ಸೋಮವಾರ, ಏಪ್ರಿಲ್ 19, 2021
28 °C

ಸರ್ವ ರೋಗಕ್ಕೂ ಆಯುರ್ವೇದ ಮದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಒತ್ತಡದ ಬದುಕಿನಲ್ಲಿ ಮನುಷ್ಯ ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾನೆ. ರೋಗಕ್ಕೆ ಶಾಶ್ವತ ಪರಿಹಾರ ಪಡೆಯಲು ಆಯುರ್ವೇದಿಂದ ಮಾತ್ರ ಸಾಧ್ಯ ಎಂದು ಶಾಸಕ ಡಾ.ಎ.ಬಿ. ಮಾಲಕರಡ್ಡಿ ಹೇಳಿದರು.ಶಿವಮೊಗ್ಗದ ಚಿಗುರು ಜನಸೇವಾ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡಿರುವ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಆಯುರ್ವೇದ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸ್ಪರ್ಧಾತ್ಮಕ ಯುಗದಲ್ಲಿ ನಾವೆಲ್ಲರೂ ನಾನಾ ಕಾರಣಗಳಿಂದ ಒತ್ತಡದಲ್ಲಿ ಜೀವನ ಸಾಗಿಸುತ್ತಿದ್ದು, ನಮ್ಮನ್ನು ಅನೇಕ ರೋಗಗಳು ಕಾಡುತ್ತಿವೆ ಇದಕ್ಕೆ ಆಯುರ್ವೇದ ಗಿಡ ಮೂಲಿಕೆಯೇ ಮದ್ದು. ಆಯುರ್ವೇದ ಗಿಡಮೂಲಿಕೆ ಒಳ್ಳೆ ಔಷಧಿಯಾಗಿದ್ದು, ಇದರ ಸದುಪಯೋಗ ಪಡೆದುಕೋಳ್ಳಬೇಕು ಎಂದು ಸಲಹೆ ನೀಡಿದರು.

ಚಿಗುರು ಜನಸೇವಾ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ವಿಜಯಕುಮಾರ ನಾಯರ್ ಮಾತನಾಡಿ, 34 ತಾಲ್ಲೂಕಿನಲ್ಲಿ ಇಂತಹ ವಸ್ತು ಪ್ರದರ್ಶನ ನಡೆಸಲಾಗಿದ್ದು, ಇದೀಗ ಯಾದಗಿರಿಯಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದರು.ಧನ್ವಂತರಿ ಸ್ವದೇಶಿ ಪಾರಂಪರಿಕ ವೈದ್ಯ ಪರಿಷತ್‌ನ ವೈದ್ಯ ಕೆ. ದಿನೇಶ್, ಗಿಡಮೂಲಿಕೆಗಳ ಉಪಯೋಗ ಕುರಿತು ಉಪನ್ಯಾಸ ನೀಡಿದರು.ಮಾಜಿ ಶಾಸಕ ಡಾ. ವೀರವಸವಂತರಡ್ಡಿ ಮುದ್ನಾಳ, ಡಿಎಸ್ಪಿ ಎಸ್.ಡಿ. ಬಾಗವಾಡಮಠ, ಜಿಲ್ಲಾ ಆಯುಷ್ ಅಧಿಕಾರಿ ಡಾ. ವಂದನಾ ಗಾಳಿ, ನಗರಸಭೆ ಸದಸ್ಯ ಸಿದ್ರಾಮರಡ್ಡಿ ತಿಪ್ಪಾರಡ್ಡಿ, ಸಿದ್ಧರಾಜ ರಡ್ಡಿ, ಪ್ರಾಚಾರ್ಯ ರಘುನಾಥರೆಡ್ಡಿ ಪಾಟೀಲ, ಡಾ. ಪ್ರಕಾಶ ರಾಜಾಪುರೆ, ಶರಣಗೌಡ ಅಲ್ಲಿಪೂರ, ವಿಶ್ವನಾಥರಡ್ಡಿ ಗೊಂದಡಗಿ ಮುಂತಾದವರು ಅತಿಥಿಗಳಾಗಿ ಆಗಮಿಸಿದ್ದರು.ನಂತರ ವಸ್ತು ಪ್ರದರ್ಶನವನ್ನು ವೀಕ್ಷಿಸಿದ ಶಾಸಕ ಡಾ. ಮಾಲಕರಡ್ಡಿ, ಮಾಜಿ ಶಾಸಕ ಡಾ. ವೀರಬಸವಂತರಡ್ಡಿ ಮುದ್ನಾಳ, ಮೇಳದಲ್ಲಿರುವ ಬಟ್ಟೆ, ತಿಂಡಿ, ಔಷಧಿ, ಗೃಹೋಪಯೋಗಿ ವಸ್ತುಗಳನ್ನು ಪರಿಶೀಲಿಸಿದರು.ಜು.2ರಿಂದ ಆರಂಭವಾಗಿರುವ ಈ ವಸ್ತು ಪ್ರದರ್ಶನ ಜು.15ರವರೆಗೆ ನಡೆಯಲಿದೆ ಎಂದು ಟ್ರಸ್ಟ್‌ನ ವಿಜಯಕುಮಾರ ನಾಯರ್ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.