ಸರ್ಕಾರಿ ನೌಕರರ ಕ್ರೀಡಾಕೂಟ 18ರಿಂದ

7

ಸರ್ಕಾರಿ ನೌಕರರ ಕ್ರೀಡಾಕೂಟ 18ರಿಂದ

Published:
Updated:

ವಿಜಾಪುರ: ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾ­ಕೂಟ­­ವನ್ನು ಬೆಂಗಳೂರಿ­ನಲ್ಲಿ ಇದೇ 18ರಿಂದ 20ರವರೆಗೆ ಆಯೋಜಿಸಲಾಗಿದೆ. ಇದೇ  18ರಂದು  ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದ­ರಾಮ­ಯ್ಯ ಕ್ರೀಡಾ­ಕೂಟವನ್ನು ಉದ್ಘಾಟಿಸಲಿದ್ದಾರೆ.ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ­ದಲ್ಲಿ ವಿಜೇತರದ ಕ್ರೀಡಾಪಟುಗಳು ರಾಜ್ಯಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಬಹುದಾಗಿದೆ. ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಕ್ರೀಡಾಪಟು­ಗಳಿಗೆ ಇಲಾಖೆ ವತಿಯಿಂದ ಟೀ ಶರ್ಟ್‌ ಹಾಗೂ ಕ್ಯಾಪ್ ವಿತರಿಸಲಾಗುತ್ತಿದ್ದು, ಕಡ್ಡಾಯವಾಗಿ ಕ್ಯಾಪ್ ಹಾಗೂ ಟೀ ಶರ್ಟ್‌್ ಧರಿಸಿ ಕ್ರೀಡಾಕೂಟದಲ್ಲಿ ಭಾಗವಹಿಸಿಬೇಕು.ಕ್ರೀಡಾಕೂಟದ  ಸ್ಮರಣ ಸಂಚಿಕೆ ಹೊರತರ­ಲಾಗುತ್ತಿದ್ದು,  ಸಾಧಕ ನೌಕರರ ಮಾಹಿತಿ ಹಾಗೂ ಭಾವಚಿತ್ರವನ್ನು ಇದೇ10 ರೊಳಗಾಗಿ ಕೇಂದ್ರ ಸಂಘಕ್ಕೆ ಕಳುಹಿಸಿಕೊಡಬೇಕು.  ಮಾಹಿತಿಗೆ ದೂ: 08352-251085 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry