ಸವಿತಾ ಸಮಾಜ ನಿರ್ಲಕ್ಷ್ಯ ಸಲ್ಲ

ಗದಗ: ಕಾಂಗ್ರೆಸ್ ಸರ್ಕಾರ ರಾಜಕೀಯ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸವಿತಾ ಸಮಾಜವನ್ನು ನಿರ್ಲಕ್ಷಿಸಿದೆ ಎಂದು ರಾಜ್ಯ ಸವಿತಾ ಸಮಾಜದ ಹಿರಿಯ ಮುಖಂಡ ಯು.ಕೃಷ್ಣಮೂರ್ತಿ ಹೇಳಿದರು.
ನಗರದ ಗಂಗಾಪೂರ ಪೇಟೆಯ ದುರ್ಗಾದೇವಿ ಕಲ್ಯಾಣ ಮಂಟಪದಲ್ಲಿ ನಡೆದ ಜಿಲ್ಲಾ ಮಟ್ಟದ ಸವಿತಾ ಸಮಾಜ ಚಿಂತನ ಮಂಥನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದ ಬಾಂಧವರು ಆರು ದಶಕಗಳಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಬೆಂಬಲಿಸಿಕೊಂಡು ಬಂದಿದ್ದಾರೆ.
ಆದರೆ ಸಮಾಜದ ಒಬ್ಬರಿಗೂ ಈ ವರೆಗೂ ನಗರಸಭೆ, ನಿಗಮ, ಮಂಡಳಿಯಲ್ಲಿ ಅವಕಾಶ ನೀಡಿಲ್ಲ. ಸಚಿವ ಎಚ್.ಕೆ.ಪಾಟೀಲ ಸಮಾಜದ ಅಭಿವೃದ್ಧಿಗೆ ಗಮನ ಹರಿಸುತ್ತಿಲ್ಲ. ಎರಡು ವರ್ಷಗಳಿಂದ ಸಮಾಜದ ವಸತಿ ರಹಿತ ಜನರಿಗೆ ಆಶ್ರಯ ಯೋಜನೆ ಅಡಿಯಲ್ಲಿ ಮನೆ ವಿತರಿಸಬೇಕು ಎಂದು ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.
ಈಗಲಾದರೂ ಸಮಾಜದವರಿಗೆ ಮನೆ ನೀಡಬೇಕು ಹಾಗೂ ರಾಜಕೀಯ ಸ್ಥಾನಮಾನ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು. ಹಿರಿಯರಾದ ಎನ್.ಚಂದ್ರು ಮಾತನಾಡಿ, ಸವಿತಾ ಸಮಾಜದಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನರ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಸಂಘದ ರಾಜು ಗೌಡರ ಮಾತನಾಡಿ, ಜಿಲ್ಲೆಯಲ್ಲಿ ಸವಿತಾ ಸಮಾಜದ ಭದ್ರವಾಗಿ ಶ್ರಮಿಸಲು ಸಮುದಾಯ ಭವನ ನಿರ್ಮಾಣ ಮಾಡುವುದು ಅವಶ್ಯ ಎಂದು ಹೇಳಿದರು.
ಜಿಲ್ಲಾ ಅಧ್ಯಕ್ಷ ಜ್ಯೋತಿಕುಮಾರ ರಾಯಚೂರ, ರಾಮಣ್ಣ ರಾಂಪೂರ, ಜಗ್ನನಾಥ ಕ್ಷೀರಸಾಗರ, ಆಂಜನೇಯ ಅಧೋನಿ, ದೀಪಕ ರಾಯಚೂರ, ಪಂಪಣ್ಣ ರಾಯಚೂರ, ಯಲ್ಲಪ್ಪ ರಾಯಚೂರ, ಮಂಜುನಾಥ ಅರಪಲ್ಲಿ, ಶ್ರೀನಿವಾಸ ಬಾರಬಾರ, ಮಂಜುನಾಥ ಕಡಬೂರ, ಪರಮೇಶಪ್ಪ ಬಯಲಗುಡ್ಡ, ಪಾಂಡುರಂಗ ರಾಂಪೂರ, ಶ್ರೀನಿವಾಸ ವಲ್ಲೂರ,
ಮುರಳಿ ವಲ್ಲೂರ, ರಾಮಣ್ಣ ಗುರುಜಾಲಕರ, ಅಣ್ಣಪ್ಪ ರಾಂಪುರ, ವೆಂಕಟೇಶ ಬಯಲಗುಡ್ಡ, ಮಂಜುನಾಥ ಬಯಲಗುಡ್ಡ, ಆಂಜನೇಯ ರಾಂಪುರ, ರಾಮಚಂದ್ರ ರಾಂಪುರ, ಗಂಗಣ್ಣ ಗೌಡರ, ಗಿರಿರಾಜ ಕಡಬೂರ ಹಾಜರಿದ್ದರು.
***
ರಾಜ್ಯ ಸವಿತಾ ಸಮಾಜಕ್ಕೆ ಅಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಿ ಒಗ್ಗಟ್ಟು ಪ್ರದರ್ಶಿಸಬೇಕು.
-ವೆಂಕಟೇಶ ರಾಂಪೂರ, ಸಮಾಜದ ಮುಖಂಡ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.