ಸರ್ಕಾರಿ ಬಂಗ್ಲೆಯಲ್ಲಿ ಅಕ್ರಮ ವಾಸ- ಸುಪ್ರೀಂ ನೋಟಿಸ್

7

ಸರ್ಕಾರಿ ಬಂಗ್ಲೆಯಲ್ಲಿ ಅಕ್ರಮ ವಾಸ- ಸುಪ್ರೀಂ ನೋಟಿಸ್

Published:
Updated:

ನವದೆಹಲಿ: ಸರ್ಕಾರಿ ಬಂಗ್ಲೆಗಳಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಬಿಹಾರದ ಮಾಜಿ ರಾಜ್ಯಪಾಲ ಬೂಟಾಸಿಂಗ್, ದೆಹಲಿ ಮಾಜಿ ಪೊಲೀಸ್ ಕಮಿಷನರ್ ವೈ.ಎಸ್. ದಡ್ವಾಲ್ ಸೇರಿದಂತೆ 150 ಜನರಿಗೆ ಸುಪ್ರೀಂಕೋರ್ಟ್ ಷೋಕಾಸ್ ನೋಟಿಸ್ ಜಾರಿ ಮಾಡಿದೆ.ಕಾನೂನು ಮತ್ತು ಸಂವಿಧಾನಾತ್ಮಕವಾದ ಹಕ್ಕಿಲ್ಲದೆ ಸರ್ಕಾರಿ ಬಂಗ್ಲೆಗಳಲ್ಲಿ ವಾಸಿಸುತ್ತಿರುವ ನಿಮ್ಮನ್ನು ಹೊರ ಹಾಕಲು ಆದೇಶ ನೀಡಬೇಕೆ ಅಥವಾ ನೀವಾಗೇ ಬಂಗ್ಲೆಗಳನ್ನು ತೆರವು ಮಾಡುತ್ತೀರಾ ಎಂದು ನೋಟಿಸಿನಲ್ಲಿ ಕೇಳಲಾಗಿದೆ.

ಸರ್ಕಾರಿ ಬಂಗ್ಲೆಗಳಲ್ಲಿ ಅಕ್ರಮವಾಗಿ ವಾಸ ಮುಂದುವರಿಸಿರುವುದರಿಂದ ವಿವಿಧ ಟ್ರಿಬ್ಯೂನಲ್‌ಗಳ ಅಧ್ಯಕ್ಷರು ಮತ್ತು ಸದಸ್ಯರಿಗೆ ವಸತಿ ಸೌಲಭ್ಯ ನೀಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಸರ್ಕಾರಿ ಬಂಗ್ಲೆಗಳಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವ್ಯಕ್ತಿಗಳ ಹೆಸರುಗಳನ್ನು ಪ್ರಮುಖ ಇಂಗ್ಲಿಷ್ ಮತ್ತು ಹಿಂದಿ ಪತ್ರಿಕೆಗಳಲ್ಲಿ ಪ್ರಕಟಿಸುವಂತೆ ನಗರಾಭಿವೃದ್ಧಿ ಇಲಾಖೆಗೆ ನ್ಯಾಯಪೀಠ ಸೂಚಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry