ಸೋಮವಾರ, ಮೇ 10, 2021
25 °C

ಸರ್ಕಾರಿ ಕಟ್ಟಡ ನಿರ್ಲಕ್ಷ: ಅನುದಾನ ವ್ಯರ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇಡಂ:ರಾಜ್ಯ ಸರ್ಕಾರ ಗ್ರಾಮಗಳ ಅಭಿವೃದ್ದಿಯಿಂದ ನಾಡಿನ ಅಭಿವೃದ್ದಿ ಆಗಲು ಸಾಧ್ಯ ಎಂಬ ದೃಷ್ಠಿಕೋನದಿಂದ ಏನೆಲ್ಲ ಯೋಜನೆಗಳನ್ನು ರೂಪಿಸಿ ಅದಕ್ಕೆ ಅನುದಾನ ಬಿಡುಗಡೆ ಮಾಡುತ್ತದೆ. ಆದರೆ ಅದು ಸದ್ಬಳಕೆ ಆಗಿ ಜನರಿಗೆ ಯೋಜನೆಗಳ ಲಾಭ ಸಿಗುವುದು ದೂರದ ಮಾತಾಗಿದೆ.ತಾಲ್ಲೂಕಿನ ಮುಧೋಳವು ಗ್ರಾಮದ ಸುತ್ತಲಿನ 35 ಕ್ಕೂ ಹೆಚ್ಚು ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿದೆ. ಹಿಂದುಳಿದ ಭಾಗ ಅದರಲ್ಲೂ ಆಂಧ್ರಗಡಿ ಭಾಗಕ್ಕೆ ಹೊಂದಿಕೊಂಡಿರುವ ಹಿನ್ನಲೆಯಲ್ಲಿ ಶೈಕ್ಷಣಿಕವಾಗಿ ಮುಂದುವರೆಯಲು  ಪೂರಕವಾಗಿ ರಾಜ್ಯ ಸರ್ಕಾರ 32 ಲಕ್ಷಕ್ಕೂ ಅಧಿಕ ಸರ್ಕಾರಿ ಕಿರಿಯ ಮಹಾವಿದ್ಯಾಲಯ ನಿರ್ಮಾಣಕ್ಕೆ ಅನುಮೋದನೆ ನೀಡಿದೆ.

ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರೆತೆ ಒಂದಡೆಯಾದರೆ ಗ್ರಾಮಸ್ಥರು ತಮ್ಮ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಣ ಕ್ಷೇತ್ರಗಳ ಅಭಿವೃದ್ದಿಗೆ ಸಹಕರಿಸಬೇಕಾದದ್ದು ಅಗತ್ಯ ಎಂಬುದಕ್ಕೆ ಮುಧೋಳ ಗ್ರಾಮದ ಕಿರಿಯ ಮಹಾವಿದ್ಯಾಲಯದ ಕಟ್ಟಡವೇ ಸಾಕ್ಷಿ. ಕಳಪೆ ಮಟ್ಟದ ಕಾಮಗಾರಿ ಒಂದಡೆಯಾದರೆ, ಅಪೂರ್ಣಗೊಂಡ ಕಟ್ಟಡ ತರಗತಿಗಳನ್ನು ನಡೆಸುವುದು ದುಸ್ಥರವಾಗಿದೆ. ಕಿಟಕಿ, ಬಾಗಿಲು ಈವರೆಗೂ ಅಳವಡಿಸಿಲ್ಲ. ಮೆಟ್ಟಲುಗಳಿಗೆ ಹಾಸುಬಂಡೆ ಇಲ್ಲ. ಎ್ಲ್ಲಲೆಡೆಯೂ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ.  ಕಟ್ಟಡದ ಮುಂಭಾಗ ಎಡ ಭಾಗಕ್ಕೆ ಸರ್ಕಾರಿ ಜಾಲಿ ಗಿಡಗಳು ಬೆಳೆದಿವೆ.

ಕಸ-ಕಡ್ಡಿ ಎದ್ದು ಕಾಣುತ್ತದೆ. ಕೊಠಡಿ ಗೂಡಿಸುವುದು ದೂರದ ಮಾತು. ಪರೀಕ್ಷಾ ಕೇಂದ್ರವಾಗಿರುವ ಆವರಣದ ಕೊಠಡಿಯಲ್ಲಿ ಸತ್ತ `ಅಳಿಲು~ಗಳ ಓಡಾಟದ ನಡುವೆ ಮಕ್ಕಳು ಪರೀಕ್ಷೆ ಬರೆಯುವುದು ಸಾಮಾನ್ಯವಾಗಿದೆ. ಇದಲ್ಲದೇ ನೂತನ ಕಟ್ಟಡದ ತರಗತಿಗಳಲ್ಲಿ ಉಪನ್ಯಾಸಕರು ಪಾಠ ಹೇಳಲು ಕಪ್ಪು ಹಲಗೆ ಮುಂದಿನ ಕಟ್ಟೆ ಅರ್ಧಕ್ಕೆ ನಿಂತಿದೆ. ಪ್ರತಿ ಮೂಲೆಯಲ್ಲಿ ಕಸದ ಮತ್ತು ಕಲ್ಲಿನ ಚೂರುಗಳ ರಾಶಿ ಎದ್ದು ಕಾಣುವಂತಿತ್ತು.

ಸರ್ಕಾರ ಅನುದಾನದಲ್ಲಿ ನಿರ್ಮಾಣವಾಗಿರುವ ಕಟ್ಟಡಗಳು ನಿರ್ಲಕ್ಷಕ್ಕೆ ಒಳಗಾಗಿವೆ. ತಾಲ್ಲೂಕಿನ ರಂಜೋಳ ಗ್ರಾಮದಲ್ಲಿ ನಿರ್ಮಿಸಿರುವ ಆಶ್ರಯ ಮನೆಗಳು ವಿನಾಶದ ಅಂಚಿನಲ್ಲಿದ್ದು ಸುತ್ತಲೂ ಸರ್ಕಾರಿ ಜಾಲಿ ಗಿಡಗಳು ಬೆಳೆದಿವೆ.

 ಫಲಾನುಭವಿಗಳು ವಾಸಿಸದ  ಕಾರಣ ಇಲ್ಲಿ ಅನುದಾನ ವ್ಯರ್ಥ ಆಗಿರುವುದರಲ್ಲಿ ಎರಡು ಮಾತಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗ್ರಾಮಸ್ಥರು ಸರ್ಕಾರದ ಅನುದಾನ ವ್ಯರ್ಥ ಆಗದಂತೆ ವಿಶೇಷ ಗಮನ ಹರಿಸಿಬೇಕಿದೆ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.