ಸರ್ಕಾರಿ ನೌಕರರ ಅಂಗವಿಕಲ ಮಕ್ಕಳಿಗೆ ಶಿಕ್ಷಣ ಭತ್ಯೆ

7

ಸರ್ಕಾರಿ ನೌಕರರ ಅಂಗವಿಕಲ ಮಕ್ಕಳಿಗೆ ಶಿಕ್ಷಣ ಭತ್ಯೆ

Published:
Updated:

ಬೆಂಗಳೂರು: ಸರ್ಕಾರಿ ನೌಕರರ ಇಬ್ಬರು ಅಂಧ ಅಥವಾ ಅಂಗವಿಕಲ ಮಕ್ಕಳ ಶಿಕ್ಷಣಕ್ಕಾಗಿ ತಲಾ ₨ 500   ಶಿಕ್ಷಣ ಭತ್ಯೆ ಹಾಗೂ ಪೋಷಕರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವ ಅಂಗವಿಕಲ ಮಕ್ಕಳಿಗೆ ಮಾಸಿಕ ತಲಾ ₨ 500   ಪೋಷಣಾ ಭತ್ಯೆಯನ್ನು ನೀಡಲು ಸರ್ಕಾರ ಆದೇಶ ಹೊರಡಿಸಿದೆ.ಈ ಬಗ್ಗೆ 2011ರ ಅಧಿಕಾರಿ ವೇತನ ಸಮಿತಿ ಶಿಫಾರಸು ಮಾಡಿತ್ತು. ವಿಶೇಷ ಸಂಯೋಜಿತ ಅಥವಾ ಸಾಮಾನ್ಯ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಹನ್ನೆರಡನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ಮತ್ತು 18 ವರ್ಷ ಮೀರದ ಮಕ್ಕಳಿಗೆ ಶಿಕ್ಷಣ ಭತ್ಯೆಯನ್ನು ನೀಡಲಾಗುವುದು. ಅದರಲ್ಲೂ ಶೇಕಡ 40 ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಂಧತ್ವ ಹಾಗೂ ಅಂಗವಿಲಕತೆ ಹೊಂದಿರುವ ಮಕ್ಕಳು ಮಾತ್ರ ಈ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ.ಅಂಧತ್ವ ಹಾಗೂ ಅಂಗವಿಕಲತೆಯ ಬಗ್ಗೆ ವೈದ್ಯಕೀಯ ಮಂಡಳಿಯಿಂದ ಪಡೆದ ಪ್ರಮಾಣ ಪತ್ರವನ್ನು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಶಿಫಾರಸಿನೊಂದಿಗೆ ನೌಕರರು ಇಲಾಖೆಯ ಮುಖ್ಯಸ್ಥರಿಗೆ ಸಲ್ಲಿಸಬೇಕು. ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ವಿಶೇಷ ಭತ್ಯೆಗಳನ್ನು ಪಡೆಯುತ್ತಿರುವ ಮಕ್ಕಳಿಗೆ ಈ ಸೌಲಭ್ಯ ಸಿಗುವುದಿಲ್ಲ.ಈ ಸೌಲಭ್ಯ ಪಡೆಯುವ ಮಕ್ಕಳಿಗೆ ಮೊದಲು 18 ವರ್ಷ ತುಂಬಿ, ಹನ್ನೆರಡನೇ ತರಗತಿಗೆ ಹೋಗದಿದ್ದಲ್ಲಿ ಶಿಕ್ಷಣ ಭತ್ಯೆ ಅಲ್ಲಿಗೆ ನಿಂತುಹೋಗುತ್ತದೆ. ಒಂದು ವೇಳೆ ಹನ್ನೆರಡನೇ ತರಗತಿಗೆ ಹೋಗಿ 18 ವರ್ಷ ತುಂಬದಿದ್ದರೂ ಭತ್ಯೆ ಸೌಲಭ್ಯ ಅಲ್ಲಿಗೆ ನಿಂತು ಹೋಗುತ್ತದೆ. ಒಂದು ವೇಳೆ ಮಕ್ಕಳ ತಂದೆ ತಾಯಿ ಇಬ್ಬರೂ ಸರ್ಕಾರಿ ನೌಕರರಾಗಿದ್ದರೆ ಒಬ್ಬರ ಕಡೆಯಿಂದ ಮಾತ್ರ ಮಕ್ಕಳಿಗೆ ಶಿಕ್ಷಣ ಮತ್ತು ಪೋಷಣಾ ಭತ್ಯೆ ನೀಡಲಾಗುತ್ತದೆ. ಪೋಷಣಾ ಭತ್ಯೆಯನ್ನು ಪಡೆಯುವ ಮಕ್ಕಳು ಶಾಶ್ವತವಾಗಿ ಅಂಗವಿಕಲ­ರಾಗಿದ್ದು, ಸಂಪೂಣರ್ವಾಗಿ ಪೋಷಕ­ರನ್ನೇ ಅವಲಂಬಿಸಿರಬೇಕು. ಈ ಬಗ್ಗೆ ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರವನ್ನು ಪಡೆದು ಇಲಾಖೆಗೆ ಸಲ್ಲಿಸಬೇಕು.ಈ ಸೌಲಭ್ಯವನ್ನು ಮಗು 6 ವರ್ಷ ಪೂರ್ಣಗೊಳಿಸುವ ದಿನಾಂಕದಿಂದ ಜೀವಿತಾ ವಧಿವರೆಗೆ ಅಥವಾ ಸರ್ಕಾರಿ ನೌಕರರು ಸೇವೆಯಿಂದ ನಿವೃತ್ತರಾಗುವ ವರೆಗೆ ಮಾತ್ರ ನೀಡಲಾಗುವುದು ಎಂದು ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಎಸ್‌. ರಾಜಲಕ್ಷ್ಮೀ ಅವರು ಸುತ್ತೋಲೆಯಲ್ಲಿ ಪ್ರಕಟಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry