ಶುಕ್ರವಾರ, ನವೆಂಬರ್ 15, 2019
21 °C

ಸರ್ಕಾರಿ ನೌಕರರ ಸಂಘದ ಚುನಾವಣೆ ಇಂದು

Published:
Updated:

ದೇವನಹಳ್ಳಿ: 2013-18 ರ ಅವಧಿಗೆ ತಾಲ್ಲೂಕು ಸರ್ಕಾರಿ ನೌಕರರ ಸಂಘಕ್ಕೆ ಸೋಮವಾರ (ಜುಲೈ22) ಚುನಾವಣೆ ನಡೆಯಲಿದೆ.ಹನ್ನೊಂದು ಮಂದಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಯ ಶಿಕ್ಷಕರು, ಇಬ್ಬರು ಪ್ರೌಢಶಾಲಾ ಶಿಕ್ಷಕರ ವಿಭಾಗದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ.ಜುಲೈ 22ರ ಬೆಳಿಗ್ಗೆ 11 ರಿಂದ ಸಾಯಂಕಾಲ 4 ರವರೆಗೂ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪ್ರಾಥಮಿಕ ಹಾಗೂ ಮಾಧ್ಯಮಿಕ ವಿಭಾಗದಿಂದ 3 ನಿರ್ದೇಶಕರ ಆಯ್ಕೆಗೆ 743 ಮಂದಿ ಮತಚಲಾವಣೆಯ ಹಕ್ಕು ಪಡೆದಿದ್ದಾರೆ. ಪ್ರೌಢಶಾಲಾ ವಿಭಾಗದಲ್ಲಿ 84 ಮಂದಿ ಮತದಾರರಿದ್ದಾರೆ.ಈಗಾಗಲೆ ವಿವಿಧ ಇಲಾಖೆಯಿಂದ 22 ಮಂದಿ ಅವಿರೋಧವಾಗಿ ಆಯ್ಕೆಗೊಂಡಿದ್ದು, ನಾಲ್ಕು ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಕೆಲವು ಇಲಾಖೆಯ ನೌಕರರು ನಾಮಪತ್ರವನ್ನು ಸಲ್ಲಿಸಿಲ್ಲ.ಕಣದಲ್ಲಿರುವ ಅಭ್ಯರ್ಥಿಗಳು: ಪ್ರಾಥಮಿಕ ಹಾಗೂ ಮಧ್ಯಮಿಕ ಶಿಕ್ಷಣ ವಿಭಾಗದಲ್ಲಿ ಆಂಜಿನಪ್ಪ, ಗಂಗಾಧರ್, ಗೋವಿಂದರಾಜು, ಜಯಶಂಕರ, ಜೈಶಂಕರ್, ಮಂಜುನಾಥ್, ಮುನಿಯಪ್ಪ, ಮುನಿರತ್ನಮ್ಮ, ರಾಘವೇಂದ್ರ, ಲೋಕೇಶ್, ಸೋಮಶೇಖರ್, ಪ್ರೌಢಶಾಲಾ ವಿಭಾಗದಿಂದ ಕೆ.ಬಸವರಾಜು, ರಾಮಾಂಜಿನಪ್ಪ ಸ್ಪರ್ಧಿಸಿದ್ದಾರೆ.  ಅವಿರೋಧವಾಗಿ ಆಯ್ಕೆಗೊಂಡವರು: ಅನ್ಸಾರಿ ಕೃಷಿ ಇಲಾಖೆ, ತಾ.ಪಂ ಇಲಾಖೆಯಿಂದ ರಾಮಾಂಜಿನಪ್ಪ , ಜಿ.ಪಂ ಇಲಾಖೆಯಿಂದ ವಿಕ್ಟರ್ ಹ್ಯಾರೀಸ್, ಕಾಲೇಜು ಶಿಕ್ಷಣ ಇಲಾಖೆಯಿಂದ ಎಸ್.ಚಂದ್ರಶೇಖರ್, ರೇಷ್ಮೆ ಇಲಾಖೆಯಿಂದ ಪ್ರಭಾಕರ್, ಆರ್.ಟಿ.ಒ ಕಚೇರಿಯಿಂದ ದಯಾನಂದಮೂರ್ತಿ, ಲೋಕೋಪಯೋಗಿ ಇಲಾಖೆಯಿಂದ ಸಣ್ಣಲಿಂಗೇಗೌಡ, ಆಹಾರ ಇಲಾಖೆಯಿಂದ ಪರಶಿವಮೂರ್ತಿ, ಅರಣ್ಯ ಇಲಾಖೆಯಿಂದ ಎಚ್.ಕೃಷ್ಣಪ್ಪ,  ಸಿ.ಡಿ.ಪಿ.ಒ ಕಚೇರಿಯಿಂದ ನಾಗಭೂಷಣಾಚಾರ್, ಸಹಕಾರಿ ಇಲಾಖೆಯಿಂದ ಶಿವಕುಮಾರ್, ಉಪಖಜಾನೆ ಇಲಾಖೆಯಿಂದ ನಟರಾಜ್ , ಕಾರ್ಮಿಕ ಇಲಾಖೆಯಿಂದ ರಮೇಶ, ಆರೋಗ್ಯ ಇಲಾಖೆ ಕೆ.ಎ.ಬಾಬು, ಪ್ರಸನ್ನ, ಮೋಹನ್ ಕುಮಾರ್, ಸುರೇಶ್ ಬಾಬು, ಕಂದಾಯ ಇಲಾಖೆ ಮಂಜುನಾಥ್, ಕಂದಾಯ ಇಲಾಖೆಯಿಂದ ಹನುಮಂತರಾಯಪ್ಪ, ಸಮಾಜ ಕಲ್ಯಾಣ ಇಲಾಖೆಯಿಂದ ಶ್ರೀನಿವಾಸ್, ಪಶುವೈದ್ಯ ಇಲಾಖೆಯಿಂದ ರಾಜಣ್ಣ, ಭೂ ಮಾಪನಾ ಇಲಾಖೆಯಿಂದ ಯೋಗಾನಂದ ಸ್ವಾಮಿ.ಚುನಾವಣೆಗೆ ಸಕಲ ತಯಾರಿ

ದೊಡ್ಡಬಳ್ಳಾಪುರ:
`ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕಕ್ಕೆ ಸೋಮವಾರ (ಜುಲೈ 22) ನಡೆಯಲಿರುವ ಚುನಾವಣೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಮಧ್ಯಾಹ್ನ 2 ಗಂಟೆಯ ನಂತರ ಮತ ಚಾಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆರು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ' ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಸ್.ಸಿದ್ದಗಂಗಯ್ಯ ತಿಳಿಸಿದ್ದಾರೆ.ಭಾನುವಾರ ನಗರದ ಸರ್ಕಾರಿ ನೌಕರರ ಸಂಘದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ 1,092 ಪ್ರಾಥಮಿಕ ಶಾಲಾ ಶಿಕ್ಷಕ ಮತದಾರರಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ 3 ಸ್ಥಾನಗಳು ಮೀಸಲಾಗಿವೆ. ತಮ್ಮ ತಂಅದಿಂದ ಆರ್.ಜಯರಾಮಯ್ಯ, ಬಿ.ಎಂ.ನರಸಿಂಹರಾಜು, ಎಂ.ಎಸ್.ರಾಜಶೇಖರ್ ಸ್ಪರ್ಧಿಸಿದ್ದಾರೆ ಎಂದರು.ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಕಾರ್ಯದರ್ಶಿ ಕೆ.ಮಲ್ಲಿಕಾರ್ಜುನರೆಡ್ಡಿ ಮಾತನಾಡಿ, ಶಾಲಾ ಶಿಕ್ಷಕರಿಗೆ ಸ್ಮಾರ್ಟ್ ಕಾರ್ಡ್  ನೀಡುವ ಯೋಜನೆ ಜಾರಿಗೆ ತರಲಾಗುತ್ತಿದೆ. ಇದರಿಂದ ಶಿಕ್ಷಕರ ಸೇವಾ ಪುಸ್ತಕದಲ್ಲಿರುವ ಎಲ್ಲ ಮಾಹಿತಿ ಹಾಗೂ ಸರ್ಕಾರಿ ಆದೇಶಗಳು ಸ್ಮಾರ್ಟ್ ಕಾರ್ಡ್‌ನಲ್ಲಿ ಲಭ್ಯವಾಗಲಿದೆ. ತಾಲ್ಲೂಕಿನ ಎಲ್ಲ ಸರ್ಕಾರಿ ನೌಕರರ ಅನುಕೂಲಕ್ಕಾಗಿ ಪತ್ತಿನ ಸಹಕಾರ ಸಂಘ ಪ್ರಾರಂಭಿಸಲು ಈಗಾಗಲೆ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ್ ಅವರ ಮಾರ್ಗದರ್ಶನದಲ್ಲಿ ಚರ್ಚಿಸಲಾಗಿದೆ ಎಂದು ಹೇಳಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಕ್ಷೇತ್ರದಿಂದ ಸರ್ಕಾರಿ ನೌಕರರ ಸಂಘಕ್ಕೆ ಸ್ಪರ್ಧಿಸಿರುವ ಆರ್.ಜಯರಾಮಯ್ಯ, ಬಿ.ಎಂ.ನರಸಿಂಹರಾಜು, ಎಂ.ಎಸ್.ರಾಜಶೇಖರ್ ಹಾಜರಿದ್ದರು.  ಸ್ಪರ್ಧೆಯಿಂದ ಹಿಂದಕ್ಕೆ:  ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರೌಢ ಶಾಲಾ ಶಿಕ್ಷಕರ ಸ್ಥಾನಕ್ಕೆ ಸ್ಪರ್ಧಿಸಿದ್ದ ಡಿ.ಎಂ.ಕೃಷ್ಣಮೂರ್ತಿ ಅವರು ಸ್ಪರ್ಧೆಯಿಂದ ಹಿಂದೆ ಸರಿದಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿ, ಯುವ ಶಿಕ್ಷಕರಿಗೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಸ್ಪರ್ಧೆಯಿಂದ ಹಿಂದೆ ಸರಿಯಲಾಗಿದೆ ಎಂದು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)