ಗುರುವಾರ , ನವೆಂಬರ್ 14, 2019
19 °C

ಸವಿತಾ ಸಾವು: ಸಾಕ್ಷಿ ನುಡಿದ ಗೆಳತಿ

Published:
Updated:

ಲಂಡನ್ (ಪಿಟಿಐ): ಗರ್ಭಪಾತ ಮಾಡಲು ನಿರಾಕರಿಸ್ದ್ದಿದೇ ಭಾರತ ಮೂಲದ ದಂತ ವೈದ್ಯೆ ಸವಿತಾ ಹಾಲಪ್ಪನವರ ಸಾವಿಗೆ ಕಾರಣ ಎಂದು ಅವರ ಗೆಳತಿಯೊಬ್ಬರು ಐರ್ಲೆಂಡ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.ಐರ್ಲೆಂಡ್‌ನ ಗಾಲ್‌ವೇ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯ ಎರಡನೇ ದಿನ ಸಾಕ್ಷಿ ನುಡಿದ ಸವಿತಾ ಸ್ನೇಹಿತೆ ಮೃದುಲಾ ವಾಸ್‌ಪಲ್ಲಿ, ಗರ್ಭಪಾತ ಮಾಡುವಂತೆ ಮನವಿ ಮಾಡಿದ ಸಂದರ್ಭದಲ್ಲಿ ನರ್ಸ್ ಒಬ್ಬರು; `ಇಲ್ಲಿ ನಾವು ಅದನ್ನು ಮಾಡುವುದಿಲ್ಲ. ಇದು ಕ್ಯಾಥೋಲಿಕ್ ಧರ್ಮಕ್ಕೆ ವಿರುದ್ಧ'  ಎಂದು ಹೇಳಿದ್ದರು ಎಂಬುದಾಗಿ  ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)