ಸರ್ಕಾರಿ ಆಸ್ಪತ್ರೆ ಮಂಜೂರು: ಭರವಸೆ

ಭಾನುವಾರ, ಮೇ 26, 2019
26 °C

ಸರ್ಕಾರಿ ಆಸ್ಪತ್ರೆ ಮಂಜೂರು: ಭರವಸೆ

Published:
Updated:

ಯಲಹಂಕ: ನ್ಯಾಯಾಂಗ ಬಡಾವಣೆಗೆ ಸರ್ಕಾರಿ ಆಸ್ಪತ್ರೆ ಮಂಜೂರು ಮಾಡಿಸುವ ಸಂಬಂಧ ಸರ್ಕಾರವನ್ನು ಕೋರಲಾಗುವುದು ಎಂದು ವಿಧಾನ ಪರಿಷತ್‌ನ ಸಭಾಪತಿ ಡಿ.ಎಚ್. ಶಂಕರಮೂರ್ತಿ ಭರವಸೆ ನೀಡಿದರು.ನ್ಯಾಯಾಂಗ ಬಡಾವಣೆಯ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕರ್ನಾಟಕ ರಾಜ್ಯ ನ್ಯಾಯಾಂಗ ನೌಕರರ ಗೃಹ ನಿರ್ಮಾಣ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಸಂಘದ ಪ್ರಧಾನ ಪೋಷಕ ಎಚ್.ಎಂ.ಭಾರತೇಶ ಮಾತನಾಡಿ, ಮೂರ್ತಿ ಅವರ ಸೇವಾ ಕಾರ್ಯ ಶ್ಲಾಘಿಸಿದರು. ತಮ್ಮ ಜೀವನದುದ್ದಕ್ಕೂ ಹಲವಾರು ರಂಗಗಳಲ್ಲಿ ಸಾಮಾಜಿಕ ಸೇವಾ ಕಾರ್ಯ ಕೈಗೊಳ್ಳುವ ಮೂಲಕ  ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry