ಸರ್ವಪಕ್ಷಗಳ ಜತೆ ಚರ್ಚೆ: ಖುರ್ಷಿದ್

7

ಸರ್ವಪಕ್ಷಗಳ ಜತೆ ಚರ್ಚೆ: ಖುರ್ಷಿದ್

Published:
Updated:

ನವದೆಹಲಿ (ಪಿಟಿಐ):  ಜನಪ್ರತಿನಿಧಿಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಅವಕಾಶ ನೀಡುವ ಹಕ್ಕಿನ  ಕುರಿತಂತೆ ಅಣ್ಣಾ ತಂಡದ ಪ್ರಸ್ತಾವವನ್ನು ಸರ್ಕಾರ ಪರಿಶೀಲಿಸುತ್ತಿದೆ. ಈ ವಿಷಯವು ಚುನಾವಣಾ ಸುಧಾರಣೆ ಕುರಿತ ಸರ್ವಪಕ್ಷಗಳ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ ಎಂದು ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಸೋಮವಾರ ಹೇಳಿದ್ದಾರೆ.ಜನಪ್ರತಿನಿಧಿಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಆಲೋಚನಾ ವಿಧಾನದ ಬಗ್ಗೆ ಚುನಾವಣಾ ಆಯೋಗ ಅಸಮ್ಮತಿ ಸೂಚಿಸಿದ ಮರುದಿನ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಈ ಹೇಳಿಕೆ ನೀಡಿದ್ದಾರೆ.ಚುನಾಯಿತ ಜನಪ್ರತಿನಿಧಿಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಹಕ್ಕಿನ ಬೇಡಿಕೆ ಈಡೇರಿಸುವುದು ಕಷ್ಟದ ಕಾರ್ಯ. ಆದರೆ ಸರ್ಕಾರ `ಈ ಕುರಿತ ಸಾಧಕ- ಬಾಧಕ ಪರಿಶೀಲಿಸುತ್ತಿದೆ~ ಎಂದಿದ್ದಾರೆ.`ಭಾರತ ಮತ್ತು ಇಂಡಿಯಾ: ಸವಾಲುಗಳು ಹಾಗೂ ಮಹತ್ವಾಕಾಂಕ್ಷೆಗಳು~ ಕುರಿತಂತೆ ಇಲ್ಲಿ ಮಾತನಾಡಿದ ಅವರು `ಜನಪ್ರತಿನಿಧಿಗಳನ್ನು ತಿರಸ್ಕರಿಸುವ ಅವಕಾಶ ನೀಡುವ ಹಕ್ಕನ್ನು~ ಜಾರಿಗೊಳಿಸುವ ಅಗತ್ಯದ ಬಗ್ಗೆ ನಮ್ಮನ್ನು ಪ್ರಶ್ನಿಸುವ ಪ್ರಭಾವಶಾಲಿ ಗುಂಪು ಇದೆ~ ಎಂದೂ ತಿಳಿಸಿದ್ದಾರೆ.ಪಕ್ಷದ ನಾಯಕರ ಉಪಲಬ್ದತೆ ಆಧರಿಸಿ ಸರ್ವಪಕ್ಷಗಳ ಸಭೆಯು ಈ ತಿಂಗಳಲ್ಲಿ ಅಥವಾ ನವೆಂಬರ್‌ನಲ್ಲಿ ನಡೆಯುವ ಸಂಭವ ಇದೆ. ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಸಭೆಯಲ್ಲಿ ಮಾತನಾಡುವ ಸಾಧ್ಯತೆ ಇದೆ ಎಂದು ವಿವರಿಸಿದ್ದಾರೆ. ಅಮೆರಿಕದ ಮತ್ತು ಯೂರೋಪ್‌ನ ಕೆಲವೆಡೆಗಳಲ್ಲಿ ವಿಶೇಷವಾಗಿ ಮುನ್ಸಿಪಲ್ ಚುನಾವಣೆಗಳಲ್ಲಿನ ಕ್ರಮದಿಂದ ಪ್ರೇರಿತರಾಗಿ ಈ ಹಕ್ಕಿಗಾಗಿ `ಪ್ರಬಲ ಬೇಡಿಕೆಗಳು~ ಕೇಳಿ ಬಂದಿವೆ.15 ಲಕ್ಷಕ್ಕಿಂತಲೂ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರದಲ್ಲಿ ಜನಪ್ರತಿನಿಧಿಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಅವಕಾಶ ನೀಡುವ ಹಕ್ಕು ಇದ್ದಲ್ಲಿ 1ಲಕ್ಷ ಅಥವಾ 50 ಸಾವಿರ ಜನರಿಂದ ಸಹಿ ಪಡೆಯಬೇಕಾಗುತ್ತದೆ. ಈ ಸಹಿಗಳನ್ನು ದೃಢೀಕರಿಸುವುದು ಸುಲಭದ ಕೆಲಸವಲ್ಲ. ಆದರೆ ನಾವು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ~ ಎಂದು ತಿಳಿಸಿದ್ದಾರೆ.ಕಾನೂನು ಸಚಿವಾಲಯವು ಈ ವಿಷಯದ ಬಗ್ಗೆ ಟಿಪ್ಪಣಿಯನ್ನೂ ಸಿದ್ಧಪಡಿಸಿದೆ ಎಂದು ಸಚಿವರು ಹೇಳಿದ್ದಾರೆ.

`ಚುನಾವಣಾ ಆಯುಕ್ತರ ಜತೆಗೂ ನಾನು ಈ ಬಗ್ಗೆ ಚರ್ಚಿಸಿದ್ದೇನೆ. ಅವರು ಮಾಧ್ಯಮಗಳ ಜತೆ ಮಾತನಾಡಿ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಆದರೆ ನಾವು ಈ ವಿಷಯದ ಬಗ್ಗೆ ಸರ್ವ ಪಕ್ಷಗಳೊಂದಿಗೆ ಚರ್ಚಿಸಲು ಬಯಸುತ್ತೇವೆ~ ಎಂದು ಸ್ಪಷ್ಟ ಪಡಿಸಿದ್ದಾರೆ.ಜನಪ್ರತಿನಿಧಿಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಅವಕಾಶ ನೀಡುವ ಹಕ್ಕು ಬಗ್ಗೆ ತಮ್ಮ ಸಮ್ಮತಿ ಇಲ್ಲ. ಇಂತಹ ಕ್ರಮಗಳು ರಾಷ್ಟ್ರವನ್ನು `ಅಸ್ಥಿರಗೊಳಿಸುತ್ತವೆ~ ಎಂದು ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಷಿ ಭಾನುವಾರ ಟಿವಿ ಸಂದರ್ಶನವೊಂದರಲ್ಲಿ ಹೇಳಿದ್ದರು.ಬೃಹತ್ ರಾಷ್ಟ್ರದಂತಹ ಭಾರತಕ್ಕೆ ಇದು ಸೂಕ್ತಆಗುವುದಿಲ್ಲ ಎಂದು ಖುರೇಷಿ ಅಭಿಪ್ರಾಯ ಪಟ್ಟಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry