ಭಾನುವಾರ, ನವೆಂಬರ್ 17, 2019
29 °C

ಸರ್ಕಾರಿ ಸೀಟುಗಳ ಮಾರಾಟ ನಿಲ್ಲಲಿ

Published:
Updated:

ಇದೀಗ ತಾನೇ ಸಿಇಟಿ ಕೌನ್ಸೆಲಿಂಗ್ ಆರಂಭವಾಗಿದ್ದು ಅರ್ಹ ಅಭ್ಯರ್ಥಿಗಳು ಸೀಟು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.  ಉತ್ತಮ ರ‌್ಯಾಂಕ್ ಬಂದಿದ್ದರೂ ಇಂಜಿನಿಯರಿಂಗ್- ಮೆಡಿಕಲ್ ಸೀಟು ಆಯ್ಕೆ ಮಾಡದೇ ಬೇರೆಯದೇ ಕೋರ್ಸ್‌ಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಒಂದರಿಂದ ಮೂರು ಲಕ್ಷ ರೂಪಾಯಿಗಳ ಕೊಡುಗೆ ನೀಡುವ ಆಮಿಷ ಒಡ್ಡಿ,ಪ್ರತಿಷ್ಠಿತ ಕಾಲೇಜ್ ಒಂದರಲ್ಲಿ ಸೀಟು ಆಯ್ಕೆ ಮಾಡಿಕೊಳ್ಳುವಂತೆ ಮಾಡಿ, ಕೌನ್ಸೆಲಿಂಗ್ ನಂತರ ನೀಡಲಾಗುವ ಗ್ರೀನ್ ಕಾರ್ಡ್ ಮತ್ತು ಕೋರ್ಸ್‌ಗೆ ಸೇರಲು ಇಷ್ಟವಿಲ್ಲ ಎಂಬ ನಿರಾಕರಣೆ ಪತ್ರವನ್ನು ಮಧ್ಯವರ್ತಿಗಳಿಗೆ ನೀಡುವಂತೆ ಮಾಡಿ, ಸರ್ಕಾರಿ ಕೋಟಾದ ಸೀಟನ್ನು ಖಾಸಗಿ ಕೋಟಾಗೆ ಬದಲಾಯಿಸಿಕೊಳ್ಳುವ ಅನೈತಿಕ ವ್ಯವಹಾರ ಆರಂಭವಾಗಿದೆ.ವಿದ್ಯಾರ್ಥಿಗಳೇ, ದಯಮಾಡಿ ನಿಮ್ಮ ಸೀಟು ಮಾರಬೇಡಿ.  ಅನವಶ್ಯಕ ತೊಂದರೆಗೆ ಸಿಕ್ಕಿಕೊಳ್ಳಬೇಡಿ.  ಕಳೆದವರ್ಷ 5 ಸೀಟುಗಳು ಕ್ಯಾನ್ಸಲ್ ಆಗಿದ್ದು ಏಜೆಂಟರುಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ.ಬ್ಲಾಕ್ ಮಾಡಲಾದ ಸೀಟುಗಳು ಸರ್ಕಾರಕ್ಕೇ ಮರಳಿ ಹೋಗುತ್ತವೆ ಮತ್ತು ಹಾಗೆ ಮಾರಿಕೊಂಡ ವಿದ್ಯಾರ್ಥಿಯ ವಿವರಗಳನ್ನು ಸಿಇಟಿ ಬೋರ್ಡಿನಲ್ಲಿ ಪ್ರಕಟಿಸಲಾಗುತ್ತದೆ, ಅವರಿಗೆ ಬೇರೆ ಯಾವ ಕೋರ್ಸ್ ಸೇರುವ ಸಂದರ್ಭದಲ್ಲೂ ಈ ಅಂಶ ಗಮನಕ್ಕೆ ತೆಗೆದುಕೊಂಡು ಪ್ರವೇಶ ನಿರಾಕರಿಸುವ ಸಾಧ್ಯತೆ ಇದೆ~ ಎನ್ನುವ ನಿಯಮ ಮಾಡಬೇಕಿದೆ.

ಪ್ರತಿಕ್ರಿಯಿಸಿ (+)