ಶುಕ್ರವಾರ, ಮೇ 14, 2021
21 °C

ಸರ್ಕಾರಿ ಶಾಲೆಗೆ ಭೂಮಿ ಮಂಜೂರು: ನಾರಾಯಣಸ್ವಾಮಿ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಡಿಬಂಡೆ: ಶಾಲೆಗಳ ಕಟ್ಟಡ ನಿರ್ಮಾಣ, ಕ್ರೀಡಾಂಗಣ ಸೇರಿದಂತೆ ಶೈಕ್ಷಣಿಕ ಉದ್ದೇಶಗಳಿಗೆ ಸರ್ಕಾರಿ ಭೂಮಿ ಮಂಜೂರು ಮಾಡುವಂತೆ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣ ಸ್ವಾಮಿ ಒತ್ತಾಯಿಸಿದರು.

ತಾಲ್ಲೂಕಿನಲ್ಲಿ ಶುಕ್ರವಾರ ಶೈಕ್ಷಣಿಕ ಪ್ರವಾಸ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಪಟ್ಟಣದ ಬಾಲಕ, ಬಾಲಕಿಯರ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ್ದ ಅವರು ಶಾಲಾ ಶಿಕ್ಷಕ ಸಂಘ ಏರ್ಪಡಿಸಿದ್ದ ಜನ ಸಂವಾದದಲ್ಲಿ ಮಾತನಾಡಿದರು.ಇಲ್ಲಿನ ಬಾಲಕಿಯರ ಸರ್ಕಾರಿ ಶಾಲೆಗೆ ರೂ.40ಲಕ್ಷ ಅನುದಾನ ಬಂದಿದ್ದು, ತಾಲ್ಲೂಕು ಆಡಳಿತ ಶಾಲೆ ನಿರ್ಮಾಣಕ್ಕೆ ಸೂಕ್ತ ಜಾಗ ಮಂಜೂರು ಮಾಡಬೇಕು. 6ನೇ ವೇತನ ಆಯೋಗದ ವರದಿ ಬರುವುದಕ್ಕೂ ಮುನ್ನ ಶೇ.30ರಷ್ಟು ಮಧ್ಯಂತರ ಪರಿಹಾರ ನೀಡಬೇಕು. ಪ್ರೌಢಶಾಲಾ ಶಿಕ್ಷಕರಿಗೆ 75:25ರ ಅನುಪಾತ ದಲ್ಲಿ ಸೇವಾ ಬಡ್ತಿ ನೀಡಿದ ನಂತರ ನೇರ ನೇಮಕಾತಿಗೆ ಅವಕಾಶ ಕಲ್ಪಿಸಬೇಕು ಎಂದರು.ತಾಲ್ಲೂಕಿನ ಉಲ್ಲೋಡು ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿದ ಅವರು ಮಕ್ಕಳೊಡನೆ ಬಿಸಿಯೂಟ ಮಾಡಿದರು. ಪ್ರತಿ ದಿನ ಬಿಸಿಯೂಟ ಮಾಡಲು ಗ್ರಾಮದ ಪ್ರೌಢಶಾಲೆ ಮಕ್ಕಳು ತಟ್ಟೆ ಲೋಟ ಹಿಡಿದು ಸಾಕಷ್ಟು ದೂರ ರಸ್ತೆಯಲ್ಲಿ ನಡೆದು ಬಂದು ಪ್ರಾಥಮಿಕ ಶಾಲೆಗೆ ಬರಬೇಕಾದ ವ್ಯವಸ್ಥೆ ನಿಲ್ಲಿಸಿ, ಪ್ರೌಢಶಾಲೆ ಆವರಣದಲ್ಲಿಯೇ ಊಟ ತಯಾರಿಸಲು ಕ್ರಮ ಕೈಗೊಳ್ಳುವಂತೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ನಾರಾಯಣಸ್ವಾಮಿ, ಕಾರ್ಯ ದರ್ಶಿ ಗಂಗರಾಜು, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ವಿ.ನಾರಾಯಣ ಸ್ವಾಮಿ, ಕಾರ್ಯದರ್ಶಿ ಮುನಿಕೃಷ್ಣ, ಸದಸ್ಯ ಶ್ರೀರಾಮ ರೆಡ್ಡಿ, ಮುಖ್ಯ ಶಿಕ್ಷಕರಾದ ಗೋಪಾಲಪ್ಪ, ಹರೀಶ್, ವೆಂಕಟನಾರಾಯಣ ರೆಡ್ಡಿ, ತಾಲ್ಲೂಕು ದೈಹಿಕ ಶಿಕ್ಷಣ ಸಮನ್ವಯಾ ಧಿಕಾರಿ ಶಿವಪ್ರಕಾಶ್, ಲಕ್ಷ್ಮೀನರಸಿಂಹಪ್ಪ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.