ಸರ್ಕಾರಿ ಬಂಗಲೆಗೆ ಕೇಜ್ರಿವಾಲ್‌

7
ಸದ್ದುಗದ್ದಲವಿಲ್ಲದೇ ಸಚಿವರಿಗೆ ಇನೊವಾ ಕಾರು

ಸರ್ಕಾರಿ ಬಂಗಲೆಗೆ ಕೇಜ್ರಿವಾಲ್‌

Published:
Updated:

ನವದೆಹಲಿ (ಪಿಟಿಐ): ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಶೀಘ್ರವೇ ತಮ್ಮ ಗಾಜಿಯಾಬಾದ್‌ನ ಕೌಶಂಬಿ ನಿವಾಸದಿಂದ ಕೇಂದ್ರ ದೆಹಲಿಯ ಐದು ಕೋಣೆಗಳ ಎರಡಂತಸ್ತಿನ ಮನೆಗೆ ವಾಸ್ತವ್ಯ ಬದಲಾಯಿಸಲಿದ್ದಾರೆ.ಭಗವಾನ್‌ದಾಸ್‌ ರಸ್ತೆಯಲ್ಲಿ ಐದು ಕೋಣೆಗಳ ಎರಡಂತಸ್ತಿನ ಎರಡು ಮನೆಯನ್ನು ಕೇಜ್ರಿವಾಲ್‌ ಅವರಿಗೆ ನೀಡಲಾಗಿದೆ. ಅದರಲ್ಲಿ ಅವರು ಒಂದನ್ನು ನಿವಾಸವಾಗಿ ಮತ್ತು ಇನ್ನೊಂದನ್ನು ಕಚೇರಿಯಾಗಿ ಉಪಯೋಗಿಸಲಿದ್ದಾರೆ.ಕೇಜ್ರಿವಾಲ್‌ ಕುಟುಂಬದ ಸದಸ್ಯರು ಪರಿಶೀಲನೆ ನಡೆಸಿದ ನಂತರ ಈ ಮನೆಗಳನ್ನು ಅಂತಿಮಗೊಳಿಸಲಾಗಿದೆ. ಮನೆಗಳ ನವೀಕರಣ ನಡೆಯುತ್ತಿದೆ.

ಆದರೆ ಇದನ್ನು ಬಿಜೆಪಿ ಟೀಕಿಸಿದ್ದು, ಎಎಪಿ ಏನು ಹೇಳುತ್ತದೆಯೋ ಅದಕ್ಕೆ ವ್ಯತಿರಿಕ್ತವಾಗಿದೆ ಈ ಕ್ರಮ ಎಂದಿದೆ.ಮಂತ್ರಿಗಳಿಗೆ ಇನೊವಾ ಕಾರು: ಕೇಜ್ರಿವಾಲ್‌ ಹೊರತುಪಡಿಸಿ ಅವರ ಸಂಪುಟದ ಇತರ ಸದಸ್ಯರು ಸರ್ಕಾರಿ ಇನೊವಾ ಕಾರು ಪಡೆದುಕೊಂಡಿದ್ದಾರೆ.

ಮನೀಶ್‌ ಸಿಸೋಡಿಯ, ರಾಖಿ ಬಿರ್ಲಾ, ಸೌರಭ್‌ ಭಾರದ್ವಾಜ್ ಸೇರಿದಂತೆ ಹಲವು ಸಚಿವರು ಶುಕ್ರವಾರ ಕಚೇರಿಗೆ ಇದೇ ಕಾರಿನಲ್ಲಿ ಬಂದರು. ಆರಂಭದ ಕೆಲವು ದಿನಗಳಲ್ಲಿ ಇವರೆಲ್ಲರೂ ಸಾಮಾನ್ಯ ಜನರಂತೆ ಆಟೊ ಮತ್ತು ಮೆಟ್ರೊಗಳಲ್ಲಿ ಓಡಾಡುತ್ತಿದ್ದರು.‘ಸಚಿವರು ಸರ್ಕಾರಿ ಕಾರೇ ಬಳಸುವುದಿಲ್ಲ ಎಂದು ನಾವು ಹೇಳಿಲ್ಲ. ಕೆಂಪು ದೀಪದ ಕಾರು ಬಳಸುವುದಿಲ್ಲ ಎಂದು ಮಾತ್ರ ಹೇಳಿದ್ದೇವೆ’ ಎಂದು ಸಚಿವರು ಕಾರು  ಪಡೆದಿರುವುದನ್ನು ಕೇಜ್ರಿವಾಲ್‌ ಸಮರ್ಥಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry