ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತನಿಧಿ ಘಟಕ:ಚಿಂತನೆ

7

ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತನಿಧಿ ಘಟಕ:ಚಿಂತನೆ

Published:
Updated:

ನರಸಿಂಹರಾಜಪುರ: ರಕ್ತದಾನ ಮಾಡುವವರ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದರಿಂದ ಪ್ರೋತ್ಸಾಹಿಸಲು  ಎನ್.ಆರ್.ಪುರ ಮತ್ತು ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ನಿಧಿ ಕೇಂದ್ರ ಸ್ಥಾಪಿಸುವ ಉದ್ದೇಶವಿದೆ. ಇದು ಸಾಧ್ಯವಾಗದಿದ್ದರೆ ರಕ್ತ ಶೇಖರಣ ಘಟಕವನ್ನಾದರೂ ಸ್ಥಾಪಿಸಲು ಪ್ರಯತ್ನ ನಡೆಸಲಾಗುವುದು ಎಂದು ಶಾಸಕ ಡಿ.ಎನ್.ಜೀವರಾಜ್ ತಿಳಿಸಿದರು.ಇಲ್ಲಿನ ದೀಪ್ತಿ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ಪ್ರೇರಣ ಗೆಳೆಯರ  ಉದ್ಘಾಟಿಸಿ ಅವರು ಮಾತನಾಡಿದರು.ರಕ್ತದಾನ ಮಾಡುವದಕ್ಕೆ ಆತ್ಮ ಸ್ಥೈರ್ಯ ಅವಶ್ಯಕ. ಈ ಭಾಗದಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬರುವ ಜೂನ್ ಒಳಗೆ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿ ನಡೆಸಲು ಪ್ರಯತ್ನ ಮಾಡಲಾಗುವುದು ಎಂದರು. ರಕ್ತದಾನ ಮಾಡುವ ಉದ್ದೇಶದಿಂದಲೇ ಸಂಘ ಸ್ಥಾಪಿಸಿರುವ ಯುವಕರ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.ಪ್ರಾಸ್ತಾವಿಕ ಮತನಾಡಿದ ಪ್ರೇರಣ ಬಳಗದ ಸದಸ್ಯ ಕೆ.ಪಿ.ಸುಜಿತ್ ಮಂಗ ಳೂರು, ಶಿವಮೊಗ್ಗ, ತೀರ್ಥಹಳ್ಳಿ, ಎನ್.ಆರ್.ಪುರ ಮುಂತಾದ ಕಡೆಗಳಲ್ಲಿನ ಆಸಕ್ತ ರಕ್ತದಾನಿಗಳು ಸೇರಿ ಸರ್ಕಾರೇತರ ಸಂಸ್ಥೆ ಸ್ಥಾಪಿಸಲಾಗಿದೆ.ಯುವ ಜನಾಂಗದಲ್ಲಿ ರಕ್ತದಾನದ ಮಹತ್ವ ತಿಳಿಸುವುದು.ಇದರ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು, ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ನೇರವಾಗಿ ರಕ್ತದಾನ ಮಾಡುವುದು ಹಾಗೂ ಗ್ರಾಮೀಣ ಭಾಗದಲ್ಲಿ ಆರೋಗ್ಯ ಅರಿವು ಮೂಡಿಸುವುದು ಸಂಘದ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೇರಣ ಬಳಗದ ಸದಸ್ಯ ಎಲಿಯಾಸ್ ವಹಿಸಿದ್ದರು.ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಡಿ.ರಾಜೇಗೌಡ, ಕನ್ನಡ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪಿ.ಜೆ.ಅಂಟೋನಿ, ಜಿಲ್ಲಾಪಂಚಾಯಿತಿ ಸದಸ್ಯೆ ಸುಜಾತ, ನಾಗಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ಜೆ.ಜೇಮ್ಸ, ತಾಲ್ಲೂಕು ಪಂಚಾಯಿತಿ ಸದಸ್ಯ ಜೆ.ಜಿ.ನಾಗರಾಜ್, ಶಿವಮೊಗ್ಗ ವಾಲಿಬಾಲ್ ಅಸೋಶಿಯೇಷನ್‌ನ ಕಾರ್ಯದರ್ಶಿ ಕೆ.ಜಿ.ಶೆಟ್ಟಿ, ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಕೆ.ಪಿ.ಸಂಪತ್‌ಕುಮಾರ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಇ.ಸಿ.ಜೋಯಿ, ಪಟ್ಟಣ ಪಂಚಾಯಿತಿ ಸದಸ್ಯ ಬಿ.ಎಸ್.ಆಶೀಶ್‌ಕುಮಾರ್, ಕಾಂಗ್ರೆಸ್ ಮುಖಂಡ ಸಚ್ಚಿನ್‌ಮೀಗಾ, ಲಿಟ್ಲ್‌ಫ್ಲವರ್ ಸ್ಪೋರ್ಟ್ಸ್‌ಕ್ಲಬ್‌ನ ಅಧ್ಯಕ್ಷ ಕೆ.ಜೆ.ಎಲಿಯಾಸ್, ಫ್ಲವರ್‌ರೂರಲ್ ಕ್ಲಬ್ ಅಧ್ಯಕ್ಷ ಕೆ.ಪಿ.ಅಂಟೋನಿ, ಶಿವಮೊಗ್ಗ ಮದರ್ ಸಂಸ್ಥೆಯ ಕಾರ್ಯದರ್ಶಿ ಸುದರ್ಶನ್, ಮಾಸ್ ಸಂಸ್ಥೆಯ ವಿರುಪಾಕ್ಷ, ವಾಲಿಬಾಲ್ ಆಟಗಾರ ಬಾಬಾಖಾನ್, ಸುಬೀಕ್ಷ, ಕೆ.ಅನಿಲ್, ಐ.ಎಂ.ರಾಜೀವ್ ಇದ್ದರು.ಇದೇ ಸಂದರ್ಭದಲ್ಲಿ 41ಬಾರಿ ರಕ್ತದಾನ ಮಾಡಿದ ಸೋಷಿಯಲ್‌ವೆಲ್‌ಫೇರ್ ಸೊಸೈಟಿಯ ಗೀತಾಮೈಕಲ್ ಹಾಗೂ 34 ಬಾರಿ ರಕ್ತದಾನ ಮಾಡಿದ ಮಂಗಳೂರಿನ ದಿವಾಕರ್ ಪೂಜಾರಿ ಅವರನ್ನ ಸನ್ಮಾನಿಸಲಾಯಿತು.   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry