋಗ್ಯ ಸಮಿತಿ ಸಭೆ ಚರ್ಚಿಸಿತು.ವಾರ್ಡ್‌ಗಳಿಗೆ ಭೇಟಿ ನೀಡಿ ರೋಗಿಗಳ ಬಳಿ ಆಸ್ಪತ್ರೆಯ ಬಗ್ಗೆ ಮತ್ತು ವೈದ್ಯರ ನಡವಳಿಕೆಯ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡರು.ಡಿವೈಎಸ್ಪಿ, ಸಿದ್ದಪ್ಪ, ಸಬ್‌ಇನ್ಸ್‌ಪೆಕ್ಟರ್ ನಂದೀಶ್, ಆರೋಗ್ಯ ಸಮಿತಿ ಸದಸ್ಯರಾದ ಕಮಲಮ್ಮ, ಸದಸ್ಯರಾದ ಗಂಗಾಧರ್, ನಗರ ಬಿಜೆಪಿ ಅಧ್ಯಕ್ಷ ವಿಷಕಂಠು ಮತ್ತಿತರರಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry