ಸವದಿ ಪೋಲಿಗಳಿಗಿಂತ ಕಡೆ

7

ಸವದಿ ಪೋಲಿಗಳಿಗಿಂತ ಕಡೆ

Published:
Updated:
ಸವದಿ ಪೋಲಿಗಳಿಗಿಂತ ಕಡೆ

ಕನಕಗಿರಿ: ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರು `ನೀಲಿ ಚಿತ್ರ~ ನೋಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಕೆಪಿಸಿಸಿ ಸದಸ್ಯ ಹಾಗೂ ಜಿಪಂ ಮಾಜಿ ಅಧ್ಯಕ್ಷ ಮುಕುಂದರಾವ್ ಭವಾನಿಮಠ ಆಕ್ರೋಶ ವ್ಯಕ್ತಪಡಿಸಿದರು.ಸಚಿವರ ಬ್ಲೂ ಫಿಲ್ಮ್ ವೀಕ್ಷಣೆ ವಿರೋಧಿಸಿ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.ಜವಾಬ್ದಾರಿ ಮರೆತು `ಪೋಲಿ ಹುಡುಗರಿಗಿಂತ ಕಡೆ~ಯಾಗಿ ವರ್ತನೆ ಮಾಡಿರುವುದು ಖಂಡನೀಯ ಎಂದು ಕಿಡಿ ಕಾರಿದರು. ಹುಬ್ಬಳ್ಳಿಯಲ್ಲಿ ಈಚೆಗೆ ನಡೆದ ಆರ್‌ಆರ್‌ಎಸ್ ಬೈಠಕ್‌ನಲ್ಲಿ ಬಿಜೆಪಿ ಮಂತ್ರಿಗಳಿಗೆ ಇಂಥ ಪಾಠ, ಸಂಸ್ಕೃತಿ ತೋರಿಸುವ ಬಗ್ಗೆ ಉಪನ್ಯಾಸ, ತರಬೇತಿ ನೀಡಿದರೆ? ಎಂದು ಭವಾನಿಮಠ ಪ್ರಶ್ನಿಸಿದರು.ಕೊಪ್ಪಳದಲ್ಲಿ ಮಳೆಗಳು ಕೈ ಕೊಟ್ಟು ಬರ ಆವರಿಸಿಕೊಂಡಿದ್ದು ಜನತೆ ಉದ್ಯೋಗ ಅರಸಿ ಗುಳೆ ಹೊರಟ್ಟಿದ್ದರೆ ಈ ಮಂತ್ರಿ `ಬರ~ದ ವಿಧಾನಸಭೆಯಲ್ಲಿ ಚರ್ಚೆ ಮಾಡದರೆ ಬ್ಲೂ ಫಿಲ್‌ಂ ನೋಡುವುದರಲ್ಲಿ ಮಗ್ನರಾಗಿರುವುದು ದುರಂತ ಎಂದು ತಿಳಿಸಿದರು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹೊನ್ನೂರುಸಾಬ, ನಗರ ಘಟಕದ ಅಧ್ಯಕ್ಷ ಬಿ. ವಿ. ಜೋಶಿ. ಗ್ರಾಪಂ ಸದಸ್ಯರಾದ ನಾಗೇಶ ಬಡಿಗೇರ, ಶರಣೆಗೌಡ ಪಾಟೀಲ, ಹೊನ್ನುರುಸಾಬ ಬೀಡಿ, ಸದಾನಂದ ಸಮಗಂಡಿ, ಕೆ. ಎಚ್. ಕುಲಕರ್ಣಿ, ಹೊನ್ನೂರುಸಾಬ ಉಪ್ಪು, ಶಾಮಲಿಸಾಬ ಪ್ರಮುಖರಾದ ವೆಂಕಟೇಶ ಕಂಪ್ಲಿ, ವಿಜಯಭಾಸ್ಕ ದೇವರೆಡ್ಡಿ, ಮಹ್ಮದ ರಫಿ ಅಗರಬತ್ತಿ, ಮುದಿಬಸನಗೌಡ ಮುಸಲಾಪುರ, ಕೋಳಿ ಆನಂದ, ಸೋಮಸಾಗರ ವಿರುಪಣ್ಣ, ಕೆ. ಪಂಪಾಪತಿ, ವೀರೇಶ ಹಾದಿಮನಿ, ಪಂಪಾಪತಿ ಜಾಲಿಹಾಳ, ಚಂದ್ರು ಬೇಕರಿ ಇತರರು ಹಾಜರಿದ್ದರು.ಕಾಂಗ್ರೆಸ್ ಕಾರ್ಯಾಲಯದಿಂದ ಆರಂಭವಾದ ಮೆರವಣಿಗೆ ವಾಲ್ಮೀಕಿ ವೃತ್ತದ ವರೆಗೆ ನಡೆಯಿತು, ಸವದಿ ಅವರ ಕಟೌಟ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಪಿಎಸ್‌ಐ ಎಚ್. ಬಿ. ನರಸಿಂಗಪ್ಪ ಪೊಲೀಸ್ ಬಿಗಿ ಬಂದೋ ಬಸ್ತ್ ಒದಗಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry