ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅವ್ಯವಸ್ಥೆಯ ಆಗರ

7

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅವ್ಯವಸ್ಥೆಯ ಆಗರ

Published:
Updated:

ದೇವದುರ್ಗ: ಪಟ್ಟಣದ ಹೊರವಲಯದಲ್ಲಿ ಕಳೆದ ದಶಕದ ಹಿಂದೆ ಆರಂಭವಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇಂದಿಗೂ ಅಗತ್ಯ ಮೂಲ ಸೌಕರ್ಯಗಳು ಇಲ್ಲದ ಕಾರಣ ಬೆಳಗಾದರೆ ವಿದ್ಯಾರ್ಥಿಗಳು ಇನ್ನಿಲ್ಲದ ತೊಂದರೆ ಪಡುವಂತಾಗಿದೆ.ಕಾಲೇಜು ಕಟ್ಟಡ ಆಗುವುದಕ್ಕಿಂತ ಮುಂಚೆ ಮೂರು ಕೋಣೆಯಲ್ಲಿಯೇ ಪದವಿ ಮುಗಿಸಿದ ಹಳೇ ವಿದ್ಯಾರ್ಥಿಗಳು ಗೋಳು ಕೇಳವರು ಇದ್ದಿಲ್ಲ. ಸ್ಥಳದ ಅಭಾವದಿಂದಾಗಿ ಪಟ್ಟಣದ ಹೊರವಲಯದಲ್ಲಿ ಕಾಲೇಜು ಕಟ್ಟಡ ನಿರ್ಮಿಸಿದ್ದು, ಆರಂಭದಿಂದಲೂ ಹಲವು ಸಮಸ್ಯೆಗಳ ತಾಣವಾಗಿದೆ. ಹಲವು ವರ್ಷಗಳ ಕಾಲ ಪ್ರಚಾರ್ಯರು ಇಲ್ಲದೆ ಪ್ರಭಾರರ ಕೈಯಲ್ಲಿ ಕಾಲೇಜು ನಡೆಸಬೇಕಾದ ಅನಿವಾರ್ಯತೆ ಇತ್ತು.

 

ಈದೀಗ ಪ್ರಾಚಾರ್ಯರನ್ನು ನೇಮಕಾತಿ ಮಾಡಿದರೂ ಕಾಲೇಜಿಗೆ ಬರುವುದು ಅಪರೂಪಕ್ಕೆ ಎಂಬುವುದು ವಿದ್ಯಾರ್ಥಿಗಳ ಆರೋಪವಾಗಿದೆ. ಇದು ಒಂದು ಕಡೆಯಾದರೆ ಉಪನ್ಯಾಸಕರ ಕೊರತೆ, ಅತಿಥಿ ಉಪನ್ಯಾಸಕರ ನೇಮಕಾತಿ ವಿಳಂಬ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇತರ ಪ್ರಮುಖ ಸಮಸ್ಯೆಗಳು ಹಲವು ವರ್ಷಗಳಿಂದ ಇದ್ದರೂ ಈ ಬಗ್ಗೆ ಗುಲ್ಬರ್ಗ ವಿಶ್ವವಿದ್ಯಾಲಯವಾಗಲಿ ಅಥವಾ ಸಂಬಂಧಿಸಿದ ಪ್ರಾಚಾರ್ಯರು ಸಮಸ್ಯೆಗಳಿಗೆ ಪರಿಹಾರಕಂಡುಕೊಳ್ಳದೆ ಇರುವುದು ವಿದ್ಯಾರ್ಥಿಗಳ ಪಾಲಿಗೆ ಕಾಲೇಜು ಎಂಬುವುದು ನರಕವಾಗಿ ಪರಿಣಮಿಸಿದೆಇವೆಲ್ಲ ಸಮಸ್ಯೆಗಳನ್ನು ಮುಂದೆ ಇಟ್ಟುಕೊಂಡು ಕಳೆದ ತಿಂಗಳು ವಿದ್ಯಾರ್ಥಿಗಳು ತಹಸೀಲ್ ಕಚೇರಿವರೆಗೂ ಪಾದಯಾತ್ರೆ ಮೂಲಕ ಆಗಮಿಸಿ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಸಮಸ್ಯೆಗಳ ಪರಿಹಾರಕ್ಕಾಗಿ ಪಟ್ಟು ಹಿಡಿದು ಕುಳಿತುಕೊಂಡ ನಂತರ ಸ್ವತ ಕಾಲೇಜು ಪ್ರಾಚಾರ್ಯರು ಸ್ಥಳಕ್ಕೆ ಆಗಮಿಸಿ ಲಿಖಿತ ಭರವಸೆ ನೀಡಿದರೂ ಇವರೆಗೂ ಯಾವ ಸಮಸ್ಯೆಗಳು ಈಡೇರಿಲ್ಲ ಎಂಬುವುದು ವಿದ್ಯಾರ್ಥಿಗಳ ಅಳಲಾಗಿದೆ.ಸುಮಾರು 200ನೂರಕ್ಕೂ ಹೆಚ್ಚು ಇರುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಉಪನ್ಯಾಸಕರು ಇಲ್ಲ. ಸದರಿ ಕಾಲೇಜು ಕಟ್ಟಡದಲ್ಲಿ ಕಳೆದ ಮೂರು ವರ್ಷದಿಂದ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯವನ್ನು ಆರಂಭಿಸಿರುವುದರಿಂದ ಪ್ರಥಮ ದರ್ಜೆ ಕಾಲೇಜಿಗೆ ಕೋಣೆಗಳ ಕೊರತೆ ಎದುರಾಗಿದೆ. ಕೋಣೆ ಮತ್ತು ಉಪನ್ಯಾಸಕರ ಕೊರತೆಯಿಂದಾಗಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳು ಕಾಲೇಜು ಮೈದಾನದಲ್ಲಿ ಹರಟೆ ಹೊಡೆಯುತ್ತಾ ಕಾಲಕಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ತಾಂತ್ರಿಕ ಮಹಾವಿದ್ಯಾಲಯದ ಸಮಸ್ಯೆ ಹೇಳತೀರದಾಗಿದೆ. ನಾಲ್ಕು ನೂರಕ್ಕೂ ಹೆಚ್ಚು ಇರುವ ವಿದ್ಯಾರ್ಥಿಗಳ ಸಂಖ್ಯೆಗೆ ಮೂಲ ಸೌಕರ್ಯ ಇಲ್ಲದ ಕಾರಣ ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾಗಿದೆ. ಸದರಿ ಕಾಲೇಜಿಗೂ ಪ್ರಾಚಾರ್ಯರು ಬರುವುದು ಅಪರೂಪಕ್ಕೆ ಎಂಬುವಂತಿದೆ. ಕಾಲೇಜು ವಿದ್ಯಾರ್ಥಿಗಳು ಸಮಸ್ಯೆಗಳ ಕುರಿತು ಪ್ರತಿಭಟನೆ ನಡೆಸಿದರೂ ಪ್ರಯೋಜನೆ ಇಲ್ಲದಂತಾಗಿದೆ ಎಂಬುವದು ವಿದ್ಯಾರ್ಥಿಗಳ ಆರೋಪವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry