ಮಂಗಳವಾರ, ಏಪ್ರಿಲ್ 20, 2021
24 °C

ಸರ್ಕಾರಿ ಕಲ್ಯಾಣ ಮಂಟಪ ಸೇವೆಗೆ ಮುಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ಪಟ್ಟಣದಲ್ಲಿ 6 ವರ್ಷಗಳ ಹಿಂದೆ ನಿರ್ಮಿಸಿರುವ ಸರ್ಕಾರಿ ಸ್ವಾಮ್ಯದ ಕಲ್ಯಾಣ ಮಂಟಪವನ್ನು ಭಾನುವಾರದಿಂದ ಸೇವೆಗೆ ಮುಕ್ತಗೊಳಿಸಲಾಗಿದೆ.

 

ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ, ತಹಶೀಲ್ದಾರ್ ಅರುಳ್‌ಕುಮಾರ್, ಶ್ರೀರಂಗನಾಥಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ವಿಜಯಸಾರಥಿ, ಕಾರ್ಯನಿರ್ವಾಹಕ ಅಧಿಕಾರಿ ಗಂಗಯ್ಯ ನೇತೃತ್ವದಲ್ಲಿ ಭಾನುವಾರ ಕಲ್ಯಾಣ ಮಂಟಪದಲ್ಲಿ ಸುದರ್ಶನ ಹೋಮ ಇತರ ಪೂಜಾ ವಿಧಿ ವಿಧಾನಗಳು ನಡೆದವು. ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ 200 ಮೀಟರ್ ಅಂತರದಲ್ಲಿ ಕಲ್ಯಾಣ ಮಂಟಪ ಇದ್ದು, ಬಡ ಜನರ ಮದುವೆ ಇತರ ಕಾರ್ಯಗಳಿಗೆ ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು.

ಸದ್ಯ ಒಂದು ಕಾರ್ಯಕ್ರಮಕ್ಕೆ ರೂ.7 ಸಾವಿರ ಬಾಡಿಗೆ ನಿಗದಿಪಡಿಸಲಾಗಿದೆ. ಮೇಲಂತಸ್ತಿನಲ್ಲಿ ಸುಸಜ್ಜಿತ 11 ಕೊಠಡಿಗಳಿವೆ. ಸಭಾಂಗಣದ ಜತೆಗೆ ಅಡುಗೆ ಮನೆ, ಊಟದ ಮನೆ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇದೆ. ಕುರ್ಚಿ, ಊಟದ ಟೇಬಲ್ ಹಾಗೂ ವಿಐಪಿ ಕುರ್ಚಿಗಳನ್ನು ಶೀಘ್ರ ತರಿಸಲಾಗುವುದು ಎಂದು ಹೇಳಿದರು.

 ಕಲ್ಯಾಣ ಮಂಟಪವನ್ನು ಶ್ರೀರಂಗನಾಥಸ್ವಾಮಿ ದೇವಾಲಯದ ಸುಪರ್ದಿಗೆ ವಹಿಸಲಾಗಿದೆ. ದೇವಾಲಯದ ವ್ಯವಸ್ಥಾಪನಾ ಸಮಿತಿ ನಿರ್ವಹಣೆ ಮಾಡಲಿದೆ.ವಿವಿಧೆಡೆಗಳಿಂದ ಬರುವ ಪ್ರವಾಸಿಗರು ರಾತ್ರಿ ವೇಳೆ ಕಲ್ಯಾಣ ಮಂಟಪದಲ್ಲಿ ತಂಗಬಹುದು. ಈ ಭವನದ ಅಗತ್ಯ ಇರುವವರು ಶ್ರೀರಂಗನಾಥಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಭೇಟಿ ಮಾಡಬಹುದು ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ವೆಂಕಟೇಶರಾವ್ ತಿಳಿಸಿದ್ದಾರೆ. ಲಕ್ಷ್ಮಿನಾರಾಯಣ, ವಸಂತ್, ಗಿರೀಶ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.