ಸರ್ದಾರ್, ಸಂದೀಪ್‌ಗೆ ಅವಕಾಶ

ಸೋಮವಾರ, ಮೇ 27, 2019
28 °C

ಸರ್ದಾರ್, ಸಂದೀಪ್‌ಗೆ ಅವಕಾಶ

Published:
Updated:

ನವದೆಹಲಿ (ಪಿಟಿಐ): ಭಾರತದ ಹೆಸರಾಂತ ಹಾಕಿ ಆಟಗಾರರಾದ ಸರ್ದಾರ್ ಸಿಂಗ್ ಮತ್ತು ಸಂದೀಪ್ ಸಿಂಗ್ ಅವರು ಪ್ರತಿಷ್ಠಿತ ಯೂರೊ ಹಾಕಿ ಲೀಗ್‌ನಲ್ಲಿ ಹಾಲೆಂಡ್‌ನ ಕ್ಲಬ್ ಒಂದರ ಪರ ಆಡಲು ಆಹ್ವಾನ ಪಡೆದಿದ್ದಾರೆ.

ಈ ಹಿನ್ನೆಲೆಯಲ್ಲಿ ಇವರಿಬ್ಬರೂ ಹಾಕಿ ಇಂಡಿಯ ಮತ್ತು ಹರಿಯಾಣ ಪೊಲೀಸ್ ಇಲಾಖೆಯಿಂದ ಅನುಮತಿಗಾಗಿ ಮನವಿ ಸಲ್ಲಿಸಿದ್ದಾರೆ.ಇಬ್ಬರೂ ಹರಿಯಾಣ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳಾಗಿದ್ದಾರೆ. ಎರಡೂ ಕಡೆಯಿಂದ ಹಸಿರು ನಿಶಾನೆ ಸಿಕ್ಕಿದರೆ ಇಬ್ಬರೂ ಸೆಪ್ಟೆಂಬರ್ ಮೊದಲ ವಾರದಿಂದ ಎರಡು ತಿಂಗಳ ಕಾಲ ಯೂರೊ ಲೀಗ್‌ನಲ್ಲಿ  ಲಾರೆನ್ ಕ್ಲಬ್ ಪರ ಆಡಲಿದ್ದಾರೆ.ಯೂರೊಪಿಯನ್ ಹಾಕಿ ಫೆಡರೇಷನ್ ಪ್ರತಿ ವರ್ಷವೂ ಯೂರೊ ಹಾಕಿ ಲೀಗ್ ಅನ್ನು ಸಂಘಟಿಸುತ್ತಿದ್ದು, ಇದರಲ್ಲಿ ಜಗತ್ತಿನ ಪ್ರಖ್ಯಾತ ಆಟಗಾರರೆಲ್ಲಾ ಪಾಲ್ಗೊಳ್ಳುತ್ತಾರೆ.ಸರ್ದಾರ್ ಸಿಂಗ್ ಪ್ರಸಕ್ತ ಸಾಲಿನ ಅರ್ಜುನ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry