ಬುಧವಾರ, ಏಪ್ರಿಲ್ 21, 2021
23 °C

ಸರ್ಕಾರಿ ನೌಕರರ ಹೊಸ ವೇತನ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು, ಮಾ. 2 - ಗುಮಾಸ್ತರಿಗೆ 90 ರೂಪಾಯಿ, 4ನೇದರ್ಜೆಯ ನೌಕರರಿಗೆ 60 ರೂಪಾಯಿ ಕನಿಷ್ಠ ವೇತನ, ಹೊಸ ತುಟ್ಟಿಭತ್ಯದ ಯೋಜನೆ ಮತ್ತು ಕಡಿಮೆ ದರ್ಜೆಯ ನೌಕರರಿಗೆ ‘ಪರಿಹಾರ ಮತ್ತು ಮನೆ ಬಾಡಿಗೆ ಭತ್ಯ’ ಗಳನ್ನೊಳಗೊಂಡು 1961ನೇ ಜನವರಿ 1 ರಿಂದ ಜಾರಿಗೆ ಬರುವ ರಾಜ್ಯದ ಸರ್ಕಾರಿ ನೌಕರರ ಪುನರ್ ವಿಮರ್ಶಿತ ವೇತನ ಸ್ಕೇಲುಗಳ ಸಂಬಂಧದ ಸರ್ಕಾರಿ ಆಜ್ಞೆ ಇಂದು ಪ್ರಕಟವಾಯಿತು.ಪಂತ್‌ರ ಸ್ಥಿತಿ ಕಳವಳಕಾರಿ

ನವದೆಹಲಿ, ಮಾ. 2 - ಅಸ್ವಸ್ಥತೆಯ ಹತ್ತನೆಯ ದಿನವಾದ ಇಂದು ಪಂಡಿತ್ ಪಂತ್‌ರ ದೇಹಸ್ಥಿತಿ ನಿನ್ನೆಗಿಂತ ಮತ್ತಷ್ಟು ಕೆಟ್ಟು ತೀವ್ರ ಕಳವಳಕ್ಕೆಡೆ ಕೊಟ್ಟಿದೆಯೆಂದು ಇಂದು ರಾತ್ರಿ 11-15ಕ್ಕೆ ಹೊರಬಿದ್ದ ವೈದ್ಯಕೀಯ ಪ್ರಕಟಣೆಯೊಂದು ತಿಳಿಸಿದೆ.

ಈ ದಿನವಿಡೀ ಅವರ ಪರಿಸ್ಥಿತಿ ತುಂಬಾ ಕಳವಳ ಕಾರಕವಾಗಿಯೇ ಇತ್ತೆಂದೂ ಮೂತ್ರಪಿಂಡಗಳ ಕ್ರಿಯೆಯಲ್ಲಿ ಸುಧಾರಣೆ ಇಲ್ಲವೆಂದೂ ಪ್ರಕಟಣೆ ತಿಳಿಸಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.