ಸರ್ಕಾರಿ ನಿವೇಶನ ಅತಿಕ್ರಮಣ ತಡೆಗೆ ಕ್ರಮ

ಶನಿವಾರ, ಮೇ 25, 2019
32 °C

ಸರ್ಕಾರಿ ನಿವೇಶನ ಅತಿಕ್ರಮಣ ತಡೆಗೆ ಕ್ರಮ

Published:
Updated:

ಸವಣೂರು: ನಗರ ಸೇರಿದಂತೆ ತಾಲ್ಲೂ ಕಿನ ಹಲವಾರು ಗ್ರಾಮಗಳಲ್ಲಿ ಸರ್ಕಾರಿ ನಿವೇಶನವನ್ನು ವ್ಯಾಪಕವಾಗಿ ಅತಿ ಕ್ರಮಣ ಮಾಡಲಾಗುತ್ತಿರುವ ಬಗ್ಗೆ ಸವಣೂರ ತಾಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೀವ್ರ ಚರ್ಚೆಯಾಯಿತು.ಈ ಬಗ್ಗೆ ವಿಷಯ ಪ್ರಸ್ಥಾಪಿಸಿದ ತಹ ಸೀಲ್ದಾರ ಡಾ. ನಾಗೇಂದ್ರ ಹೊನ್ನಳ್ಳಿ, ಸರ್ಕಾರಿ ಸ್ವಾಮ್ಯದ ಆಸ್ತಿ ಗಳನ್ನು ಸಂರಕ್ಷಿಸಿಕೊಳ್ಳುವದು ಪ್ರತಿ ಯೊಂದು ಇಲಾಖಾ ಅಧಿಕಾರಿಗಳ ಕರ್ತವ್ಯವಾ ಗಿದೆ.  ಸರಕಾರಿ ಸ್ವತ್ತುಗಳ ದುರ್ಬಳಕೆ ಹಾಗೂ ಅತಿಕ್ರಮಣದ ಬಗ್ಗೆ ಅಧಿಕಾರಿ ಗಳ ಗಮನಕ್ಕೆ ಬಂದಿದ್ದರೆ, ತಕ್ಷಣ ಅಗತ್ಯ ಕ್ರಮಗಳನ್ನು ಜರು ಗಿಸಬೇಕು. ಇಲ್ಲ ಕಂದಾಯ ಇಲಾಖೆಗೆ ಮಾಹಿತಿ ನೀಡ ಬೇಕು ಎಂದು ಕೋರಿದರು.ಸರಕಾರಿ ಜಾಗದಲ್ಲಿರುವ ಹಲವಾರು ಸರಕಾರಿ ಕಟ್ಟಡಗಳಿಗೂ ಸದರಿ ನಿವೇಶನ ಹಸ್ಥಾತರಗೊಂಡಿರುವದಿಲ್ಲ. ಈ ಬಗ್ಗೆ ಸದರಿ ಇಲಾಖಾ ಅಧಿಕಾರಿಗಳು ಇಲಾ ಖೆಗೆಗೆ ಸಂಪರ್ಕಿಸಿದಲ್ಲಿ ದಾಖಲೆಗಳನ್ನು ಸರಿಪಡಿಸಿ ಕೊಡುವದಾಗಿ ತಿಳಿಸಿದ ತಹ ಶೀಲ್ದಾರರು, ಸರಕಾರಿ ನಿವೇಶನ ಹಾಗೂ ಸ್ವತ್ತುಗಳನ್ನು ದುರುಪ ಯೋಗ, ಅತಿಕ್ರಮಣದ ಬಗ್ಗೆ ದೂರು ನೀಡುವಂತೆ ಸಾರ್ವಜನಿಕರಲ್ಲಿ ಕೋರಿದರು.  ಸರಕಾರದಿಂದ ಮಂಜೂರಾದ ಅಭಿ ವೃದ್ಧಿ ಕಾಮಗಾರಿಗಳನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಯೋಜನೆಗಳ ಬಗ್ಗೆ ನಿರ್ಲಕ್ಷ್ಯ ವಹಿ ಸಿದಲ್ಲಿ ಅನುದಾನ ವ್ಯರ್ಥವಾಗುವ ಸಾಧ್ಯತೆಗಳಿಗೆ ಎಂದು ತಿಳಿಸಿದ  ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ರಂಗಸ್ವಾಮಿ, ಹಲವಾರು ಇಲಾಖೆಗಳು ಅಭಿವೃದ್ದಿ ಕಾಮಗಾರಿ ಗಳಿಗೆ ಇನ್ನೂ ಚಾಲನೆ ನೀಡಿಲ್ಲ. ಕೆಲವು ಕಾಮಗಾರಿಗಳ ಅಂದಾಜು ಪತ್ರಿಕೆಯೂ ಸಿದ್ದಗೊಂಡಿಲ್ಲ ಎಂದು ತಿಳಿಸಿದರು.ತಾಲ್ಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ರಸ್ತೆ ಕಾಮಗಾರಿ ತೀವ್ರ ಕಳಪೆ ಗುಣಮಟ್ಟದಿಂದ ಕೂಡಿದ್ದು, ಸಾಕಷ್ಟು ಬಾರಿ ಜಿ.ಪಂ.ಎಂಜನಿಯರಿಂಗ್ ಅಧಿ ಕಾರಿಗಳ ಗಮನಕ್ಕೆ ತಂದಿದ್ದರೂ ಅದನ್ನು ಸರಿಪಡಿಸಲಾಗಿಲ್ಲ. ಕಾಮಗಾರಿ ಬಗ್ಗೆ ಮರು ಪರಿಶೀಲಿಸಿ,  ಗುತ್ತಿಗೆ ದಾರರಿಗೆ ಕಾಮಗಾರಿಯನ್ನು ಸರಿಪಡಿ ಸಲು ತಾ.ಪಂ ಅಧ್ಯಕ್ಷ ಮಾಲತೇಶ ಬಿಜ್ಜೂರ ಸೂಚಿಸಿದರು.ಶಿಶು ಯೋಜನಾಭಿವೃದ್ಧಿ ಕಚೇರಿ ಯಲ್ಲಿ ಪ್ರಭಾರಿ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದು ಇದರಿಂದ ಯೋಜನೆ ಗಳ ಪ್ರಗತಿ  ಕುಂಠಿತಗೊಂಡಿವೆ. ಗ್ರಾಮೀಣ ಭಾಗದ ಕೆಲವೊಂದು ಅಂಗನವಾಡಿ ಕೇಂದ್ರಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಸಭೆಗೆ ಬರುವ ಮೇಲ್ವಿಚಾರಕರು ಪ್ರಗತಿ ಪತ್ರದಲ್ಲಿ ತಪ್ಪು ಅಂಕಿ-ಅಂಶಗಳನ್ನು ನಮೂದಿಸುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ತಾಲ್ಲೂಕಿಗೆ ಪೂರ್ಣಾ ವಧಿಯ ಶಿಶು ಅಭಿವೃದ್ದಿ ಯೋಜನಾಧಿ ಕಾರಿಗಳನ್ನು ನಿಯೋಜಿಸಬೇಕು ಎಂದು ಅಧ್ಯಕ್ಷ ಎಂ.ಕೆ. ಬಿಜ್ಜೂರ ಆಗ್ರಹಿಸಿದರು.ತೋಟಗಾರಿಕೆ ಇಲಾಖೆಗೆ ಸುವರ್ಣ ಭೂಮಿ ಯೋಜನೆ ಅಡಿಯಲ್ಲಿ 1587 ರೈತರು ಅರ್ಜಿ ಸಲ್ಲಿಸಿದ್ದು, ಅದರಲ್ಲಿ 425 ಅರ್ಜಿ ವಜಾಗೊಳಿಸಲಾಗಿದೆ. 74.25 ಲಕ್ಷ ರೂಗಳ ಅನುದಾನ ಅವಶ್ಯಕತೆಯಿದ್ದು, 1091 ಫಲಾನುಭ ವಿಗಳಿಗೆ 54 ಲಕ್ಷ ರೂಗಳನ್ನು ರೈತರ ಬ್ಯಾಂಕ ಖಾತೆಗೆ ಹಣ ಜಮಾ ಮಾಡ ಲಾಗಿದೆ ಎಂದು ಇಲಾಖೆಯ ಅಧಿಕಾರಿ ಗಳು ಸಭೆಗೆ ತಿಳಿಸಿದರು.ಸಭೆಯಲ್ಲಿ ತಾ.ಪಂ.ಉಪಾಧ್ಯಕ್ಷೆ ರತ್ನವ್ವ ಡವಗಿ ಉಪಸ್ಥಿತರಿದ್ದರು. ಕೆಡಿಪಿ ಸಭೆಗೆ ಅಧಿಕಾರಿಗಳ ಗೈರು ಹಾಜರಿ ಮುಂದುವರೆದಿದ್ದು, ಪಾಲ್ಗೊಂಡಿದ್ದ ಅಧಿಕಾರಿಗಳು ಪ್ರಗತಿನ್ನು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry