ಸರ್ಕಾರಿ ಸೌಲಭ್ಯ ಪಡೆಯಲು ಶಾಸಕ ಕರೆ

7

ಸರ್ಕಾರಿ ಸೌಲಭ್ಯ ಪಡೆಯಲು ಶಾಸಕ ಕರೆ

Published:
Updated:

ಯಳಂದೂರು: ನಾಯಕ ಜನಾಂಗದ ಸಾಮಾಜಿಕ, ಶೈಕ್ಷಣಿಕ ಹಾಗೂ ಅರ್ಥಿಕ ಅಭಿವೃದ್ಧಿಯ ಉದ್ದೇಶದಿಂದ ಸರ್ಕಾರ ಪ್ರತ್ಯೇಕ ನಿಗಮ ಸ್ಥಾಪಿಸಿದ್ದು, ಜನತೆ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಜಿ.ಎನ್.ನಂಜುಂಡಸ್ವಾಮಿ ಕರೆ ನೀಡಿದರು.ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿಯಲ್ಲಿ ಅವರು ಮಾತನಾಡಿದರು.ಸಮಾಜ ಕಲ್ಯಾಣ ಇಲಾಖೆಗೆ ಸರ್ಕಾರ 4200 ಕೋಟಿ ರೂಪಾಯಿ ಅನುದಾನ ಮೀಸಲಿರಿಸಿದೆ. ಇದರಲ್ಲಿ 1628 ಕೋಟಿ ರೂಪಾಯಿಗಳನ್ನು ಪರಿಶಿಷ್ಟ ಪಂಗಡದ ನಿಗಮಕ್ಕೆ ನೀಡಲಾಗಿದೆ. ಹೀಗಾಗಿ  ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ರೂ. 6 ರಿಂದ 8 ಕೋಟಿ ಲಭ್ಯವಾಗಲಿದ್ದು ಎಂದು ತಿಳಿಸಿದರು.ಶಿಕ್ಷಕ ಪಿ.ನಾಗೇಂದ್ರ ಮಾತನಾಡಿ, ಜಿ.ಪಂ. ಉಪಾಧ್ಯಕ್ಷ ಸಿದ್ದರಾಜು, ತಾ.ಪಂ. ಉಪಾಧ್ಯಕ್ಷೆ ವಿಜಯಲಕ್ಷ್ಮಿ    ನಂಜುಂಡ ಮಾತನಾಡಿದರು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ತಾ.ಪಂ. ಅಧ್ಯಕ್ಷೆ ಗೌರಮ್ಮ ಮಹದೇವಸ್ವಾಮಿ, ಸದಸ್ಯರಾದ ವೆಂಕಟಾಚಲ, ನಾಗೇಶ್, ರಾಮಚಂದ್ರು, ಕೆ.ಪಿ.ಶಿವಣ್ಣ, ಗಂಗಾಮಣಿ ರೇವಣ್ಣ, ಲಕ್ಷ್ಮಿದೇವಿ ಈರಣ್ಣ, ಪ.ಪಂ. ಅಧ್ಯಕ್ಷೆ ಮೀನಾಕ್ಷಿ ಮಹದೇವಸ್ವಾಮಿ, ಉಪಾಧ್ಯಕ್ಷೆ ಚಿನ್ನಮ್ಮ ಮರಯ್ಯ, ಸದಸ್ಯರಾದ ಜಯರಾಂ. ರಮೇಶ್, ಸೋಮನಾಯಕ, ನಾಯಕ ಸಂಘದ ಅಧ್ಯಕ್ಷ ಮುರುಳಿಕೃಷ್ಣ, ಕಾರ್ಯದರ್ಶಿ, ಉಮೇಶ್, ಶಿವಯ್ಯನಾಯಕ, ಟಿಎಪಿಸಿಎಂಎಸ್ ಅಧ್ಯಕ್ಷ ಶಾಂತರಾಜು, ಮೈಸೂರು ಸೀನ, ಕಂದಹಳ್ಳಿ ಮಹೇಶ್, ತಹಶೀಲ್ದಾರ್ ಜಗದೀಶ್, ಇಒ ಚಿಕ್ಕಲಿಂಗಯ್ಯ, ಬಿಇಒ ಪಿ.ಮಂಜುನಾಥ್ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry