ಸರ್ವೋದಯದ ಕನಸು ನನಸಾಗಿಸಲು ಕರೆ

7

ಸರ್ವೋದಯದ ಕನಸು ನನಸಾಗಿಸಲು ಕರೆ

Published:
Updated:

ಮಾಗಡಿ: ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗೋಣ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹರ್ತಿ ಪಟೇಲ್ ಭೋಜಣ್ಣ ಹೇಳಿದರು.ತಾಲ್ಲೂಕಿನ ಬೆಳಗುಂಬದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರ ಆಯ್ಕೆಗಾಗಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಸಮಾಜದ ಎಲ್ಲಾ ವರ್ಗದವರನ್ನು ಸಮಾನತೆಯಿಂದ ಕಾಣುವ ಮೂಲಕ ಗಾಂಧಿ ಅವರ ಸರ್ವೋದಯದ ಕನಸನ್ನು ನನಸಾಗಿಸೋಣ ಎಂದರು. ಜಿ.ಪಂ. ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿದರು.ಆಯ್ಕೆ: ಬೆಳಗುಂಬದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತಕ್ಕೆ 2ನೇ ಬಾರಿಗೆ ಅಧ್ಯಕ್ಷರಾಗಿ ಬಿ.ವಿ. ಹೊನ್ನಪ್ಪ, ನಿರ್ದೇಶಕರಾಗಿ ಸೂರಪ್ಪ, ರೇಣುಕಮ್ಮ, ಬಿ.ಎನ್.ಕೋಟಪ್ಪ, ಎಚ್.ಎಸ್. ಹೊನ್ನರಾಜು, ಭಾಗ್ಯಮ್ಮ, ಬೈಲಪ್ಪ ಆಯ್ಕೆಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry