ಸರ್ವಪಕ್ಷ ಸಭೆಗೆ ಆಗ್ರಹ

7

ಸರ್ವಪಕ್ಷ ಸಭೆಗೆ ಆಗ್ರಹ

Published:
Updated:

ಬೆಂಗಳೂರು: `ಲೋಕಾಯುಕ್ತ ನೇಮಕಾತಿ ವಿಚಾರದಲ್ಲಿ ಸರ್ಕಾರ ವಿನಾ ಕಾರಣ ಗೊಂದಲ ಸೃಷ್ಟಿಸುವುದಕ್ಕಿಂತ ಸರ್ವಪಕ್ಷ ಸಭೆ ಕರೆದು ಲೋಕಾಯುಕ್ತ ಹೆಸರನ್ನು ಅಂತಿಮಗೊಳಿಸಬೇಕು~ ಎಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಸರ್ಕಾರ ಲೋಕಾಯುಕ್ತಕ್ಕೆ ಸೂಚಿಸುವ ಹೆಸರನ್ನು ವಿರೋಧ ಪಕ್ಷಗಳು ವಿರೋಧಿಸುತ್ತಲೇ ಬಂದಿವೆ. ಆದರೂ ಸರ್ಕಾರ ಹೊಸ ಹೆಸರುಗಳನ್ನು ಸೂಚಿಸುವ ಪ್ರಕ್ರಿಯೆಯನ್ನು ಮುಂದುವರೆಸುತ್ತಲೇ ಇದೆ. ಈ ಗೊಂದಲಗಳ ನಿವಾರಣೆಗೆ ಸರ್ಕಾರ ಎಲ್ಲ ವಿರೋಧ ಪಕ್ಷಗಳ ನಾಯಕರ ಸಭೆ ನಡೆಸಿ ಅಂತಿಮವಾಗಿ ಒಬ್ಬರನ್ನು ನೇಮಕ ಮಾಡುವುದು ಸೂಕ್ತ~ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry