ಸರ್‌ ಎಂ.ವಿ ಸಹಕಾರಿ ಬ್ಯಾಂಕ್‌ ಲಾಭ ರೂ 18 ಕೋಟಿ

7

ಸರ್‌ ಎಂ.ವಿ ಸಹಕಾರಿ ಬ್ಯಾಂಕ್‌ ಲಾಭ ರೂ 18 ಕೋಟಿ

Published:
Updated:

ಬೆಂಗಳೂರು: ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಕೊ–ಆಪರೇಟಿವ್‌ ಬ್ಯಾಂಕ್‌ 2012–13ನೇ ಸಾಲಿನಲ್ಲಿ ಒಟ್ಟು ರೂ18.03 ಕೋಟಿ ಲಾಭ ಗಳಿಸಿದೆ. ರೂ10.05 ಕೋಟಿ ನಿವ್ವಳ ಲಾಭವಾಗಿದೆ. ಪ್ರಸ್ತುತ 20 ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿದ್ದು, ರೂ1030 ಕೋಟಿಗಳಷ್ಟು ಠೇವಣಿ ಸಂಗ್ರಹಿಸಲಾಗಿದೆ. ಒಟ್ಟು ರೂ630 ಕೋಟಿಗಳಷ್ಟು ಸಾಲವನ್ನೂ ವಿತರಿಸಲಾಗಿದೆ ಎಂದು ಬ್ಯಾಂಕ್‌ನ ಅಧ್ಯಕ್ಷರಾದ ಕೆ.ಎನ್‌.ವೆಂಕಟನಾರಾಯಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಬ್ಯಾಂಕ್‌ ರೂ25 ಕೋಟಿಯಷ್ಟು ಷೇರು ಬಂಡವಾಳ ಹೊಂದಿದ್ದು, ರೂ55 ಕೋಟಿ ನಿಧಿಯನ್ನೂ ಸಂಗ್ರಹಿಸಿದ್ದು, ರೂ1055 ಕೋಟಿಗೂ ಅಧಿಕ ಮೊತ್ತದ ದುಡಿಯುವ ಬಂಡವಾಳವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry