ಸರ್ಕಾರಿ ಶಾಲೆಯ ಗತಿ?

7

ಸರ್ಕಾರಿ ಶಾಲೆಯ ಗತಿ?

Published:
Updated:

ಗುಣಮಟ್ಟದ ಶಿಕ್ಷಣ ಬಯಸುವ ಬಡ ಮಕ್ಕಳು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಓದಲು ಬಯಸಿದರೆ ಆ ಖರ್ಚನ್ನು ಸರ್ಕಾರ ಭರಿಸುವುದಾಗಿ ತಿಳಿಸಿದೆ. ಯಾವುದೇ ನೆಪ ಹೇಳದೆ 25% ಇಂತಹ ಮಕ್ಕಳಿಗೆ ಎಲ್ಲ ಖಾಸಗಿ ಶಾಲೆಗಳೂ ಪ್ರವೇಶ ನೀಡಲೇಬೇಕೆಂದು ನಿರ್ದೇಶನವೂ ನೀಡಿದೆ. ಸರ್ಕಾರವೂ ಇದಕ್ಕೆ ಒಪ್ಪಿಯಾಗಿದೆ.   ಇದು ಸ್ವಾಗತಾರ್ಹ. ಹಾಗಾದರೆ ಸರ್ಕಾರ ತನ್ನ ಶೈಕ್ಷಣಿಕ ಸಂಸ್ಥೆಗಳಲ್ಲಿ  ಗುಣಮಟ್ಟದ ಶಿಕ್ಷಣ ನೀಡಲು ವಿಫಲವಾಗುತ್ತಿದೆ ಎಂದು ಪರೋಕ್ಷವಾಗಿ ಪ್ಪಿಕೊಂಡಂತಾಯಿತಲ್ಲವೆ..? ಈಗಾಗಲೇ ನಾನಾ ಕಾರಣಗಳಿಂದ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಈಗ ಗುಣಮಟ್ಟದ ಶಿಕ್ಷಣದ ಹೆಸರಿನಲ್ಲಿ ಮತ್ತು ವೆಚ್ಚವನ್ನು ಸರ್ಕಾರವೇ ಭರಿಸುವುದೆಂಬ ನಿಶ್ಚಿಂತೆಯಿಂದ ಸರ್ಕಾರಿ ಶಾಲೆಗಳ ಪಾಲಿನ ಇನ್ನಷ್ಟು ಮಕ್ಕಳು ಖಾಸಗಿ ಶಾಲೆಗಳತ್ತ ಗುಳೆ ಹೊರಟರೆ ಮಕ್ಕಳಿಲ್ಲವೆಂಬ ನೆಪದಲ್ಲಿ  ವಿಲೀನಕ್ಕೆ  (..!?)ಸಿದ್ಧವಾಗಬೇಕಾದ ಸರ್ಕಾರಿ ಶಾಲೆಗಳೆಷ್ಟು..? ಖಾಸಗಿ ಶಾಲೆಗಳಲ್ಲಿ ಮಾತ್ರ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ ಎಂಬ ವಾದಕ್ಕೆ ಯಾವ ತಾರ್ಕಿಕ ಆಧಾರವೂ ಇಲ್ಲ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗದಿರುವುದಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಶಿಕ್ಷಕರಿಲ್ಲದಿರುವುದೂ ಒಂದು ಕಾರಣ.    ಈಗ ಇನ್ನಷ್ಟು ಮಕ್ಕಳು ಅತ್ತ ಹೊರಟರೆ.. ಇತ್ತ ಮಕ್ಕಳ ಸಂಖ್ಯೆ ಕಡಿಮೆಯಾಗಿ, ಅವೈಜ್ಞಾನಿಕ ಶಿಕ್ಷಕ-ಮಕ್ಕಳ ಅನುಪಾತವೆಂಬ ಲೆಕ್ಕಾಚಾರದಿಂದ ಶಿಕ್ಷಕರ ಸಂಖ್ಯೆಯೂ ಕಡಿಮೆಯಾಗುತ್ತದೆ. ಇದರಿಂದ ಸರ್ಕಾರಿ ಶಾಲೆಗಳಲ್ಲೇ ಉಳಿಯುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವೆನ್ನುವುದು ಗಗನಕುಸುಮವಾಗದೆ..?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry