ಬುಧವಾರ, ನವೆಂಬರ್ 13, 2019
21 °C

ಸವಿತಾ ಪ್ರಕರಣ: ಇಂದು ವಿಚಾರಣೆ

Published:
Updated:

ಲಂಡನ್ (ಪಿಟಿಐ): ಭಾರತೀಯ ಮೂಲದ ದಂತವೈದ್ಯೆ ಡಾ. ಸವಿತಾ ಹಾಲಪ್ಪನವರ ಸಾವಿನ ಕುರಿತಂತೆ ಇಲ್ಲಿನ ನ್ಯಾಯಾಲಯದಲ್ಲಿ ಸೋಮವಾರದಿಂದ ಆರಂಭಗೊಳ್ಳಲಿರುವ ಸಮಗ್ರ ವಿಚಾರಣೆ ವೇಳೆ ಐರಿಷ್ ಆಸ್ಪತ್ರೆಯ ಆರೋಗ್ಯ ಕಾಳಜಿ ಗುಣಮಟ್ಟ ಸೇರಿದಂತೆ ಹಲವು ಪ್ರಮುಖ ಅಂಶಗಳ ಕುರಿತು ಪರಿಶೀಲನೆ ನಡೆಯುವ ನಿರೀಕ್ಷೆಯಿದೆ. ಜೀವಕ್ಕೆ ಅಪಾಯ ತಂದೊಡ್ಡಿದ ಸೋಂಕಿಗಿಂತ ಹೆಚ್ಚಾಗಿ ವಿಪರೀತ ಚಳಿಯಿಂದಾಗಿ ಸವಿತಾ ನಡುಗುತ್ತಿದ್ದರು. ಜೊತೆಗೆ ಹಲ್ಲುಗಳನ್ನು ಕಡಿಯುತ್ತಿದ್ದರು ಎಂದು ಗಾಲ್ವೆಯ ಯೂನಿವರ್ಸಿಟಿ ಕಾಲೇಜು ಆಸ್ಪತ್ರೆಯನ್ನು ಉಲ್ಲೇಖಿಸಿ ತನಿಖಾ ವರದಿಯಲ್ಲಿ ತಿಳಿಸಲಾಗಿತ್ತು.

ಪ್ರತಿಕ್ರಿಯಿಸಿ (+)