ಭಾನುವಾರ, ಡಿಸೆಂಬರ್ 15, 2019
26 °C

ಸರ್ವಧರ್ಮ ಸಮನ್ವಯ ಸಾರುವ ಗಣೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ವಧರ್ಮ ಸಮನ್ವಯ ಸಾರುವ ಗಣೇಶ

ಶನಿವಾರಸಂತೆ: ಸಮೀಪದ ಹೆಮ್ಮನೆ ಗ್ರಾಮದಲ್ಲಿ ಸರ್ವಧರ್ಮ ಸಮನ್ವಯ ಸಾರುವ ಸಂಕೇತವಾಗಿ ವೀರಗಣಪತಿ ಸೇವಾ ಸಮಿತಿಯು 14 ವರ್ಷಗಳಿಂದ ಪ್ರತಿವರ್ಷ ಗೌರಿ- ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿದೆ.ಗ್ರಾಮದಲ್ಲಿ 54 ಕುಟುಂಬಗಳಿದ್ದು, ಹಿಂದೂ-–ಮುಸ್ಲಿಂ– -ಕ್ರೈಸ್ತ ಧರ್ಮದ ಸದಸ್ಯರು ಒಂದಾಗಿ ವೀರಗಣಪತಿ ಸೇವಾ ಸಮಿತಿ ಸ್ಥಾಪನೆ ಮಾಡಿಕೊಂಡಿದ್ದಾರೆ. ಸಮಿತಿಯಲ್ಲಿ 20 ಮಂದಿ ಸದಸ್ಯರಿದ್ದು ಪ್ರತಿವರ್ಷ ಗೌರಿ-ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.ಈ ವೇಳೆ ಪ್ರತಿದಿನ ಸಂಜೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾಕೂಟ ಹಾಗೂ ಶ್ರೀರಾಮ ಭಜನೆ ಮಂಡಳಿಯಿಂದ ಭಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗುತ್ತಿದೆ. ಸ್ಪರ್ಧಾ ಕಾರ್ಯಕ್ರಮ ಗಳಲ್ಲಿ ವಿಜೇತರಾದವರಿಗೆ ಬಹುಮಾನ­ಗಳನ್ನು ವಿತರಿಸಲಾಗುತ್ತದೆ.ಸಮಿತಿಯಲ್ಲಿ ಸರ್ವಧರ್ಮಗಳಿಗೂ ಪ್ರಾತಿನಿಧ್ಯವಿದೆ.15 ದಿನಗಳ ಕಾಲ ನಡೆವ ಗಣೇಶೋತ್ಸವದಲ್ಲಿ ಪ್ರತಿದಿನ ನಡೆಯುವ ಪೂಜಾ ಕಾರ್ಯ­ಕ್ರಮಗಳಲ್ಲಿ ಹಲವಾರು ಜನರು ಪಾಲ್ಗೊಳ್ಳುತ್ತಾರೆ. ಪ್ರತಿನಿತ್ಯ ಪ್ರತಿಮನೆಯಿಂದ ವಿಶೇಷ ಪೂಜೆ ಮಾಡಲಾಗುತ್ತದೆ.ಪೂಜಾಕಾರ್ಯಕ್ಕೆ ರೂ.1 ಲಕ್ಷ ವೆಚ್ಚ ಮಾಡಲಾಗುತ್ತಿದ್ದು, ಸಮಿತಿ ಸದಸ್ಯರೇ ಸ್ವಯಂ ಸೇವಕರಾಗಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ.ಸಮಿತಿಯ ಅಧ್ಯಕ್ಷರಾಗಿ ಸಮೀರ್, ಉಪಾಧ್ಯಕ್ಷರಾಗಿ ಬಸವರಾಜ್, ಕಾರ್ಯದರ್ಶಿಯಾಗಿ ಹೊನ್ನಪ್ಪ ಹಾಗೂ ಹಿಂದೂ-, ಮುಸ್ಲಿಂ-, ಕ್ರೈಸ್ತ ಧರ್ಮಗಳ 10 ನಿರ್ದೇಶಕರು ಇದ್ದಾರೆ.

ಪ್ರತಿಕ್ರಿಯಿಸಿ (+)