ಸರ್ಕಾರಿ ಶಾಲೆಗೆ ಅಮೆರಿಕ ವಿದ್ಯಾರ್ಥಿಗಳ ಭೇಟಿ

7

ಸರ್ಕಾರಿ ಶಾಲೆಗೆ ಅಮೆರಿಕ ವಿದ್ಯಾರ್ಥಿಗಳ ಭೇಟಿ

Published:
Updated:

ವಿಜಯಪುರ: ಮಳೆ ನೀರು ಸಂಗ್ರಹಣೆ ಯೋಜನೆ ಕುರಿತಂತೆ ಅಮೆರಿಕದ ವಾಷಿಂಗ್ಟನ್‌ ವಿಶ್ವವಿದ್ಯಾಲಯದ ಫಾಸ್ಟರ್‌ ಸ್ಕೂಲ್‌ ಆಫ್‌ ಬ್ಯುಸಿನೆಸ್‌ನ ವಿದ್ಯಾರ್ಥಿಗಳು ಪಟ್ಟಣದ ಸರ್ಕಾರಿ ಮಾದರಿ ಬಾಲಕಿಯರ ಪಾಠಶಾಲೆಗೆ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಮುಖ್ಯಸ್ಥ ಪ್ರೊ. ಕೇಟ್‌ ಗೋತಲ್‌, ’ಭಾರತದ ಸರ್ಕಾರಿ ಶಾಲೆ ಮಕ್ಕಳನ್ನು ಶೈಕ್ಷಣಿಕವಾಗಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ  ಈ ಭೇಟಿ   ನೀಡಲಾಗಿದೆ ಎಂದರು.ಬೆಂಗಳೂರಿನ ರೈನ್‌ ವಾಟರ್‌ ಕ್ಲಬ್‌ ಎನ್‌ಜಿಓ ಮುಖ್ಯಸ್ಥ ಎಸ್‌,ವಿಶ್ವನಾಥ್‌ ಮಾತನಾಡಿ, ‘ಅಮರಿಕದ ವಾಷಿಂಗ್‌ಟನ್‌ ವಿವಿ ವಿದ್ಯಾರ್ಥಿಗಳು ಪ್ರತಿ ವರ್ಷ ಭಾರತಕ್ಕೆ ಭೇಟಿ ನೀಡಿ 3 ವಾರ ನಿಯೋಜಿತ ಪ್ರದೇಶಗಳಿಗೆ ತೆರಳಿ ಅಲ್ಲಿನ ಮಹಿಳಾ ನಾಯಕಿಯರನ್ನು ಭೇಟಿ ಮಾಡಿ ಅವರ ಸಾಧನೆ ಮತ್ತು ಸೇವೆ ಅರಿಯಲಿದ್ದಾರೆ’ ಎಂದರು.ಅನೇಕ ಹಳ್ಳಿಗಳಿಗೆ ಹೋಗಿ ಅಲ್ಲಿನ ಶಾಲೆಗಳಲ್ಲಿ ಅಗತ್ಯವೆನಿಸಿದ ಮೂಲ ಸೌಕರ್ಯಒದಗಿಸುವಲ್ಲಿ  ಸಹಕರಿ ಸುತ್ತಿದ್ದಾರೆ ಎಂದು ತಿಳಿಸಿದರು.ಮುಖ್ಯಶಿಕ್ಷಕ ಮನೋಹರ್‌ ಮಾತ ನಾಡಿ, ’ಪಟ್ಟಣದಲ್ಲಿ ನೀರಿನ ಸಮಸ್ಯೆ ಬಹಳ ಇದ್ದು, ಅದಕ್ಕೆ ಶಾಲೆಯೂ ಹೊರತಾಗಿಲ್ಲ. ಇಲ್ಲಿ ಮಳೆ ನೀರು ಸಂಗ್ರಹಣಾ ತೊಟ್ಟಿ ಇದ್ದು, ಇದನ್ನು ಬಳಸಿಕೊಳ್ಳುತ್ತಿರಲಿಲ್ಲ. ಶೌಚಾಲಯ ವಿದ್ದರೂ ನೀರಿನ ಕೊರತೆಯಿಂದ ಬಳಸುತ್ತಿರಲಿಲ್ಲ.ಅಡುಗೆ ಮಾಡಲು ನೀರಿನ ತೊಂದರೆ ಇತ್ತು. ಇಂದು ಇಲ್ಲಿಗೆ ಭೇಟಿ ನೀಡಿದ ವಿದ್ಯಾರ್ಥಿಗಳ ತಂಡ ಪೈಪ್‌ ಲೈನ್‌ ಅಳವಡಿಸಿ, ಈ ನೀರು ಶೌಚಾಲಯಕ್ಕೆ ಮತ್ತು ಬಿಸಿಯೂಟ ತಯಾರಿಸುವ ಕೋಣೆಗೆ ನೇರವಾಗಿ ಬರುವಂತೆ ಮಾಡಿದ್ದಾರೆ. ವ್ಯರ್ಥ ವಾಗಿದ್ದ ಸರ್ಕಾರಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸಿದರು. ಎಸ್‌ಡಿಎಂಸಿ ಸದಸ್ಯರಾದ ಚಂದ್ರ ಶೇಖರ್‌, ಮಂಜುನಾಥ್‌, ಸಿಬ್ಬಂದಿ ಇದ್ದರು.ಈ ಸಂದರ್ಭದಲ್ಲಿ ಮಾತನಾಡಿದ ವಿವಿಯ ಆಡಳಿತ ವಿಭಾಗದ ಮುಖ್ಯಸ್ಥ  –ಜೆಸ್‌ ರಷ್‌, ‘ವಿಶ್ವವಿದ್ಯಾಲಯದ ವತಿಯಿಂದ ಪ್ರತಿ ವರ್ಷವೂ ಇಂತಹ ಯೋಜನೆಗಳನ್ನು ಹಮ್ಮಿಕೊಂಡು ವಿದ್ಯಾರ್ಥಿರ್ಗಳನ್ನು ಭಾರತಕ್ಕೆ ಕರೆತರುತ್ತೇವೆ. ಈ ದೇಶದ ಸರ್ಕಾರಿ ಶಾಲಾ ಮಕ್ಕಳನ್ನು  ಭೇಟಿ ಮಾಡುವ ಹಾಗೂ ತಮ್ಮ ಯೋಜನೆ ಗಳಿಗೆ ಸಹಕರಿಸುವ ಸಾರ್ವಜನಿಕ ರೊಂದಿಗೆ ಆತ್ಮೀಯತೆ ಬೆಳೆಯುತ್ತದೆ. ಈ ವರ್ಷದ ಯೋಜನೆಯಲ್ಲಿ ಸುಮಾರು 7–8 ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಅಗತ್ಯವಿರುವ ಮೂಲ ಸೌಕರ್ಯ ಗಳನ್ನು ವಿದ್ಯಾರ್ಥಿಗಳು ತಾವೇ ಖುದ್ದು ನಿರ್ಮಿಸಿದ್ದಾರೆ’ ಎಂದರು.ವಿದ್ಯಾರ್ಥಿನಿ ಎಮಿಲಿ ಕುಕ್‌ ಮಾತನಾಡಿ, ‘ಇದು ಹೆಣ್ಣು ಮಕ್ಕಳ ಶಾಲೆ. ಇಲ್ಲಿ ಅಗತ್ಯವಾಗಿ ಶೌಚಾಲಯ ಬೇಕು. ಆದರೆ ನೀರಿಲ್ಲದೆ ಶೌಚಾಯಲ ವ್ಯರ್ಥವಾಗುತ್ತಿತ್ತು. ಹೆಣ್ಣು ಮಕ್ಕಳು ಹೇಗೆ ಈ ಸಮಸ್ಯೆ ಎದುರಿಸುತ್ತಿದ್ದರೋ ಗೊತ್ತಿಲ್ಲ. ಅವರಿಗೆ ನಾವು ನಮ್ಮ ಯೋಜನೆಯಲ್ಲಿ ಶೌಚಾಲಯಕ್ಕೆ ನೀರು ಹೋಗುವ ವ್ಯವಸ್ಥೆ ಕಲ್ಪಿಸಿದ್ದೇವೆ.  ಅವರು ಯಾವ ಕೊರತೆಯೂ ಬಾರದಂತೆ ವಿದ್ಯಾಭ್ಯಾಸ ಮಾಡಲಿ ಎಂಬುದು ನಮ್ಮೆಲ್ಲರ ಆಸೆ. ನಾವು ಸಂತೋಷದಿಂದ ನಮ್ಮ ಕೈಲಾದ ಸೇವೆ ಮಾಡುತ್ತಿದ್ದೇವೆ ’

‘ವಿದ್ಯಾರ್ಥಿ ಆಸ್ಕರ್‌ ವಾಂಗ್‌ ಮಾತನಾಡಿ, ‘ಮಕ್ಕಳು ನಿಜಕ್ಕೂ ಬುದ್ಧಿವಂತರು. ಇವರಿಗೆ ಉತ್ತಮ ಶಿಕ್ಷಣ ದೊರೆತರೆ ಹತ್ತರವಾದುದನ್ನೇ ಸಾಧಿಸುತ್ತಾರೆ’ ಎಂದು ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry