ಸರ್ಕಾರಿ ಯೋಜನೆ: ಜನಸಾಮಾನ್ಯರಿಗೆ ತಿಳಿಸಿ

7

ಸರ್ಕಾರಿ ಯೋಜನೆ: ಜನಸಾಮಾನ್ಯರಿಗೆ ತಿಳಿಸಿ

Published:
Updated:

ಗಂಗಾವತಿ: ಬಡತನ ರೇಖೆಗಿಂತ ಕೆಳಗಿನ ಮತ್ತು ಆರ್ಥಿಕವಾಗಿ ಹಿಂದುಳಿದ ಬಡ ವರ್ಗದ ಜನರಿಗಾಗಿ ಸರ್ಕಾರ ಕೋಟ್ಯಂತರ ರೂಪಾಯಿ ವ್ಯಯಿಸಿ ಜಾರಿಗೆ ತರುವ ಆರೋಗ್ಯ ಯೋಜನೆಗಳನ್ನು ಸ್ವಯಂ ಸೇವಾ ಸಂಸ್ಥೆಗಳು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಸಂಸದ ಶಿವರಾಮಗೌಡ ಕರೆ ನೀಡಿದರು.ನಗರದ ನೀಲಕಂಠೇಶ್ವರ ವತ್ತದಲ್ಲಿರುವ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಜ್ಞಾನಜ್ಯೋತಿ ಗ್ರಾಮೀಣ ಸೇವಾ ಸಂಸ್ಥೆ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಬಡ ವರ್ಗಕ್ಕೆ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಹತ್ತು ಹಲವು ಯೋಜನೆ ಜಾರಿಗೆ ತಂದಿವೆ. ಅವುಗಳ ಉಪಯೋಗ ಪಡೆಯಲು ಅಥವಾ ಸಾರ್ವಜನಿಕರಿಗೆ ಮಾಹಿತಿ ತಲುಪಿಸುವ ಕೆಲಸ ಎನ್.ಜಿ.ಓ. ಮಾಡಬೇಕು.ಸಾವಿನ ನಂತರ ನೇತ್ರದಾನ ಮಾಡುವ ಮೂಲಕ ಸಮಾಜದಲ್ಲಿ ಕಣ್ಣು ಇಲ್ಲದವರಿಗೆ ಬೆಳಕು ನೀಡುವ ಕಾರ್ಯಕ್ಕೆ ಯುವಕರು ಆದ್ಯತೆ ನೀಡಬೇಕು. ನೇತ್ರದಾನ ಮಹಾದಾನವಾಗಿದ್ದು ಗ್ರಾಮೀಣ ಪ್ರದೇಶ ಜನರಿಗೆ ಇದರ ಬಗ್ಗೆ ಹೆಚ್ಚಿನ ತಿಳುವಳಿಕೆ ನೀಡುವ ಕೆಲಸವಾಗಬೇಕು ಎಂದು ಸಂಸದ ಕರೆ ನೀಡಿದರು.ಕಾರ್ಯಕ್ರಮ ಉದ್ಘಾಟಿಸಿದ ಕರಕುಶಲ ಅಭಿವದ್ಧಿ ನಿಗಮ ಅಧ್ಯಕ್ಷೆ ಲಲಿತಾರಾಣಿ ಮಾತನಾಡಿ, ಮನುಷ್ಯನಿಗೆ ನೇತ್ರ ಅತಿ ಮುಖ್ಯ ಅವಯವ. ಕಣ್ಣಿನ ದಷ್ಠಿ ಕ್ಷಿಣಿಸಿದರೆ ಶ್ರೀಮಂತರು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಚಿಕಿತ್ಸೆ ಪಡೆಯಬಲ್ಲರು. ಆದರೆ ಬಡವರಿಗೆ ಇಂತ ಶಿಬಿರಗಳು ಉಪಯುಕ್ತವಾಗುತ್ತವೆ ಎಂದು ಶ್ಲಾಘಿಸಿದರು.ಸುಳೆಕಲ್ ಭುವನೇಶ್ವರ ತಾತ ಸಾನಿಧ್ಯ ವಹಿಸಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಶಾಮಿದ್ ಮನಿಯಾರ್, ನಗರಸಭಾ ಮಾಜಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಉದ್ಯಮಿ ಸುರೇಶ ಸಿಂಗನಾಳ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ವಿಜಯಾ, ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಮೊದಲಾದವರು ಪಾಲ್ಗೊಂಡಿದ್ದರು.ಜ್ಞಾನಜ್ಯೋತಿ ಗ್ರಾಮಣ ಅಭಿವದ್ಧಿ ಸಂಸ್ಥೆ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ, ಪ್ರಾಜೆಕ್ಟ್ ದಷ್ಠಿ ಸೋಲಂಕಿ ಕಣ್ಣಿನ ಆಸ್ಪತ್ರೆಗಳ ಆಶ್ರಯದಲ್ಲಿ ಶಿಬಿರ ಏರ್ಪಡಿಸಲಾಗಿತ್ತು.   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry