ಮಂಗಳವಾರ, ಮೇ 18, 2021
22 °C

ಸಲಿಂಗಕಾಮಿಗಳ ಕೂಟವೂ ಇದೆ: ಪೋಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವ್ಯಾಟಿಕನ್ ಸಿಟಿ (ಐಎಎನ್‌ಎಸ್): ವ್ಯಾಟಿಕನ್ ಸರ್ಕಾರದಲ್ಲಿ ಭ್ರಷ್ಟಾಚಾರದ ಜತೆಗೆ `ಸಲಿಂಗಕಾಮಿಗಳ ಪರವಾದ ಗುಂಪು' ಕೂಡ ಇದೆ ಎಂದು ಪೋಪ್ ಫ್ರಾನ್ಸಿಸ್ ಒಪ್ಪಿಕೊಂಡಿದ್ದಾರೆ. ಅಲ್ಲದೆ  `ನಾವು ಈ ಬಗ್ಗೆ ಏನು ಕ್ರಮ ಕೈಗೊಳ್ಳಬಹುದು ಎಂಬುದನ್ನು ಆಲೋಚಿಸಬೇಕಿದೆ' ಎಂದಿದ್ದಾರೆ.ಲ್ಯಾಟಿನ್ ಅಮೆರಿಕ ಮತ್ತು ಕೆರೇಬಿಯಾದ ಧಾರ್ಮಿಕ ಪುರುಷರು ಮತ್ತು ಮಹಿಳೆಯರ ಒಕ್ಕೂಟದ (ಸಿಎಲ್‌ಎಆರ್) ಸದಸ್ಯರನ್ನು ಉದ್ದೇಶಿಸಿ ಅವರು ಮಾತನಾಡಿದರು. ಆದರೆ ಈ ಕುರಿತಂತೆ ಯಾವ ನಿರ್ದಿಷ್ಟ ಕ್ರಮ ಕೈಗೊಳ್ಳಲಾಗುವುದು ಎಂಬುದನ್ನು ಅವರು ವಿವರಿಸಿಲ್ಲ. ಫೆಬ್ರುವರಿಯಲ್ಲಿ  `ಸಲಿಂಗಕಾಮಿಗಳ ವಶೀಲಿ ಗುಂಪಿನ' ಬಗ್ಗೆ ವರದಿ ಮಾಡಿದ್ದಕ್ಕಾಗಿ ವ್ಯಾಟಿಕನ್ ಸರ್ಕಾರ ಇಟಲಿಯ ಮಾಧ್ಯಮಗಳನ್ನು ಟೀಕಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.