ಸವಾಲುಗಳನ್ನು ಸಮರ್ಥವಾಗಿ ಎದುರಿಸಿ

7

ಸವಾಲುಗಳನ್ನು ಸಮರ್ಥವಾಗಿ ಎದುರಿಸಿ

Published:
Updated:

ಯಲ್ಲಾಪುರ:  ಸಮಸ್ಯೆ ಎನ್ನುವುದು ಶಾಶ್ವತವಲ್ಲ , ಸಮಸ್ಯೆಯನ್ನು ಶಾಶ್ವತ ಎಂದು ತಿಳಿದುಕೊಳ್ಳದೇ ಸವಾಲಾಗಿ ಸ್ವೀಕರಿಸಿದಾಗ ಪರಿಹಾರ ಕಂಡುಕೊಳ್ಳಲು ಸಾಧ್ಯ .ಇದರಿಂದ ಜೀವನದ ಮಹತ್ವದ ಘಟ್ಟದಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲು ಸಾಧ್ಯವಾಗುತ್ತದೆ  ಎಂದು ಚಿಕ್ಕೋಡಿಯ ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಅನಂತ ಅರವೆ ಅಭಿಪ್ರಾಯಪಟ್ಟರು.ಸ್ಥಳೀಯ ವೈ.ಟಿ.ಎಸ್.ಎಸ್. ಸಭಾಭವನದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿ.ಆರ್. ಪರಮಾನಂದ ಸ್ಮರಣಾರ್ಥ ಏರ್ಪಡಿಸಿದ್ದ ಯೋಗಾಸನ ಸ್ಪರ್ಧೇಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಶ್ರೀರಂಗ ಕಟ್ಟಿ ಮಾತನಾಡಿ ಯೋಗ ಮತ್ತು ರೋಗದಲ್ಲಿ ಯೋಗವನ್ನು ಆಯ್ಕೆಮಾಡಿಕೊಮಡು ಜೀವನದಲ್ಲಿ ಕರಗತ ಮಾಡಿಕೊಂಡರೆ ರೋಗವನ್ನು ದೂರ ಮಾಡಬಹುದು ಎಂದರು. ಪ್ರೌಢಶಾಲಾ ವಿಭಾಗದ ಸ್ಪರ್ಧೆಯಲ್ಲಿ ಶ್ರೀಧರ ಭಟ್ಟ ಪ್ರಥಮ , ಪ್ರಕಾಶ ಭಟ್ಟ ದ್ವಿತೀಯ , ಕೃಷ್ಣ ಪ್ರಸಾಧ ಭಟ್ಟ ತೃತೀಯ ಸ್ಥಾನ ಗಳಿಸಿದರು. ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಚಿನ್ ನಾಗೇಂದ್ರ ನಾಯ್ಕ ಪ್ರಥಮ, ವಿಜಹಯಲಕ್ಷ್ಮೀ ಗಿರಿಯಪ್ಪನವರ್ ದ್ವಿತೀಯ , ಅರ್ಚನಾ ಭಟ್ಟ ತೃತೀಯ ಸ್ಥಾನ ಗಳಿಸಿ ಪ್ರಶಸ್ತಿ ಸ್ವೀಕರಿಸಿದರು. ರೋಟರಿ ಅಧ್ಯಕ್ಷ ಪ್ರಕಾಶ ಕಟ್ಟಿಮನಿ, ಸಂಸ್ಥೆಯ ಸದಸ್ಯ ವಿನಾಯಕ ಪೈ , ರೋಟರಿ ಸದಸ್ಯ ರವೀೀಂದ್ರ ಪ್ರಭು ಉಪಸ್ಥಿತರಿದ್ದು ಶುಭ ಹಾರೈಸಿದರು.ಶ್ವೇತಾ ಸಂಗಡಿಗರು ಪ್ರಾರ್ಥಿಸಿದರು, ಉಪನ್ಯಾಸಕ ಎಲ್.ಎಂ.ಹೆಗಡೆ ಸ್ವಾಗತಿಸಿದರು,  ಶಿಕ್ಷಕ ಎನ್,ಎಸ್,ಭಟ್ಟ ಕಾರ್ಯಕ್ರಮ ನಿರೂಪಿಸಿದರು. ಉಪ ಪ್ರಾಂಶುಪಾಲ ಸಿ.ಎನ್. ಹುಬ್ಬಳ್ಳಿ ವಂದಿಸಿದರು,

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry