ಸೋಮವಾರ, ಅಕ್ಟೋಬರ್ 21, 2019
26 °C

ಸಲ್ಮಾನ್ ರಶ್ದಿ ತಿರುಗೇಟು

Published:
Updated:

ನವದೆಹಲಿ (ಪಿಟಿಐ): `ಭಾರತಕ್ಕೆ ಭೇಟಿ ನೀಡಲು ನನಗೆ ವೀಸಾದ ಅವಶ್ಯಕತೆ ಇಲ್ಲ~ ಎಂದು ಹೇಳುವ ಮೂಲಕ ವಿವಾದಾತ್ಮಕ ಲೇಖಕ ಸಲ್ಮಾನ್ ರಶ್ದಿ ಅವರು ತಮ್ಮ ಭಾರತ ಭೇಟಿಗೆ ವಿರೋಧ ವ್ಯಕ್ತಪಡಿಸಿರುವ ಇಸ್ಲಾಂನ ಪ್ರಮುಖ ಶಿಕ್ಷಣ ಸಂಸ್ಥೆ ದಾರುಲ್ ಉಲೂಮ್ ದಿಯೊಬಂದ್‌ಗೆ ತಿರುಗೇಟು ನೀಡಿದ್ದಾರೆ.ಸಲ್ಮಾನ್ ರಶ್ದಿ ಅವರು ಈ ಹಿಂದೆ ಮುಸ್ಲಿಮರ ಭಾವನೆಗಳಿಗೆ ನೋವುಂಟು ಮಾಡಿರುವುದರಿಂದ ಕೇಂದ್ರ ಸರ್ಕಾರ ಅವರ ವೀಸಾವನ್ನು ರದ್ದುಪಡಿಸಬೇಕು ಎಂದು ದಿಯೊಬಂದ್ ಸೋಮವಾರ ಹೇಳಿತ್ತು.ಅದಕ್ಕೆ ಪ್ರತಿಕ್ರಿಯಿಸಿರುವ ರಶ್ದಿ ಭಾರತಕ್ಕೆ ಭೇಟಿ ನೀಡುವುದಕ್ಕೆ ತಮಗೆ ವೀಸಾದ ಅಗತ್ಯವಿಲ್ಲ ಎಂದು ಟ್ವಿಟರ್‌ನಲ್ಲಿ ಬರೆದಿದ್ದಾರೆ.ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಸಲ್ಮಾನ್ ರಶ್ದಿ ಈ ತಿಂಗಳ ಅಂತ್ಯದಲ್ಲಿ ಜೈಪುರದಲ್ಲಿ ನಡೆಯಲಿರುವ  ಸಾಹಿತ್ಯ ಉತ್ಸವದಲ್ಲಿ ಭಾಗವಹಿಸಲಿದ್ದಾರೆ.

Post Comments (+)