ಸೋಮವಾರ, ಏಪ್ರಿಲ್ 12, 2021
26 °C

ಸವಾಲಿಗೆ ಸಿದ್ಧರಾಗಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ‘ಬೆಂಗಳೂರಿನಲ್ಲಿ ಭಾನುವಾರ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಐರ್ಲೆಂಡ್ ತಂಡದ ಸವಾಲನ್ನು ಎದುರಿಸಲು ದೋನಿ ಸಾರಥ್ಯದ ತಂಡವು ಸಿದ್ಧವಾಗಬೇಕು’ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ. ‘ಇಂಗ್ಲೆಂಡ್ ಗಳಿಸಿದ್ದ ಬೃಹತ್ ಮೊತ್ತದ ಸವಾಲಿಗೆ ತಕ್ಕ ಉತ್ತರ ನೀಡಿದ ಐರ್ಲೆಂಡ್ ಮೂರು ವಿಕೆಟ್‌ಗಳಿಂದ ಪಂದ್ಯವನ್ನು ತನ್ನದಾಗಿಸಿಕೊಂಡಿತ್ತು. ಅಷ್ಟೇ ಅಲ್ಲ ಕೆವಿನ್ ಓಬ್ರಿಯನ್ 50 ಎಸೆತಗಳಲ್ಲಿ ಶತಕ ಗಳಿಸಿ ವಿಶ್ವಕಪ್‌ನಲ್ಲಿ ವೇಗದ ಶತಕ ಸಾಧನೆ ಗೌರವಕ್ಕೆ ಪಾತ್ರರಾಗಿದ್ದರು.ಆದ್ದರಿಂದ ಐರ್ಲೆಂಡ್ ಈಗ ದುರ್ಬಲವಲ್ಲ. ಆ ತಂಡದ ಸವಾಲನ್ನು ಸಮರ್ಥವಾಗಿ ಎದುರಿಸಲು ದೋನಿ ಪಡೆ ಸಜ್ಜಾಗಬೇಕು’ ಎಂದು ಐಸಿಸಿ ಕ್ರಿಕೆಟ್ ವರ್ಲ್ಡ್‌ನ ಕಾರ್ಯಕ್ರಮವೊಂದರಲ್ಲಿ ಗಂಗೂಲಿ ತಿಳಿಸಿದ್ದಾರೆ. ಐರ್ಲೆಂಡ್ ಪಡೆಯಲ್ಲಿಯೂ ಕೆಲ ಅಸಮಾನ್ಯ ಬ್ಯಾಟ್ಸ್‌ಮನ್‌ಗಳಿದ್ದಾರೆ. ಅವರು ಯಾವುದೇ ಸಂದರ್ಭದಲ್ಲಿ ಸಿಡಿದೇಳಬಹುದು. ಓಬ್ರಿಯನ್ ಕೂಡಾ ಉತ್ತಮ ಫಾಮ್‌ನಲ್ಲಿದ್ದಾರೆ. ಆದ್ದರಿಂದ ಭಾರತ ಈಗ ಎಚ್ಚರಿಕೆಯಿಂದ ಆಡಬೇಕು. ಎದುರಾಳಿ ತಂಡ ಯಾವುದೇ ಸಮಯದಲ್ಲಿ ಅಪಾಯ ಒಡ್ಡಬಹುದು.2003ರಲ್ಲಿ ಭಾರತ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿತ್ತು. ಈ ಸಲವು ಅಂತಿಮ ಘಟ್ಟಕ್ಕೆ ತಲುಪಲು ಭಾರತ ಬೌಲಿಂಗ್ ವಿಭಾಗದಲ್ಲಿ ಸುಧಾರಿಸಬೇಕು. ಕಳೆದ ಎರಡು ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ತೋರಿದ್ದಾರೆ, ಆದರೆ ಬೌಲಿಂಗ್ ಕಳಪೆಯಾಗಿದೆ. ಈ ಕುರಿತು ವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.‘ತಂಡದಲ್ಲಿ ಮೂವರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್‌ಗಳು ಇದ್ದರೆ ಉತ್ತಮ. ಯೂಸುಫ್ ಹತ್ತು ಓವರ್ ಬೌಲಿಂಗ್ ಮಾಡಬೇಕು’ ಎಂದು ಗಂಗೂಲಿ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.