ಸರ್ಕಾರಿ ಸಿಬ್ಬಂದಿಗೂ ವಸ್ತ್ರ ಸಂಹಿತೆ

7

ಸರ್ಕಾರಿ ಸಿಬ್ಬಂದಿಗೂ ವಸ್ತ್ರ ಸಂಹಿತೆ

Published:
Updated:
ಸರ್ಕಾರಿ ಸಿಬ್ಬಂದಿಗೂ ವಸ್ತ್ರ ಸಂಹಿತೆ

ಬೆಂಗಳೂರು: ರಾಜ್ಯ ಸರ್ಕಾರದ ಅಧಿ­ಕಾರಿ­­ಗಳು ಮತ್ತು ನೌಕರರು ಕರ್ತವ್ಯದ ಅವಧಿಯಲ್ಲಿ ಸರ್ಕಾರದ ಘನತೆಗೆ ಧಕ್ಕೆ ತಾರದಂತಹ ಸಭ್ಯ ಉಡುಪುಗಳನ್ನು ಮಾತ್ರ ಧರಿಸಬೇಕು ಎಂದು ಸೂಚಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಗುರುವಾರ ಸುತ್ತೋಲೆ ಹೊರಡಿಸಿದೆ.ಹೊಸದಾಗಿ ಸೇವೆಗೆ ಸೇರಿರುವ ಬಹು­­ತೇಕ ಕಿರಿಯ ನೌಕರರು ಕರ್ತವ್ಯದ ಅವಧಿಯಲ್ಲಿ ಧರಿಸುವ ಉಡುಪುಗಳು ಶೋಭೆ ತರುವಂತಿರುವುದಿಲ್ಲ ಎಂದು ರಾಜ್ಯ ಸರ್ಕಾರದ ಸಚಿವಾಲಯದ ನೌಕರರ ಸಂಘ ಆಕ್ಷೇಪ ಎತ್ತಿತ್ತು. ಸರ್ಕಾರಿ ನೌಕರರು ಮತ್ತು ಅಧಿಕಾರಿ­ಗಳಿಗೆ ‘ವಸ್ತ್ರ ಸಂಹಿತೆ’ ಜಾರಿಗೊಳಿಸು­ವಂತೆಯೂ ಮನವಿ ಸಲ್ಲಿಸಿತ್ತು. ಅದನ್ನು ಆಧರಿಸಿ ಸುತ್ತೋಲೆ ಹೊರಡಿಸಿರುವ ಇಲಾಖೆ, ‘ವಸ್ತ್ರ ಸಂಹಿತೆ’ ಪಾಲಿಸು­ವಂತೆ ಸೂಚನೆ ನೀಡಿದೆ.‘ಸರ್ಕಾರದಲ್ಲಿ ಸೇವೆಯಲ್ಲಿ­ರುವ ಅಧಿ­ಕಾರಿಗಳು ಮತ್ತು ನೌಕರರು ಸರ್ಕಾರದ ಘನತೆಗೆ ಧಕ್ಕೆ ಬಾರದಂತಹ ಮತ್ತು ಶೋಭೆ ತರುವಂತಹ ಸಭ್ಯ ಉಡುಪನ್ನೇ ಧರಿಸಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಈ ಕಾರಣ­­­ದಿಂದ ಎಲ್ಲರೂ ಸಭ್ಯ ಉಡುಪು­ಗಳನ್ನೇ ಧರಿಸಿ ಕಚೇರಿ ಕೆಲಸಕ್ಕೆ ಹಾಜರಾ­ಗ­ಬೇಕು’ ಎಂದು ಸುತ್ತೋಲೆಯಲ್ಲಿ ತಿಳಿಸ­ಲಾಗಿದೆ.ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯ­­ದರ್ಶಿ ಡಾ.ಶಾಲಿನಿ ರಜನೀಶ್‌ ಅವರು, ‘ಅಧಿಕಾರಿಗಳು ಮತ್ತು ನೌಕರ­ರಿಗೆ ವಸ್ತ್ರ ಸಂಹಿತೆ ನಿಗದಿ ಮಾಡಬೇಕು ಎಂದು ಸಚಿವಾಲಯ ನೌಕರರ ಸಂಘ ಮನವಿ ಸಲ್ಲಿಸಿತ್ತು. ಅಲ್ಲದೇ ಸರ್ಕಾರಿ ಸೇವೆಯಲ್ಲಿರುವವರು ಸಭ್ಯ ಉಡುಗೆ ಧರಿಸಿ ಕಚೇರಿಗೆ ಹಾಜರಾಗಬೇಕಾ­ದುದು ಅವರ ಕರ್ತವ್ಯ.ಈ ಕಾರಣ­ಕ್ಕಾಗಿಯೇ ಸುತ್ತೋಲೆ ಹೊರಡಿ­ಸಲಾ­ಗಿದೆ’ ಎಂದರು. ಎಲ್ಲ ಇಲಾಖೆಗಳ ಪ್ರಧಾನ ಕಾರ್ಯ­ದರ್ಶಿಗಳು, ಕಾರ್ಯ­ದರ್ಶಿ­ಗಳು, ಇಲಾಖಾ ಮುಖ್ಯಸ್ಥರು,  ಜಿಲ್ಲಾ­ಧಿಕಾರಿ­ಗಳು, ಜಿಲ್ಲೆಗಳ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ­ನಿರ್ವ­ಹಣಾ ಅಧಿಕಾರಿಗಳಿಗೆ ಈ ಸುತ್ತೋಲೆ­ರವಾನಿಸಿದ್ದು, ‘ವಸ್ತ್ರ ಸಂಹಿತೆ’ ಜಾರಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry