ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ: ಸಂಸದೆ ರಮ್ಯಾ

7

ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ: ಸಂಸದೆ ರಮ್ಯಾ

Published:
Updated:

ಮಳವಳ್ಳಿ: ಸರ್ಕಾರಿ ಶಾಲೆಯಲ್ಲಿ ಉತ್ತಮ ಸೌಲಭ್ಯ ನೀಡಿ ಗುಣಮಟ್ಟದ ಶಿಕ್ಷಣ ನೀಡಲು ಕೂನನಕೊಪ್ಪಲು ಗ್ರಾಮಸ್ಥರು ಮುಂದಾಗಿರುವುದು ಶ್ಲಾಘನೀಯ ಎಂದು ಸಂಸದೆ ರಮ್ಯಾ ಹರ್ಷ ವ್ಯಕ್ತಪಡಿಸಿದರು.

ತಾಲ್ಲೂಕಿನ ಕೂನನಕೊಪ್ಪಲು ಗ್ರಾಮದಲ್ಲಿ ಮಂಗಳವಾರ ಗ್ರಾಮಸ್ಥರು, ಸಾರ್ವಜನಿಕ ಶಿಕ್ಷಣ ಇಲಾಖೆ, ಜ್ಞಾನವಿ ಗ್ರಾಮೀಣಾಭಿವೃದ್ಧಿ ತಂಡದ ಸಹಯೋಗದಲ್ಲಿ ನಿರ್ಮಿಸಿದ್ದ ಸರ್ಕಾರಿ ಕಿರಿಯ ಶಾಲೆ ಕಟ್ಟಡವನ್ನು ಶಾಲೆ ಹೊಸ್ತಿಲು ಪೂಜೆ ಮಾಡುವ ಉದ್ಘಾಟಿಸಿ ಮಾತನಾಡಿದರು.ಕೆಲವರು ಮದುವೆ ಮತ್ತಿತರ ಕಾರ್ಯಗಳಿಗೆ ಹಣ ಕೇಳುತ್ತಾರೆ ಆದರೆ ಈ ಗ್ರಾಮದವರು ಸರ್ಕಾರಿ ಶಾಲೆ ನಿರ್ಮಿಸಲು ಹಣ ಕೇಳಿದಾಗ ತಮ್ಮ ತಂದೆಯ ಸ್ಮರಣಾರ್ಥ ಹಣ ನೀಡಿದೆ ಎಂದು ತಿಳಿಸಿದರು.ಶಾಸಕ ಪಿ.ಎಂ. ನರೇಂದ್ರಸ್ವಾಮಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್‌, ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಅದರಲ್ಲೂ ತೀರ ಹಿಂದುಳಿದ ಗ್ರಾಮಗಳ ಶಾಲೆಗಳಲ್ಲಿ ಶಿಕ್ಷಣ ನೀಡಬೇಕಿದೆ ಇದಕ್ಕೆ  ಸಹಕಾರ ನೀಡುತ್ತೇನೆ, ಇದರ ವಿಷಯದಲ್ಲಿ ಯಾರು ರಾಜಕೀಯ ಬೆರಸಿ ವ್ಯವಸ್ಥೆ ಹದಗೆಡಿಸಬೇಡಿ ಎಂದು ಮನವಿ ಮಾಡಿದರು.ಶಾಲಾ ಕಟ್ಟಡ ನಿರ್ಮಾಣಕ್ಕೆ ಸ್ಥಳ ದಾನ ನೀಡಿದ ದೇವರಾಜಚಾರಿ, ಸೊತ್ತಮಾದೇಗೌಡ, ಲೇಖಕಿ ಸರಸ್ವತಿ ಸೋಮನಾಥ್‌ ಅವರನ್ನು ಸನ್ಮಾನಿಸಲಾಯಿತು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಎಸ್‌. ಪ್ರಕಾಶ್‌, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಎಂ. ಸತೀಶ್‌, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹದೇವಮ್ಮ, ಎಸ್‌ಡಿಎಂಸಿ ಚೌಡೇಗೌಡ, ಗ್ರಾಮ ಪಂಚಾಯಿತಿ ಸದಸ್ಯ ಮಹದೇವಯ್ಯ, ಸಮುತ್ಥಾನ್. ಲಿ. ಮಾಜಿ ಉಪಾಧ್ಯಕ್ಷ ದಿನಕರಮೂರ್ತಿಕೃಷ್ಣ, ಜ್ಞಾನವಿ ಗ್ರಾಮೀಣಾಭಿವೃದ್ಧಿ ತಂಡದ ಅಧ್ಯಕ್ಷ ಎಂ. ನಾಗರಾಜು ಹಾಗೂ ಪದಾಧಿಕಾರಿಗಳು,

ಬ್ಲಾಕ್‌ ಕಾಂಗ್ರೆಸ್‌ ದೇವರಾಜು, ಪುಟ್ಟರಾಮು, ಯುವ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಾಜು,  ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ   ಸಿ. ವೆಂಕಟೇಶ್‌, ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌.ಎಂ. ರಾಮು, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹೇಶ್‌, ಮುಖ್ಯಶಿಕ್ಷಕ ಶಿವರಾಜು ಸೇರಿದಂತೆ  ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry