ಸೋಮವಾರ, ಜನವರಿ 27, 2020
14 °C

ಸಲಿಂಗರತಿ: ಸಮಾನತೆಗೆ ಮೂನ್‌ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವ ಸಂಸ್ಥೆ (ಪಿಟಿಐ): ಸಲಿಂಗಕಾಮಿನಿ, ಸಲಿಂಗಿ ಹಾಗೂ ದ್ವಿಲಿಂಗಿಗಳ ವಿರುದ್ಧದ ತಾರತಮ್ಯ ನೀತಿ ವಿರೋಧಿಸಿರುವ ವಿಶ್ವ ಸಂಸ್ಥೆಯ ಮುಖ್ಯಸ್ಥ ಬಾನ್–ಕಿ–ಮೂನ್, ಸಮಾನತೆಯ ಅಗತ್ಯತೆ ಪ್ರತಿಪಾದಿಸಿದ್ದಾರೆ.

ವಯಸ್ಕರ ನಡುವಣ ಸಮ್ಮತಿಯ ಸಲಿಂಗರತಿ ಅಪರಾಧ ಎಂದು ಭಾರತೀಯ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಮೂನ್ ಹೀಗೆ ಪ್ರತಿಕ್ರಿಯಿಸಿದ್ದಾರೆ.

‘ಎಲ್ಲಾ ಮಾನವರು ಸ್ವತಂತ್ರವಾಗಿ ಜನಿಸಿದ್ದಾರೆ. ಎಲ್ಲರಿಗೂ ಸಮಾನ ಘನತೆ ಹಾಗೂ ಹಕ್ಕುಗಳಿವೆ’ಎಂದು ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪುನರುಚ್ಚರಿಸಿದ್ದಾರೆ. ಸಲಿಂಗಕಾಮಿನಿ, ಸಲಿಂಗ, ದ್ವಿಲಿಂಗಿ ಹಾಗೂ ಅಂತರಲಿಂಗಿ ಪಂಗಡದ ವಿರುದ್ಧದ ತಾರತಮ್ಯ ಖಂಡಿಸಿ ಅವರು ಮತ್ತೊಮ್ಮೆ ದನಿ ಎತ್ತಿದ್ದಾರೆ. ಜೊತೆಗೆ ಮುಕ್ತ ಹಾಗೂ ಸಮಾನತೆ  ಜಗತ್ತು‌‌ ನಿರ್ಮಿಸುವ ನಿಟ್ಟಿನಲ್ಲಿ ನಮ್ಮೆಲ್ಲರ ಸ್ವಯಂ ಬದ್ಧತೆಯ ಅಗತ್ಯದ ಬಗ್ಗೆ ಒತ್ತು ನೀಡಿದ್ದಾರೆ’ ಎಂದು ಮೂನ್‌ ಅವರ ವಕ್ತರಾ ಮಾರ್ಟಿನ್‌ ನೆಸಿರ್ಕಿ ಅವರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)