ಸರ್ಕಾರಿ ನೌಕರರಿಂದ ಡಿಸಿಗೆ ಮನವಿ

7

ಸರ್ಕಾರಿ ನೌಕರರಿಂದ ಡಿಸಿಗೆ ಮನವಿ

Published:
Updated:

ಗದಗ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಸದಸ್ಯರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ 6ನೇ ವೇತನ ಆಯೋಗದ ವೇತನ ಹಾಗೂ ಭತ್ಯೆಗಳನ್ನು ಯಥಾವತ್ತಾಗಿ ಪರಿಷ್ಕರಿಸಬೇಕು.ರಾಜ್ಯ ಸರ್ಕಾರಿ ನೌಕರರಿಗೂ ಮನೆ ಬಾಡಿಗೆ ಹಾಗೂ ನಗರ ಪರಿಹಾರ ಭತ್ಯೆಗಳನ್ನು ಮಂಜೂರು ಮಾಡಬೇಕು. ಜನಗಣತಿಯ ಆಧಾರದ ಮೇಲೆ ಜಿಲ್ಲಾ ಮತ್ತು ತಾಲ್ಲೂಕುಗಳನ್ನು ಪುನರ್ ವಿಂಗಡಿಸಿ ಭತ್ಯೆ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದ ನೌಕರರ ಸಂಘದ ಸದಸ್ಯರು ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರೇಮನಾಥ ಗರಗ, ಪ್ರಧಾನ ಕಾರ್ಯದರ್ಶಿ ರವಿ ಗುಂಜೀಕರ, ಬಿ.ಎಸ್. ಅಣ್ಣಿಗೇರಿ, ಶಿವಣ್ಣ ಗರಗ, ಡಿ.ಎಸ್. ತಳವಾರ, ಎಸ್.ಎನ್. ಬಳ್ಳಾರಿ, ಬಿ.ಎಫ್. ಪೂಜಾರ, ವೈ.ಕೆ. ಚೌಡಾಪೂರ, ಶಫಿ ಲಕ್ಕುಂಡಿ, ರಾಜಶೇಖರ ಕಾಲವಾಡಮಠ, ಶೇಖರಪ್ಪ ಕುಂದಗೋಳ, ಕುಲಕರ್ಣಿ, ಎಲ್.ಬಿ. ಆಸಂಗಿ, ಬಿ.ಎಚ್. ಚಕ್ರಣ್ಣವರ, ಜಿ.ಎಚ್. ಪೂಜಾರ, ಜಿನಗಾ, ಎ.ವಿ. ಗೌಡರ, ವಿ.ಎಫ್. ಕಲಕಂಬಿ, ಬಸವರಾಜ ಬಳ್ಳಾರಿ, ಆರ್.ಎಂ. ನಿಂಬನಾಯ್ಕರ, ಬಿ.ಬಿ. ಹಡಪದ, ಶಿವಾನಂದ ಸಿಂದೋಗಿ, ಪಿ.ಬಿ. ಕ್ಯಾಶೆಟ್ಟಿ, ಶೋಭಾ ಕಿತ್ತೂರ, ಎಸ್.ಪಿ. ಹೂಗಾರ, ದಂಡಗಿದಾಸರ, ವೈ.ಎನ್. ಓಸೇಕರ  ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry