ಬುಧವಾರ, ನವೆಂಬರ್ 20, 2019
27 °C

ಸಲಹಾ ಮಂಡಳಿಗೆ ಭಾರತದ ಕಾರ್ಡಿನಲ್

Published:
Updated:

ವ್ಯಾಟಿಕನ್ ಸಿಟಿ (ಪಿಟಿಐ): ವ್ಯಾಟಿಕನ್ ಆಡಳಿತದಲ್ಲಿ ಸುಧಾರಣೆ ತರುವುದಕ್ಕಾಗಿ ಸೂಕ್ತ ಸಲಹೆ ನೀಡಲು ಪೋಪ್ ಫ್ರಾನ್ಸಿಸ್ ಅವರು ಶನಿವಾರ ನೇಮಕ ಮಾಡಿರುವ ಎಂಟು ಸದಸ್ಯರ ಸಲಹಾ ಮಂಡಳಿಯಲ್ಲಿ ಭಾರತದ ಕಾರ್ಡಿನಲ್ ಒಸ್ವಾಲ್ಡ್ ಗ್ರೇಶಿಯಸ್ ಸ್ಥಾನ ಪಡೆದಿದ್ದಾರೆ.

ಕ್ಯಾಥೋಲಿಕ್ ಚರ್ಚ್‌ಗಳಿಗೆ ಸಂಬಂಧಿಸಿದ ಆಡಳಿತದ ಸಂವಿಧಾನವನ್ನು ಪರಿಷ್ಕರಿಸುವ ನಿಟ್ಟಿನಲ್ಲಿ ಈ ಮಂಡಳಿಯು ಪೋಪ್ ಅವರಿಗೆ ನೆರವಾಗಲಿದೆ. 68 ವರ್ಷದ ಗ್ರೇಶಿಯಸ್ ಅವರು ಮುಂಬೈನ ಆರ್ಚ್ ಬಿಷಪ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 

ಪ್ರತಿಕ್ರಿಯಿಸಿ (+)