ಸರ್ಕಾರಿ ಶಿಕ್ಷಕರಿಂದ ಗುಣಮಟ್ಟ ಕುಸಿತ

ಶುಕ್ರವಾರ, ಮೇ 24, 2019
24 °C

ಸರ್ಕಾರಿ ಶಿಕ್ಷಕರಿಂದ ಗುಣಮಟ್ಟ ಕುಸಿತ

Published:
Updated:

ಶಿರಾ:`ಖಾಸಗಿ ಶಾಲೆಗಳ ಶಿಕ್ಷಕರು ಹೆಚ್ಚು ಶ್ರಮ ವಹಿಸಿ ದುಡಿಯುತ್ತಾರೆ. ಗುಣಮಟ್ಟದ ಶಿಕ್ಷಣ ನೀಡುತ್ತಾರೆ. ಸರ್ಕಾರಿ ಶಾಲೆಗಳ ಶಿಕ್ಷಕರ ಬೇಜವಾಬ್ದಾರಿಯಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ~ ಎಂದು

ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಶಿವಯೋಗಿಸ್ವಾಮಿ ಆಪಾದಿಸಿದರು.ನಗರದಲ್ಲಿ ಶನಿವಾರ ನಡೆದ ಮಧುಗಿರಿ ಶೈಕ್ಷಣಿಕ ಜಿಲ್ಲೆ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸದಸ್ಯರು ಮತ್ತು ಶಿಕ್ಷಕರ ಸಮಾವೇಶದಲ್ಲಿ ಅವರು ಮಾತನಾಡಿದರು.ಕೆಲವು ಅಧಿಕಾರಿಗಳು ಸಂಬಂಧಿಸಿದವರು ಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತರಲಿ ಎಂದೇ ವಿವಾದಾತ್ಮಕ ಆದೇಶ ಹೊರಡಿಸುತ್ತಾರೆ. ಖಾಸಗಿ ಶಾಲೆಗಳ ವಿಷಯದಲ್ಲೂ ಅಧಿಕಾರಿಗಳು ವಿವಾದಾತ್ಮಕ ಆದೇಶ ಹೊರಡಿಸಿ ನಂತರ ಆಡಳಿತ ಮಂಡಳಿಯವರಿಗೆ ಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತನ್ನಿ ಎಂದು ಹೇಳಿ ಕಾಲ ದೂಡುವ ಆಟ ಹೂಡಿರುತ್ತಾರೆ ಎಂದು ದೂರಿದರು. ರಾಜ್ಯ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಜಿ.ಎಸ್.ಶರ್ಮಾ ಉದ್ಘಾಟಿಸಿದರು.~ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಸಿ.ಜಯರಾಮಕಾವ್ ಅಧ್ಯಕ್ಷತೆ ವಹಿಸಿದ್ದರು. ಡಿಡಿಪಿಐ ಪಿ.ಹುಚ್ಚಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಮಾಧವ ರೆಡ್ಡಿ, ಪ್ರಸನ್ನಕುಮಾರ್, ಹನುಮಂತರಾಯಪ್ಪ ಉಪಸ್ಥಿತರಿದ್ದರು. ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಎಸ್.ಅನಂತರಾಂ ಸಿಂಗ್ ಸ್ವಾಗತಿಸಿ, ಕಾರ್ಯದರ್ಶಿ ಕೋಟೆ ಚಂದ್ರಶೇಖರ್ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry