ಸವಿಸವಿ ಈಚಲು

7

ಸವಿಸವಿ ಈಚಲು

Published:
Updated:

ಮಲೆನಾಡಿನ ಗುಡ್ಡ-ಬೆಟ್ಟಗಳಲ್ಲಿ ಇದೀಗ ಈಚಲು ಹಣ್ಣು ತನ್ನ ಹಳದಿ ಬಣ್ಣದಿಂದ ಎಲ್ಲರನ್ನು ಆಕರ್ಷಿಸುತ್ತಿದೆ. ಸುಮಾರು ಐದು ಅಡಿ ಎತ್ತರದ ಈಚಲು ಗಿಡದಲ್ಲಿ ಹಸಿರೆಲೆಗಳ ಮಧ್ಯೆ ಹಣ್ಣು ಕಂಗೊಳಿಸುತ್ತಿದೆ.ಇದು ಖರ್ಜೂರದಂತೆ ತಿನ್ನಲು ಬಲು ರುಚಿ. ಆದರೆ ಖರ್ಜೂರದ ಬೀಜಕ್ಕಿಂತ ದೊಡ್ಡದಾಗಿರುವುದರಿಂದ ಈ ಹಣ್ಣನ್ನು ಚೀಪುತ್ತ ರುಚಿ ಸವಿಯಬಹುದು. ಹಸಿರು ಬಣ್ಣದ ಕಾಯಿ ಹಣ್ಣಾದಂತೆ ಹಳದಿ ಬಣ್ಣಕ್ಕೆ ಪರಿವರ್ತನೆ ಆಗುತ್ತದೆ. ಈ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಇದು ತಂತಾನೇ ಬೆಳೆದು ಗುಡ್ಡ-ಬೆಟ್ಟಗಳ ಸೌಂದರ್ಯ ಹೆಚ್ಚಿಸುವುದು ಒಂದೆಡೆಯಾದರೆ ಇದನ್ನು ಬೆಳೆಯುವತ್ತ ಕೂಡ ಅನೇಕ ರೈತರು ಮುಂದಾಗಿದ್ದಾರೆ. ಗಿಡ-ಮರಗಳಲ್ಲಿ ಹಾರಾಡುವ ಹಕ್ಕಿ-ಪಕ್ಷಿಗಳಿಗೆ ಆಹಾರವಾಗಿರುವ ಈ ಹಣ್ಣು ತನ್ನ ನೈಜ ಸೌಂದರ್ಯದಿಂದ ಗಮನ ಸೆಳೆಯುತ್ತದೆ. ಈ ಸುಂದರಿಯತ್ತ ಗಮನ ಹರಿಸುವವರೇ ಕಮ್ಮಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry