ಸಲ್ಮಾನ್ ನಂಗಿಷ್ಟ!

7

ಸಲ್ಮಾನ್ ನಂಗಿಷ್ಟ!

Published:
Updated:

ರಾಜಾಜಿನಗರದ 24 ವರ್ಷದ ಯುವತಿ ಅಂಕಿತಾ ನಾಯಕ್ ಮಾಡೆಲಿಂಗ್ ಕ್ಷೇತ್ರದಲ್ಲಿ ಸದ್ಯಕ್ಕೆ ಮಿಂಚುತ್ತಿರುವ ರೂಪದರ್ಶಿ. ಸಲ್ಮಾನ್‌ಖಾನ್ ಇಷ್ಟ ಎನ್ನುವ ಈ ಕನ್ನಡದ ಹುಡುಗಿ ಆತನ ಒಂದು ಚಿತ್ರವನ್ನೂ ಬಿಡದೆ ವೀಕ್ಷಿಸಿದ್ದಾಳಂತೆ!ಮಾಡೆಲಿಂಗ್ ಕ್ಷೇತ್ರಕ್ಕೆ ಯಾವಾಗ ಬಂದಿದ್ದು?

ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮೊದಲ ವರ್ಷದ ಪಿಯು ಓದುವಾಗಲೇ ರ‌್ಯಾಂಪ್ ಶೋ ಕೊಟ್ಟಿದ್ದೆ.ಅನುಭವ ಹೇಗಿತ್ತು?

ಚಿಕ್ಕವಳಿದ್ದೆ. ಹೇಗೆ ಮಾಡುತ್ತೇನೋ ಎಂಬ ಆತಂಕವಿತ್ತು. ಅನುಭವವಿಲ್ಲದೇ ಈ ಕ್ಷೇತ್ರಕ್ಕೆ ಕಾಲಿಟ್ಟಿದ್ದೆ. ಆದರೂ ಅಭ್ಯಾಸದಿಂದ ಎಲ್ಲವನ್ನೂ ಕಲಿತುಕೊಂಡೆ.ಯಾಕೆ ಈ ಕ್ಷೇತ್ರ ಇಷ್ಟ?

ರ‌್ಯಾಂಪ್ ಮೇಲೆ ವಾಕ್ ಮಾಡಬೇಕು ಎಂಬ ಆಸೆ ಮೊದಲಿನಿಂದಲೂ ಇತ್ತು. ಹಾಗಾಗಿ ಈ ಕ್ಷೇತ್ರ ಇಷ್ಟ.ಮನೆಯಲ್ಲಿ ಪ್ರತಿಕ್ರಿಯೆ ಹೇಗಿತ್ತು?

ಓದು ಮುಗಿಸಿ, ಆಮೇಲೆ ನಿನ್ನ ಇಷ್ಟದ ಕೆಲಸವನ್ನು ಮಾಡು ಎಂದು ಹೇಳಿದರು. ನನ್ನೆಲ್ಲ ಕೆಲಸಕ್ಕೂ ಬೆಂಬಲ ನೀಡುತ್ತಿದ್ದರು. ಹೀಗಾಗಿ ಯಾವುದೂ ಕಷ್ಟವೆನಿಸಲಿಲ್ಲ.ಈ ಕ್ಷೇತ್ರಕ್ಕೆ ಬಾರದ್ದ್ದಿದರೆ ಏನಾಗ್ತಿದ್ದೀರಿ?

ನಾನು ಓದಿದ್ದು ಹೊಟೇಲ್ ಮ್ಯಾನೇಜ್‌ಮೆಂಟ್. ಆ ಕ್ಷೇತ್ರದಲ್ಲಿಯೇ ಮುಂದುವರಿಯುತ್ತಿದ್ದೆ.ಮನೆಯಲ್ಲಿ ಅಡುಗೆ ಮಾಡುತ್ತಿರಾ...?

ಮನಸ್ಸು ಬಂದಾಗ ಮಾಡುತ್ತೇನೆ ಅಷ್ಟೆ. ಜಾಸ್ತಿ ಇಷ್ಟಪಡುವುದು ಅಮ್ಮನ  ಅಡುಗೆಯನ್ನು. ಹಾಗಾಗಿ ಹೊಟೇಲ್ ಮ್ಯಾನೇಜ್‌ಮೆಂಟ್ ಓದಿದರೂ ಅಡುಗೆ ಮಾಡಲ್ಲ ಎಂದು ಮುದ್ದಾಗಿ ಅಮ್ಮ ಬೈಯುತ್ತಾ ಇರುತ್ತಾರೆ. (ನಗು).ಇಷ್ಟದ ಆಹಾರ ಯಾವುದು?

ಚಿಲ್ಲಿ ಚಿಕನ್, ಬಿರಿಯಾನಿ ತುಂಬಾ ಇಷ್ಟ.ನಿಮ್ಮ ಹವ್ಯಾಸವೇನು? 

ಸಂಗೀತ ಕೇಳುವುದು, ಕಂಪ್ಯೂಟರ್‌ನಲ್ಲಿ ಆಟವಾಡುವುದು.ಈ ಕ್ಷೇತ್ರದ ಅನುಕೂಲ ಹಾಗೂ ಅನನುಕೂಲ ಏನು?

ಅನುಕೂಲವೆಂದರೆ ಊರು ಸುತ್ತಬಹುದು. ಬೇರೆ ಮಾಡೆಲ್‌ಗಳ ಪರಿಚಯವಾಗುತ್ತದೆ. ಅನನುಕೂಲ ಎಲ್ಲವನ್ನೂ ಹೇಳುವುದಕ್ಕೆ ಆಗಲ್ಲ. ಅಪ್ಪ ಅಮ್ಮನನ್ನು ಮಿಸ್ ಮಾಡಿಕೊಳ್ಳುತ್ತೇನೆ. ಇಲ್ಲಿಯ ಆಹಾರ ಸಿಗುವುದಿಲ್ಲ.ಈ ಕ್ಷೇತ್ರಕ್ಕೆ ಬಂದು ಎಷ್ಟು ವರ್ಷವಾಯಿತು?

ಐದು.ಈ ಐದು ವರ್ಷಗಳಲ್ಲಿ ನೀವು ಕಂಡ ವ್ಯತ್ಯಾಸವೇನು?

ಮೊದಲು ಅನುಭವವಿರಲಿಲ್ಲ. ಈಗ ಯಾವ ಶೋ, ಯಾರ ಹತ್ತಿರ ತರಬೇತಿ ಪಡೆದುಕೊಳ್ಳಬೇಕು ಎಂಬಷ್ಟು ಬುದ್ದಿವಂತಳಾಗಿದ್ದೇನೆ. ಮೊದಲು ಇಷ್ಟು ಶೋಗಳು ನಡೆಯುತ್ತಿರಲಿಲ್ಲ. ಈಗ ಅವಕಾಶಗಳು ಜಾಸ್ತಿ ಇವೆ. ಅದನ್ನ  ಉಪಯೋಗಿಸಿಕೊಂಡು ಹೋಗಬೇಕು.ಗ್ಲಾಮರ್ ಇಲ್ಲದಿದ್ದರೆ ಇಲ್ಲಿ ಅವಕಾಶಗಳು ಇಲ್ವಾ?

ತೆಳ್ಳಗೆ, ಗ್ಲಾಮರ್ ಇದ್ದರೆ ಅವಕಾಶಗಳು ಇರುತ್ತವೆ. ಆದರೆ ಇತ್ತೀಚೆಗೆ ಜನ ಬದಲಾವಣೆ ಕೇಳುತ್ತಾರೆ. ಸ್ವಲ್ಪ ದಪ್ಪಗಿದ್ದು, ಆರೋಗ್ಯವಂತರಾಗಿದ್ದರೆ ನೋಡಲು ಚಂದ. ತುಂಬಾ ಸಣ್ಣಕ್ಕಿದ್ದರೆ ಎಲ್ಲ ವಿನ್ಯಾಸಗಳನ್ನು ತೊಡಲು ಸಾಧ್ಯವಿಲ್ಲ. ನಿಮಗೆ ಯಾವ ರೀತಿಯ ಬಟ್ಟೆ ಇಷ್ಟ.

ನಾನು ತುಂಬಾ ಶಾಪಿಂಗ್ ಮಾಡುತ್ತೇನೆ. ಮನೆಯಲ್ಲಿ ನೈಟ್ ಡ್ರೆಸ್ ಹೆಚ್ಚಾಗಿ ಹಾಕುತ್ತೇನೆ. ಹೊರಗಡೆ ಹೋಗುವಾಗ ಜೀನ್ಸ್, ಟಿ-ಶರ್ಟ್ ಇಷ್ಟ. ಪಾರ್ಟಿ ಇದ್ದರೆ ಒಂದು ಡ್ರೆಸ್ ತೆಗೆದುಕೊಳ್ಳಲೇಬೇಕು ಎಂಬ ಪಾಲಿಸಿ ನನ್ನದು. ಹಬ್ಬದ ದಿನ ಮಾತ್ರ ಸೀರೆ ಹಾಕುತ್ತೇನೆ.ಜೀವನದಲ್ಲಿ ನೀವಿಟ್ಟುಕೊಂಡ ಕನಸು?

ತುಂಬಾ ಕನಸಿದೆ. ಎಲ್ಲವನ್ನೂ ಈಡೇರಿಸಿಕೊಳ್ಳುವುದಕ್ಕೆ ಆಗಲ್ಲ. ಆದರೆ ನನ್ನದೇ ಒಂದು ಬ್ರಾಂಡಿನ `ಶೂಸ್~ ಮಾರುಕಟ್ಟೆಗೆ ಪರಿಚಯಿಸಬೇಕು ಎಂಬ ಆಸೆ ಇದೆ. ಸದ್ಯದಲ್ಲಿಯೇ ಅದನ್ನು ಮಾಡುತ್ತೇನೆ.ಇಷ್ಟದ ನಟಿ ಯಾರು?

ದೀಪಿಕಾ ಪಡುಕೋಣೆ ಇಷ್ಟ.ಮರೆಯಲಾಗದ ಶೋ ಯಾವುದು?

ಮೂರು ವರ್ಷದ ಹಿಂದೆ ಪ್ರಸಾದ್ ಬಿದಪ್ಪ ಅವರ `ಫ್ಯಾಷನ್ ವೀಕ್~ನಲ್ಲಿ ಭಾಗವಹಿಸಿದ್ದೆ ಅದು ತುಂಬಾ ಇಷ್ಟವಾಗಿತ್ತು.ಸಿನಿಮಾದಲ್ಲಿ ಅವಕಾಶ ಸಿಕ್ಕಿದೆಯಾ?

ಸಿಕ್ಕಿಲ್ಲ. ನನಗೆ ಆ ಕ್ಷೇತ್ರ ಅಷ್ಟೇನೂ ಇಷ್ಟವಿಲ್ಲ. ತಮಿಳಿನ ಅಲ್ಬಮ್ ಸಾಂಗ್‌ನಲ್ಲಿ ಡಾನ್ಸ್ ಮಾಡಿದ್ದೇನೆ.ಈ ಕ್ಷೇತ್ರಕ್ಕೆ ಬರುವ ಕಿರಿಯರಿಗೆ ನಿಮ್ಮ ಕಿವಿಮಾತು?

ಕೆಲಸವನ್ನು ಹವ್ಯಾಸವೆಂದು ಮಾಡಿ. ಆಗ ಅದು ನಿಮಗೆ ಇಷ್ಟವಾಗುತ್ತದೆ. ನಗುತ್ತಾ ಇದ್ದರೆ ಕೆಲವು ಸಮಸ್ಯೆಗಳು  ದೂರವಾಗುತ್ತವೆ ಎಂಬುದು ನನ್ನ ಅಭಿಪ್ರಾಯ.ಮಹಿಳೆಯರಿಗೆ ನಿಮ್ಮ ಬ್ಯೂಟಿ ಟಿಪ್ಸ್?

ಬ್ರಾಂಡೆಡ್ ವಸ್ತುಗಳನ್ನು ಮಾತ್ರ ಉಪಯೋಗಿಸಿ. ಏನೇನೋ ಹಾಕಿಕೊಂಡು ಇರುವ ಸೌಂದರ್ಯವನ್ನು ಹಾಳುಮಾಡಿಕೊಳ್ಳಬೇಡಿ. ಕ್ಯಾರೆಟ್, ಸೌತೆಕಾಯಿ ಜ್ಯೂಸ್ ಕುಡಿಯಿರಿ.ಡಯೆಟ್ ಮಾಡುತ್ತಿರಾ..?

ಇಲ್ಲ. ಚೆನ್ನಾಗಿ ತಿನ್ನುತ್ತೇನೆ. ಊಟ ಅಂದರೆ ತುಂಬಾ ಇಷ್ಟ.ಮದುವೆ ಬಗ್ಗೆ?

ಸದ್ಯಕ್ಕಿಲ್ಲ. ಮೂರು ವರ್ಷ ಬಿಟ್ಟು ಆಗುತ್ತೇನೆ.ಮದುವೆ ಆಗುವವನು ಹೇಗಿರಬೇಕು?

ಸಲ್ಮಾನ್‌ಖಾನ್ ಹಾಗೇ ಇರಬೇಕು. ಚಿಕ್ಕವಳಿಂದಲೂ ಇದೇ ಆಸೆ. ಸಲ್ಮಾನ್ ಖಾನ್‌ನ ಯಾವುದೇ ಸಿನಿಮಾ ಬಂದರೂ ಮೊದಲೇ ಹೋಗಿ ನೋಡುತ್ತೇನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry