ಸವದತ್ತಿ ಮೇಷ್ಟ್ರು

7

ಸವದತ್ತಿ ಮೇಷ್ಟ್ರು

Published:
Updated:

ಮೂಲತಃ ಗದಗ ಜಿಲ್ಲೆ ರೋಣ ತಾಲ್ಲೂಕು ಜಕ್ಕಲಿ ಗ್ರಾಮದ ಎಂ.ಎಸ್. ಸವದತ್ತಿ ಅವರು ನಗರದ ಗವಿಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿ 1950ರಿಂದ 89ರವರೆಗೆ ಸೇವೆ ಸಲ್ಲಿಸಿ ನಿವೃತ್ತರಾದರು. ಕೊಪ್ಪಳಕ್ಕೆ ಬಂದ ಮೊದಲ ಕನ್ನಡ ಮೇಷ್ಟ್ರು ಎಂಬ ಹೆಗ್ಗಳಿಕೆಯೂ ಇವರಿಗಿದೆ. ನಿಜಾಮರ ಆಡಳಿತದ ಅವಧಿಯಲ್ಲಿ ಉರ್ದು ಪ್ರಭಾವವಿದ್ದ ಈ ಭಾಗದಲ್ಲಿ ಮಕ್ಕಳ, ಪೋಷಕರ ಮನವೊಲಿಸಿ ಕನ್ನಡ ಕಲಿಕೆಗೆ ಪ್ರೋತ್ಸಾಹಿಸಿದರು. ಹೊಸಗನ್ನಡ, ಹಳೆಗನ್ನಡದಲ್ಲಿ ಅಪಾರ ವಿದ್ವತ್ತು ಹೊಂದಿವರು.

ಮೇಷ್ಟ್ರು ಹೇಳಿದ ನೆನಪುಗಳು

ಆತ್ಮೀಯ ಶಿಕ್ಷಕ ಗೆಳೆಯನೊಬ್ಬನಿಗೆ ಕುಡಿಯಬೇಡ ಎಂದು ಪದೇ ಪದೇ ಹೇಳಿದೆ. ಆತ, ಏಕೆ ಕುಡಿಯಬಾರದು? ನೀನೂ ಕುಡಿ ಎಂದು ಹೇಳಿದ. ಅತ್ಯಂತ ಬುದ್ಧಿವಂತ, ಪ್ರತಿಭಾವಂತನಿಗೆ ನನ್ನ ಮಾತು ಪ್ರಯೋಜನವಾಗಲಿಲ್ಲ. ಕೊನೆಗೆ ಒಂದು ದಿನ ಕುಡಿತದಿಂದಲೇ ಅಪಘಾತಗೊಂಡು ಮೃತಪಟ್ಟಅವನ ಮಕ್ಕಳೂ ಅದೇ ಹಾದಿ ಅನುಸರಿಸಿದ್ದಾರೆ.ಬಹಳ ಬೇಸರವೆನಿಸುತ್ತದೆ.ಶಿಕ್ಷಕರು ರಾಜಕೀಯ ಮಾಡುವುದು, ಕುಡಿತದ ದಾಸರಾಗಿರುವುದು ನೋಡಿದಾಗ ಮುಂದೆ ಎಂಥ ಪ್ರಜೆಗಳು ನಿರ್ಮಾಣವಾದಾರು ಎಂಬ ಆತಂಕ ಕಾಡುತ್ತಿದೆ ಎಂದರು ಸವದತ್ತಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry