ಸೋಮವಾರ, ಮೇ 23, 2022
26 °C

ಸರ್ಕಾರಿ ಸೌಲಭ್ಯ ಅರಿವಿಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಲೂರು: ಗ್ರಾಮಸಭೆ ಹಾಗೂ ಗ್ರಾಮಾಭಿವೃದ್ಧಿ ಯೋಜನೆಗಳ ಬಗ್ಗೆ ಗ್ರಾಮೀಣ ಭಾಗದ ಜನತೆಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಅರಿವು ಮೂಡಿಸಿದಾಗ ಅಭಿವೃದ್ಧಿ ಕಾರ್ಯ ಸರಾಗವಾಗಿ ನಡೆಯುತ್ತದೆ ಎಂದು ನೊಸಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ ತಿಳಿಸಿದರು.ಸೋಮವಾರ ತಾಲ್ಲೂಕಿನ ನೊಸಗೆರೆ ಗ್ರಾ.ಪಂ ಆವರಣದಲ್ಲಿ ಹಮ್ಮಿಕೊಂಡಿದ್ದ ಗ್ರಾಮಸಭೆಯಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಇರುವ ಪ್ರತಿಯೊಂದು ಹಳ್ಳಿಯಲ್ಲಿಯೂ ಮೂಲಭೂತ ಸಮಸ್ಯೆಗಳನ್ನು ಅರಿಯಲು ಮೊದಲನೇ ಹಂತದಲ್ಲಿ ಪ್ರತಿಯೊಂದು ಗ್ರಾಮಗಳಲ್ಲಿ ವಾರ್ಡ್ ಸಭೆಗಳನ್ನು ನಡೆಸಬೇಕು. ಜನರಿಂದ ಕುಂದು ಕೊರತೆಗಳ ಅಹವಾಲುಗಳನ್ನು ಸ್ವೀಕರಿಸಿ ನಂತರ ಸ್ಥಳದಲ್ಲಿಯೇ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.ಜಿ.ಪಂ.ಸದಸ್ಯೆ ಯಲ್ಲಮ್ಮ ಮಾತನಾಡಿ ತರಾತುರಿಯಲ್ಲಿ ಪ್ರತಿದಿನ ನಾಲ್ಕು, ಐದು ಗ್ರಾಮಸಭೆಗಳನ್ನು ನಡೆಸುವುದರಿಂದ ಸಭೆಗಳ ಸಮಗ್ರ ಮಾಹಿತಿ ಜನತೆಗೆ ತಲುಪವುದಿಲ್ಲ. ಸರ್ಕಾರದಿಂದ ಕೃಷಿ, ತೋಟಗಾರಿಕೆ, ರೇಷ್ಮೆ, ಸಮಾಜ ಕಲ್ಯಾಣ ಮತ್ತು ಶಿಕ್ಷಣ ಸೇರಿದಂತೆ ಇತರೆ ಇಲಾಖೆಗಳಿಗೆ ಬರುವ ಅನುದಾನ ಬಗ್ಗೆ ಮಾಹಿತಿ ನೀಡುವುದು ಅಸಾಧ್ಯ. ಇದಕ್ಕಾಗಿ ಪ್ರತಿ ದಿನ ಎರಡು ಗ್ರಾಮಸಭೆಗಳನ್ನು ನಡೆಸಲು ಸರ್ಕಾರ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ಶೇ.25ರ ಯೋಜನೆಯಡಿ ಪರಿಶಿಷ್ಠ ಜಾತಿ, ಪಂಗಡದವರಿಗೆ ಕುರಿ ಸಾಕಾಣಿಕೆಗೆ 16 ಫಲಾನುಭವಿಗಳಿಗೆ ತಲಾ 4 ಸಾವಿರ ರೂಪಾಯಿ ಪ್ರೋತ್ಸಾಹ ಧನದ ಚೆಕ್‌ಗಳನ್ನು ವಿತರಿಸಲಾಯಿತು.ತಾ.ಪಂ.ಸದಸ್ಯ ಪುಟ್ಟಸ್ವಾಮಿ, ನೋಡಲ್ ಅಧಿಕಾರಿ ವೆಂಕಟಾ ಚಲಪತಿ, ಗ್ರಾ.ಪಂ.ಉಪಾಧ್ಯಕ್ಷೆ ಲಕ್ಷ್ಮಮ್ಮ, ಸದಸ್ಯರಾದ ಬಿ.ಎನ್.ಮಲ್ಲಿಕಾರ್ಜುನಯ್ಯ, ಕೆ.ಎಂ.ಅಶೋಕ್‌ಕುಮಾರ್, ಪಾರ್ವತಮ್ಮ, ವೆಂಕಟೇಶಪ್ಪ, ಕಲಾವಿದ ನಾಗರಾಜ್, ಸಿ.ಎಂ.ನಾರಾಯಣಸ್ವಾಮಿ, ಎಂ.ನಾಗರಾಜ್, ಕೃಷ್ಣಪ್ಪ, ಪ್ರಮಿಳಮ್ಮ, ಮಂಗಳಮ್ಮ, ದೊಮ್ಮಲೂರು ಮುನಿರಾಜು, ಮುಖಂಡ ಚಿನ್ನಸ್ವಾಮಿಗೌಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಿಶೋರ್‌ಕುಮಾರ್, ಬಿಲ್ ಕಲೆಕ್ಟರ್ ಟಿ.ವಿ.ನಾಗೇಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.