ಶನಿವಾರ, ಮೇ 15, 2021
29 °C

ಸರ್ಕಾರಿ ಕಾಲೇಜಿಗೆ ರೂ. 1 ಕೋಟಿ: ಮಹದೇವಪ್ರಸಾದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಂಡ್ಲುಪೇಟೆ: ವಿದ್ಯಾರ್ಥಿಗಳು ಆಧುನಿಕ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಶಾಸಕ ಎಚ್.ಎಸ್. ಮಹಾದೇವಪ್ರಸಾದ್ ಅವರು ಸೋಮವಾರ ಕರೆ ನೀಡಿದರು.ಪಟ್ಟಣದ ಗುರುಭವನದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2011-12ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆಗಳ ಸಮಾರೋಪ ಸಮಾರಂಭದಲ್ಲಿ `ವರ್ಷಿಣಿ~ ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.ತಾಲ್ಲೂಕಿನಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ಸಲುವಾಗಿ 4 ವರ್ಷಗಳ ಹಿಂದೆ ಈ ಕಾಲೇಜು ಸ್ಥಾಪಿಸಲಾಯಿತು. ಪ್ರಸ್ತುತ ಸನ್ನಿವೇಶದಲ್ಲಿ ಅನೇಕ ಬಡ ವಿದ್ಯಾರ್ಥಿಗಳಿಗೆ ಈ ಕಾಲೇಜಿನಿಂದ ಅನುಕೂಲವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿರುವುದರಿಂದ ಹಾಲಿ ಇರುವ ಮೂಲಭೂತ ಸೌಕರ್ಯ ಸಾಲುವುದಿಲ್ಲ, ಇದಕ್ಕಾಗಿ ಮತ್ತೆ 1 ಕೋಟಿ ಒದಗಿಸಲಾಗುವುದು ಎಂದು ಭರವಸೆ ನೀಡಿದರು.ವಿದ್ಯಾರ್ಥಿಗಳು ಓದಿನ ಜತೆಗೆ ಕ್ರೀಡೆ ಹಾಗೂ ಇತರೆ ಶೈಕ್ಷಣಿಕ ಚಟುವಟಿಕೆಗಳಲ್ಲಿಯೂ ಭಾಗವಹಿಸಬೇಕು ಎಂದು ಹೇಳಿದರು. ಪ್ರತಿ ವರ್ಷ ವಾರ್ಷಿಕ ಸಂಚಿಕೆ ಪ್ರಕಟಗೊಳ್ಳು ತ್ತಿರುವುದು ಸಂತಸ ತಂದಿದೆ ಎಂದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ಮೊರಬದ ಮಲ್ಲಿಕಾರ್ಜುನ ಮಾತನಾಡಿ, ಇಂದಿನ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ವಿದ್ಯೆಯ ಕಲಿಕೆಗೆ ಹೆಚ್ಚಿನ ನಿಗಾ ವಹಿಸಬೇಕು ಎಂದರು. ಪ್ರಾಚಾರ್ಯ ಪ್ರೊ. ಬಿ.ಎಂ. ರಾಮದಾಸ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 

ಪುರಸಭಾ ಮಾಜಿ ಉಪಾಧ್ಯಕ್ಷ ಎಸ್. ರಾಜಶೇಖರ್, ಪುರಸಭಾ ಸದಸ್ಯ ಪಿ. ಸುರೇಂದ್ರ, ಸಾಂಸ್ಕೃತಿಕ ಸಂಚಾಲಕ ಜಿ. ಮಲ್ಲೇಶ್, ಕ್ರೀಡಾ ನಿರ್ದೇಶಕ ಚಂದ್ರಶೇಖರ್, ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಎ.ಸಿ. ಮಂಜುಳ, ವರ್ಷಿಣಿ ವಾರ್ಷಿಕ ಸಂಚಿಕೆ ಸಂಚಾಲಕಿ ಆರ್.ಎಸ್. ಅಶ್ವಿನಿ, ಉಪನ್ಯಾಸಕರುಗಳಾದ ಗೋವಿಂದ ರಾಜ್, ಕೆ. ಚಾಮರಾಜು, ಮಂಜು, ರೇಖಾ, ಆಂಟೋನಿ ಸ್ಯಾಮ್‌ಸನ್, ಕೆ. ಸುರೇಂದ್ರ ಹಾಜರಿದ್ದರು.

26ರಂದು ಸಾಂಸ್ಕೃತಿಕ ಅಭಿಯಾನಪಟ್ಟಣದಲ್ಲಿ ಸುಗಮ ಸಂಗೀತ ಹಾಗೂ ಪಿ. ಕಾಳಿಂಗರಾವ್ ಪ್ರತಿಷ್ಠಾನದ ಅಡಿ ಸಾಂಸ್ಕೃತಿಕ ಅಭಿಯಾನ ಏಪ್ರಿಲ್ 26ರಂದು ನಡೆಯಲಿದೆ ಎಂದು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಎಂ. ಪುಟ್ಟತಾಯಮ್ಮ ತಿಳಿಸಿದ್ದಾರೆ.

ಹಂಸಧ್ವನಿ, ಸಾಂಸ್ಕೃತಿಕ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಚುಟುಕು ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ಜವಾಹರ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಈ ಸಾಂಸ್ಕೃತಿಕ ಅಭಿಯಾನವು ಪ್ರೊ . ಎಸ್. ಮಲ್ಲಣ್ಣ ನೇತೃತ್ವದಲ್ಲಿ ನಡೆಯಲಿದ್ದು, ಅಧ್ಯಕ್ಷತೆಯನ್ನು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಎಂ. ಪುಟ್ಟತಾಯಮ್ಮ ವಹಿಸಲಿದ್ದಾರೆ.ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ವೇದಿಕೆಯ ಕಾರ್ಯದರ್ಶಿ ಪ್ರೊ . ಕೆ.ಆರ್. ಪ್ರೇಮಲೀಲಾ ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.