ಸವಿತಾ ನಾಗಭೂಷಣಗೆ ಪು.ತಿ.ನ. ಕಾವ್ಯ ಪುರಸ್ಕಾರ

7

ಸವಿತಾ ನಾಗಭೂಷಣಗೆ ಪು.ತಿ.ನ. ಕಾವ್ಯ ಪುರಸ್ಕಾರ

Published:
Updated:

ಶಿವಮೊಗ್ಗ: ಕವಯತ್ರಿ ಸವಿತಾ ನಾಗಭೂಷಣ ಅವರನ್ನು 2009ರ ಸಾಲಿನ ‘ಪು.ತಿ.ನ. ಕಾವ್ಯ ಪುರಸ್ಕಾರ’ಕ್ಕೆ ಆಯ್ಕೆ ಮಾಡಲಾಗಿದೆ. ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಅಧ್ಯಕ್ಷತೆಯ ಆಯ್ಕೆ ಸಮಿತಿ ಸವಿತಾ ಅವರ ‘ದರುಶನ’ ಕವನ ಸಂಕಲನವನ್ನು ಈ ಪುರಸ್ಕಾರಕ್ಕಾಗಿ ಆಯ್ಕೆ ಮಾಡಿದೆ ಎಂದು ಪು.ತಿ.ನ. ಟ್ರಸ್ಟ್‌ನ ಕಾರ್ಯದರ್ಶಿ ಡಾ.ಶ್ರೀರಾಮ ಭಟ್ ತಿಳಿಸಿದ್ದಾರೆ.ಪ್ರಶಸ್ತಿ 25ಸಾವಿರ ರೂ. ನಗದು ಮತ್ತು ಯದುಗಿರಿಯ ಪ್ರತಿಕೃತಿಯುಳ್ಳ ಫಲಕವನ್ನು ಒಳಗೊಂಡಿದೆ. ಪ್ರಶಸ್ತಿಯನ್ನು ಮಾರ್ಚ್ 6ರಂದು ಮೇಲುಕೋಟೆಯಲ್ಲಿನ ಪು.ತಿ.ನ. ಅವರ ಮೂಲ ಮನೆಯಲ್ಲಿ ನಡೆಯಲಿರುವ ಅವರ ಸಾಂಸ್ಕೃತಿಕ ಸ್ಮರಣೆ ಕಾರ್ಯಕ್ರಮದ ಸಂದರ್ಭದಲ್ಲಿ ಹಿರಿಯ ಸಾಹಿತಿಗಳ ಸಮ್ಮುಖದಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry