ಸಲ್ಲುಗೆ ಮತ್ತೆ ನೋವು

7

ಸಲ್ಲುಗೆ ಮತ್ತೆ ನೋವು

Published:
Updated:

ಸಲ್ಮಾನ್ ಖಾನ್‌ಗೆ ನರ ಸಂಬಂಧಿ ನೋವು ಮತ್ತೆ ಕಾಣಿಸಿಕೊಂಡಿದೆಯಂತೆ. ವಿದೇಶಿ ವೈದ್ಯರಲ್ಲಿಗೆ ಹೋಗಿ ಎರಡು ಸಲ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೂ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಸದ್ಯಕ್ಕೆ `ದಬಂಗ್ 2~ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ಅವರು ನೋವಿನಿಂದಾಗಿ ಕಮರಿಹೋಗುವ ಪೈಕಿ ಅಲ್ಲ. ಅದಕ್ಕೇ ಚಿತ್ರೀಕರಣವನ್ನು ನಿಲ್ಲಿಸದೆ ನೋವಿನ ನಡುವೆಯೂ ಸಾಹಸದ ದೃಶ್ಯವನ್ನು ಪೂರೈಸಿದರಂತೆ.`ಆರೋಗ್ಯದ ಸಮಸ್ಯೆ ತುಂಬಾ ಮುಖ್ಯವಾದದ್ದು, ನಿಜ. ನನಗೆ ಮೊದಲಿನಷ್ಟು ನೋವೇನೂ ಇಲ್ಲ. ಆದರೆ, ದೇಹವನ್ನು ದಂಡಿಸುವಾಗ ಸ್ವಲ್ಪ ವ್ಯತ್ಯಾಸವಾದರೂ ಅದು ಅರಿವಿಗೆ ಬರುತ್ತದೆ. ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನನ್ನದಷ್ಟೆ. ಸಿನಿಮಾ ಅಂದಮೇಲೆ ಇವೆಲ್ಲವೂ ಇದ್ದದ್ದೇ. ಸದ್ಯಕ್ಕೆ ನನ್ನ ಗಮನವೆಲ್ಲಾ ದಬಂಗ್-2 ಮೇಲೆ ಕೇಂದ್ರಿತವಾಗಿದೆ. ಹೇಗಾದರೂ ಮಾಡಿ ಆ ಚಿತ್ರವನ್ನು ಗೆಲ್ಲಿಸಬೇಕೆಂಬುದು ನನ್ನ ಬಯಕೆ~ ಎನ್ನುವ ಸಲ್ಮಾನ್, ಚಿತ್ರದ ಸಂಪೂರ್ಣ ಹೊಣೆಯನ್ನು ತಾವೇ ಹೊತ್ತುಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry