ಶುಕ್ರವಾರ, ಜೂನ್ 25, 2021
30 °C

ಸರ್ಕಾರ ವಿಸರ್ಜಿಸಿ ಜನಾದೇಶ ಪಡೆಯಲಿ: ಪುಟ್ಟಣ್ಣಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ರೈತ ಸಂಘದ ಮುಖಂಡರು, ಸರ್ವೋದಯ ಕರ್ನಾಟಕ ಪಕ್ಷದ ಚಿನ್ಹೆಯಡಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 50 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ಕಾಯಾ ಧ್ಯಕ್ಷರೂ ಆಗಿರುವ, ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ತಿಳಿಸಿದರು.ರಾಜಕೀಯ ಕ್ಷೇತ್ರದಲ್ಲಿ ರೈತ ಸಂಘ ನಿಲುವು ಸ್ಪಷ್ಟಪಡಿಸುವುದು ಹಾಗೂ ಯಾವ್ಯಾವ ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು ಎಂಬುವುದರ ಬಗೆಗೆ ಈ ತಿಂಗಳಾಂತ್ಯಕ್ಕೆ ನಡೆಯುವ ಸಂಘದ ರಾಜ್ಯ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗು ವುದು ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಹೇಳಿದರು.ಜನಾದೇಶಕ್ಕೆ ಹೋಗಲಿ: ರಾಜ್ಯದಲ್ಲಿ ಆಡಳಿತ ಕುಸಿದಿದೆ. ಪಕ್ಷದಲ್ಲೇ ಆಂತರಿಕ ಭಿನ್ನಮತ ಉಲ್ಬಣಿಸಿದೆ. ಸರ್ಕಾರದ ಬಗೆಗೆ ಜನರೂ ವಿಶ್ವಾಸ ಕಳೆದು ಕೊಂಡಿದ್ದಾರೆ. ಹೀಗಾಗಿ, ಜನಾದೇಶ ಪಡೆಯಲು ಈ ಕೂಡಲೇ ಸರ್ಕಾರ ವಿಸರ್ಜಿಸಬೇಕು ಎಂದು ಆಗ್ರಹ ಪಡಿಸಿದರು.ರಾಜ್ಯದಲ್ಲಿ ಬಿಜೆಪಿ ಅಂಥ ಕೆಟ್ಟ ಸರ್ಕಾರವನ್ನು ಎಂದೂ ನೋಡಿಲ್ಲ. ಇವರಿಗೆ ಜನರ ಭಯವಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ, `ರಾಜಕೀಯ ಸಂಸ್ಕೃತಿ~ ಹಾಳಾಗಿ ಹೋಗಿದೆ. ಕುರ್ಚಿ ಗಾಗಿ ನಿರಂತರ ಘರ್ಷಣೆ ನಡೆದಿದ್ದು, ಪದೇ ಪದೇ ರೆಸಾರ್ಟ್‌ಗೆ ಹೋಗುತ್ತಿ ರು ವುದು ಅಸಹ್ಯಕರ ಎಂದು ಟೀಕಿಸಿದರು.ನಕರಾತ್ಮಕ ಕಾರಣಗಳಿಗಾಗಿಯೇ ಕೆಟ್ಟ ಹೆಸರು ಪಡೆದಿದ್ದ ಬಿಹಾರ ರಾಜ್ಯ ಸುಧಾರಿಸಿದೆ. ಉತ್ತಮ ಸಂಸ್ಕೃತಿಗೆ ಹೆಸರಾಗಿದ್ದ ಕರ್ನಾಟಕ ಇಂದು, ಅಧೋಗತಿಯತ್ತ ಹೋಗುತ್ತಿದೆ. ಇದಕ್ಕೆ, ರಾಜಕಾರಣಿಗಳ ಕೆಟ್ಟ ನಡಾವಳಿಕೆಗಳೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಧಾರ್ಮಿಕ ಮುಖಂಡರು ರಾಜಕೀಯ ಅಭಿಪ್ರಾಯ ಗಳನ್ನು ಯಾರೊಬ್ಬರ ಪರವಾಗಿಯೂ ವ್ಯಕ್ತಪಡಿಸ ಬಾರದು. ಆದರೆ, ಕೆಲ ಸ್ವಾಮೀಜಿಗಳು, ಸ್ವಜಾತಿ ಮುಖಂಡರುಗಳ ಪರ ಹೇಳಿಕೆಗಳನ್ನು ನೀಡುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.