ಸರ್ವ ಶಿಕ್ಷಣ ಅಭಿಯಾನದಲ್ಲಿ ಅವ್ಯವಹಾರ

7
ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಸರ್ವ ಶಿಕ್ಷಣ ಅಭಿಯಾನದಲ್ಲಿ ಅವ್ಯವಹಾರ

Published:
Updated:

ಚಿಂಚೋಳಿ: ತಾಲ್ಲೂಕಿನ ಸರ್ವ ಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಮತ್ತು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ಅವ್ಯವಸ್ಥೆ ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ)ಯ ತಾಲ್ಲೂಕು ಘಟಕದ ಕಾರ್ಯಕರ್ತರು ಬುಧವಾರ ಇಲ್ಲಿನ ಚಂದಾಪುರದಲ್ಲಿರುವ ಶಾಸಕ ಡಾ. ಉಮೇಶ ಜಾಧವ್‌ ಬಾಡಿಗೆ ಮನೆಯ ಎದುರಿನ ರಸ್ತೆಯಲ್ಲಿ ಧರಣಿ ನಡೆಸಿದರು.ಸರ್ವ ಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ ದುರಸ್ತಿ ಹೆಸರಿನಲ್ಲಿ ಅವ್ಯವಹಾರ ನಡೆಸಿದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಮತ್ತು ಯೋಜನೆಯ ಶಾಖಾಧಿಕಾರಿ, ಸಮವಸ್ತ್ರದಲ್ಲಿ ನಡೆದ ಅವ್ಯವಹಾರ ತನಿಖೆ ನಡೆಸಿ ಶಿಕ್ಷಣ ಅಧಿಕಾರಿಯನ್ನು ಅಮಾನತುಪಡಿಸಬೇಕು ಎಂದು ಒತ್ತಾಯಿಸಲಾಯಿತು.ತಾಲ್ಲೂಕಿನಲ್ಲಿ ಖಾಲಿ ಇರುವ ಶಿಕ್ಷಕರ ಕೊರತೆ ನೀಗಿಸಬೇಕು, ಅವ್ಯವಹಾರದಲ್ಲಿ ಭಾಗಿಯಾದ ಮುಖ್ಯಗುರುಗಳನ್ನು ವರ್ಗಾಯಿಸಬೇಕು. ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ಮಕ್ಕಳಿಗೆ ಊಟ ಹಾಕದೇ ವಾಪಸ್‌ ಕಳುಹಿಸಿದ ವಾರ್ಡನ್‌ ಪ್ರಕಾಶ ಮತ್ತು ಇಲಾಖೆ ಅಧಿಕಾರಿಯನ್ನು ಅಮಾನತು ಗೊಳಿಸಬೇಕು ಹಾಗೂ ವೈದ್ಯರ ಕೊರತೆ ನೀಗಿಸಬೇಕು ಎಂಬ ಬೇಡಿಕೆಗಳ ಮನವಿಯನ್ನು ಶಾಸಕರ ಸಹಾಯಕ ರೊಬ್ಬರು ಶಾಸಕರ ಪರವಾಗಿ  ಸ್ವೀಕರಿಸಿದರು.ಸಂಘಟನೆಯ ಗೋಪಾಲ ರಾಂಪುರೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಸನಪ್ಪ ಮೇತ್ರಿ, ಸುನೀಲ ಲೊಡ್ಡ ನೋರ್‌, ಬಾಬುರಾವ್‌, ಶಿವಕುಮಾರ ಮತ್ತಿತರರು ಇದ್ದರು. ಸಬ್‌ ಇನ್ಸ್‌ಪೆಕ್ಟರ್‌ ರಘು ನೇತೃತ್ವದಲ್ಲಿ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry