ಸರ್ಕಾರಿ ನೌಕರರಿಗೆ ಕಾರ್ಯಾಗಾರ

7

ಸರ್ಕಾರಿ ನೌಕರರಿಗೆ ಕಾರ್ಯಾಗಾರ

Published:
Updated:

ಬೆಂಗಳೂರು:  ‘ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘವು ಭ್ರಷ್ಟಾಚಾರ, ಸಕಾಲ, ಮಾಹಿತಿ ಹಕ್ಕು ಹಾಗೂ ಸರ್ಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಕುರಿತು ಕಾರ್ಯಾಗಾರವನ್ನು ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಸೆ.28 ರಂದು ಬೆಳಿಗ್ಗೆ 10.30 ಕ್ಕೆ ಏರ್ಪಡಿಸಿದೆ’ ಎಂದು ಸಂಘದ ಅಧ್ಯಕ್ಷ ಎಲ್‌.ಬೈರಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಬಿ.ಎಂ.ಪಟೇಲ್‌ ಪಾಂಡು ಹೇಳಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾರ್ಯಾಗಾರವನ್ನು ಲೋಕಾಯುಕ್ತ ವೈ.ಭಾಸ್ಕರರಾವ್‌ ಅವರು ಉದ್ಘಾಟಿಸಲಿದ್ದು, ಮಾಹಿತಿ ಹಕ್ಕು ಆಯೋಗದ ಆಯುಕ್ತ ಡಿ.ತಂಗರಾಜು, ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಶಂಕರಲಿಂಗೇಗೌಡ ಮತ್ತಿತರರು ಪಾಲೊ್ಗಳ್ಳಲಿದ್ದಾರೆ  ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry